ಮಾಡೂರು ಸರಕಾರಿ ಶಾಲಾ ಹಿತರಕ್ಷಣಾ ಸಮಿತಿ ಹಾಗೂ ಅರಸು ಫ್ರೆಂಡ್ಸ್ ಆಶ್ರಯದಲ್ಲಿಬಲ್ಯ ಬಾಳಿಕೆ ಅರಸು ಮಂಜಿಷ್ಣಾರ್ ದೈವಸ್ಥಾನದ ಮುಂಭಾಗದಲ್ಲಿರುವ ಬಾಕಿಮಾರ್ ಗದ್ದೆಯಲ್ಲಿಕೆಸರುಡೊಂಜಿ ದಿನ ಕಾರ್ಯಕ್ರಮ ನಡೆಯಿತು.ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಗಣೇಶ್ ಭಟ್ ಉದ್ಘಾಟಿಸಿ ಮಾತನಾಡಿ, ಸೇನಾನಿಗಳನ್ನು ಗೌರವಿಸಿರುವುದು, ಹಿಂದೂ ಮುಸ್ಲಿಂ ಸಮಾಜದವರು ಒಗ್ಗಟ್ಟಾಗಿ ಈ ಕಾರ್ಯಕ್ರಮದಲ್ಲಿಪಾಲ್ಗೊಂಡಿರುವುದು ಶ್ಲಾಘನೀಯ. ಭಾಷಣದಲ್ಲಿಹಿಂದೂ ಮುಸ್ಲಿಮರನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಏಕತೆಯಿಂದ ಇದ್ದು ಕಾರ್ಯಕ್ರಮ ಆಯೋಜನೆ ನಾವು ಮಾಡಬೇಕು ಎಂದರು.
ಉದ್ಯಮಿ ಪ್ರಕಾಶ್ ಕುಂಪಲ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಅಝೀಝ್ ಮಾಡೂರು ಮಾತನಾಡಿದರು. ಹರ್ಷರಾಜ್ ಮುದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚೀರುಂಬ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಹರೀಶ್ ರಾವ್ , ಮೋಹನ್ ಪೂಜಾರಿ, ಸದಾನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ, ನಿತೇಶ್ ಕುಮಾರ್ ಮಡ್ಯಾರ್ , ಕೌನ್ಸಿಲರ್ ಕಿರಣ್ ಕುಮಾರ್ , ಮಹೇಶ್ ರಾವ್ ಮಾಡೂರು, ವೇಣುಗೋಪಾಲ್ ಶೆಟ್ಟಿ, ಭಾಸ್ಕರ ಮಡ್ಯಾರ್ , ರಶೀದ್ ಮಾಡೂರು, ಶಶಿಧರ ಮಾಡೂರು, ಮುಖ್ಯ ಶಿಕ್ಷಕಿ ಪುಷ್ಪಾ, ಭವಾನಿ ದೇವದಾಸ್ ಹಾಗೂ ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.
ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಉಳ್ಳಾಲ ತಾಲೂಕು ವ್ಯಾಪ್ತಿಯ ವೀರ ಯೋಧರಾದ ಸದಾಶಿವ ಶೆಟ್ಟಿ, ರಾಜೇಶ್ ಕುಮಾರ್ , ಪ್ರಭಾಕರ್ , ವರ್ಗೀಸ್ , ಸುಧಾಕರ ಕುಂಪಲ, ಅಮ್ರಿಕ್ ಸಿಂಗ್ , ರಂಜಿತ್ ಆರ್ ., ಸುರೇಶ್ , ಪೂರ್ಣೇಶ್ ಬಿ.ಪಿ., ಹರಿಪ್ರಸಾದ್ ಕೆ. ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಹಾಗೂ ಊರವರಿಗೆ ನಾನಾ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸುಜಿತ್ ಮಾಡೂರು ಪ್ರಾಸ್ತಾವಿಕ ಮಾತುಗಳನ್ನಾಡಿ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಸುಜಾತಾ ಸ್ವಾಗತಿಸಿದರು. ಜೀವಿತ ವಂದಿಸಿದರು.