ವಿಕ ಸುದ್ದಿಲೋಕ ಕುಕನೂರುಪಟ್ಟಣದಲ್ಲಿಮೈ ಭಾರತ್ , ಮೇರಾ ಯುವ ಭಾರತ ಅಡಿ ವಿದ್ಯಾನಂದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿವಿಶೇಷ ನೋಂದಣಿ ಅಭಿಯಾನ ನಡೆಯಿತು.
ಜಿಲ್ಲಾಯುವ ಅಧಿಕಾರಿ ಮೇಘನಾ ಎಚ್ . ಮಾತನಾಡಿ, ‘‘ಮೈ ಭಾರತ್ ಯೋಜನೆ ಯುವಜನರಲ್ಲಿನಾಯಕತ್ವ ಗುಣ, ಸ್ವಯಂ ಸೇವಾ ಮನೋಭಾವ, ಕೌಶಲಾಭಿವೃದ್ಧಿ ಹಾಗೂ ಸಮುದಾಯ ಸೇವಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಯುವಜನರನ್ನು ರಾಷ್ಟ್ರ ನಿರ್ಮಾಣದಲ್ಲಿಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಪ್ರಾಂಶುಪಾಲ ಎನ್ . ಪಾಂಡುರಂಗ, ಸಂಸ್ಥಾನ ನೋಡಲ್ ಅಧಿಕಾರಿ ಆರ್ .ಕೆ. ಪಾಟೀಲ್ , ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.
---
ಕೆಪಿಎಲ್ 26ಕೆಕೆಎನ್ ಫೋಟೊ 3- ಕುಕನೂರಿನ ವಿದ್ಯಾನಂದ ಗುರುಕುಲ ಕಾಲೇಜನಲ್ಲಿಮೈ ಭಾರತ್ , ಮೇರಾ ಯುವ ಭಾರತ್ ಅಡಿ ವಿಶೇಷ ನೋಂದಣಿ ಅಭಿಯಾನದಲ್ಲಿಜಿಲ್ಲಾಯುವ ಅಧಿಕಾರಿ ಮೇಘನಾ ಎಚ್ . ಮಾತನಾಡಿದರು.