ಬದಲು ಯಾಮಿಬಾಲಿವುಡ್ ನ ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ‘ಕಹಾನಿ’ ಸಿನಿಮಾದ 3ನೇ ಭಾಗಕ್ಕೆ ನಟಿ ವಿದ್ಯಾ ಬಾಲನ್ ಪಾತ್ರಕ್ಕೆ ನಟಿ ಯಾಮಿ ಗೌತಮ್ ಆಯ್ಕೆಯಾಗುವ ಸಾಧ್ಯತೆ ಇದೆ. ಸುಜೊಯ್ ಘೋಷ್ ನಿರ್ದೇಶನದ ‘ ಕಹಾನಿ 3 ’ ಚಿತ್ರದಲ್ಲಿಹೊಸ ಕಥೆ ಇರಲಿದ್ದು, ಈಗಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಲಾವಿದರ ಆಯ್ಕೆ ನಡೆಯಲಿದೆ. ಹಾಗಾಗಿ ಈ ಬಾರಿ ಇದರಲ್ಲಿಯಾಮಿ ಗೌತಮ್ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ‘ಕಹಾನಿ’ ಸಿನಿಮಾಗಳಲ್ಲಿಅತ್ಯುತ್ತಮ ಅಭಿನಯ ತೋರಿದ್ದ ವಿದ್ಯಾ ಬಾಲನ್ ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದರು.