ಖಿನ್ನ ಮನಸ್ಸಿಗೆ ಸಾಂತ್ವನ

Contributed byshubha.hegde@timesgroup.com|Vijaya Karnataka
solutions and management for depressed minds
ನನಗೆ 51 ವರ್ಷ. ವೃತ್ತಿಯಲ್ಲಿಸಿವಿಲ್ ಎಂಜಿನಿಯರ್ . ಉದ್ಯಮ ನಡೆಸುತ್ತೇನೆ. ಇತ್ತೀಚೆಗೆ ನನಗೆ ಜ್ಞಾಪಕಶಕ್ತಿ ಮತ್ತು ಏಕಾಗ್ರತೆ ಕಡಿಮೆಯಾಗುತ್ತಿದೆ. ಆದರೆ ಅನಗತ್ಯ ಆಲೋಚನೆಗಳು ಕಾಡುತ್ತವೆ. ಈ ಸಮಸ್ಯೆಗೆ ಪರಿಹಾರವನ್ನು ನೀಡಿ. ರಾಜೇಶ್ , ಊರಿನ ಹೆಸರು ನಮೂದಿಸಿಲ್ಲ 51 ನೇ ವಯಸ್ಸಿನಲ್ಲಿಸಿವಿಲ್ ಎಂಜಿನಿಯರಿಂಗ್ ಕೆಲಸ ಮತ್ತು ಉದ್ಯಮ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿರುವುಧಿದರಿಂದ ನಿಮ್ಮ ಮನಸ್ಸು ಪ್ರತಿದಿನ ಹೊರೆಯನ್ನು ಹೊರುತ್ತಿದೆ. ಜ್ಞಾಪಕಶಕ್ತಿ ಕೊರತೆ, ಕಡಿಮೆ ಏಕಾಗ್ರತೆ ಮತ್ತು ಅತಿ ಚಿಂತೆಗಳು ಮರುಕಳಿಸುವ ಆತಂಕ ಮತ್ತು ವಿಶ್ರಾಂತಿ ಇಲ್ಲದೆ ದೀರ್ಘಕಾಲದ ಕೆಲಸದ ಒತ್ತಡದಿಂದ ಉಂಟಾಗುವ ಬರ್ನ್ ಔಟ್ . ಒಂದೇ ಕಂಪ್ಯೂಟರ್ ನಲ್ಲಿಸೈಟ್ ಡ್ರಾಯಿಂಗ್ ಗಳು, ಗ್ರಾಹಕರ ಕರೆಗಳು, ಹಣದ ಖಾತೆಗಳು ಹೀಗೆ ಭಾರಿ ತಂತ್ರಾಂಶಗಳನ್ನು ಒಟ್ಟಿಗೆ ಚಲಾಯಿಸಿದರೆ ಅದರ ಮೆಮೊರಿ ಓವರ್ ಲೋಡ್ ಆಗುತ್ತದೆ. ಯಾವುದೇ ಡೇಟಾ ಡಿಲೀಟ್ ಆಗದಿದ್ದರೂ ವಸ್ತುಗಳು ಬೇರೆ ಜಾಗದಲ್ಲಿಇಟ್ಟಂತೆ ಆಗುತ್ತವೆ. ಮನಸ್ಸಿನಲ್ಲೂಇದೇ ಸಂಭವಿಸುತ್ತದೆ. ಮನಸ್ಸು ಬಾಕಿ ಇರುವ ಕೆಲಸ ಅಥವಾ ಚಿಂತೆಯನ್ನು ಅಪೂರ್ಣಗೊಂಡ ಕೆಲಸ ಎಂದು ಪರಿಗಣಿಸುವುದರಿಂದ, ಆಲೋಚನೆಗಳು ಅತಿಯಾಗಿ ಕಾಡುತ್ತವೆ. ನಾವು ಅದನ್ನು ಮರೆಯಬಾರದು ಎಂದು ಅಲಾರಂನಂತೆ ಮತ್ತೆ ಮತ್ತೆ ನೆನಪಿಸುತ್ತಿರುತ್ತದೆ. ಆತಂಕ ಮತ್ತು ಬರ್ನ್ ಔಟ್ ನಲ್ಲಿಈ ಅಲಾರಂ ಅತಿಯಾಗಿ ಸಕ್ರಿಯಗೊಂಡು ಅಗತ್ಯವಿಲ್ಲದಿದ್ದಾಗಲೂ ಬಾರಿಸುತ್ತದೆ. ಇದು ಗಮನ, ಏಕಾಗ್ರತೆ ಮತ್ತು ನೆನಪುಗಳನ್ನು ದಾಖಲಿಸಿಕೊಳ್ಳುವುದಕ್ಕೆ ಅಡ್ಡಿಪಡಿಸುತ್ತದೆ. ಇದರಿಂದ ಜ್ಞಾಪಕಶಕ್ತಿಯ ಸಮಸ್ಯೆ ಇದ್ದಂತೆ ಭಾಸವಾಗುತ್ತದೆ. ಇದು ಸಾಮಾನ್ಯ ಸಮಸ್ಯೆಯಾಗಿದ್ದು, ನಿಮ್ಮ ದೌರ್ಬಲ್ಯವಲ್ಲ. ಮೌಲ್ಯಮಾಪನ, ಸಮಾಲೋಚನೆ, ವಿಶ್ರಾಂತಿ ತಂತ್ರಗಳು, ಅಗತ್ಯವಿದ್ದರೆ ಆತಂಕ-ನಿರೋಧಕ ಔಷಧ ಮತ್ತು ಉತ್ತಮ ಸುಧಾರಣೆಗಾಗಿ ಮನೋವೈದ್ಯರನ್ನು ಸಂಪರ್ಕಿಸಿ. ಪ್ರತಿದಿನ ನಿಮ್ಮ ಚಿಂತೆಗಳನ್ನು ಬರೆದಿಡಲು ಪ್ರಯತ್ನಿಸಿ. ಇದು ಹೆಚ್ಚಾಗಿ ಚಿಂತೆಗಳು ಮರುಕಳಿಸುವುದನ್ನು ಕಡಿಮೆ ಮಾಡುತ್ತದೆ. ನನಗೆ 66 ವರ್ಷ. ಹೃದಯ ಸಂಬಂಧಿ ಸಮಸ್ಯೆಗೆ ಎಂಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಪ್ರತಿದಿನ ನಿದ್ರೆಯ ಮಾತ್ರೆಯನ್ನೂ ತೆಗೆದುಕೊಳ್ಳುತ್ತಿದ್ದೇನೆ. ನಿದ್ರಿಸುವ ಅಭ್ಯಾಸವನ್ನು ಪಾಲಿಸುತ್ತೇನೆ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡುತ್ತೇನೆ, ಆದರೂ ನನ್ನ ದುರ್ಬಲ ಮನಸ್ಸಿನಿಂದಾಗಿ ನಿದ್ರಾಹೀನತೆಯಿಂದ ಬಳಲುತ್ತಿದ್ದೇನೆ. ನಿದ್ರೆಯ ಮಾತ್ರೆಗಳಿಲ್ಲದೆ ಆಳವಾದ ನಿದ್ರೆ ಪಡೆಯುವುದು ಹೇಗೆ? ನಿಂಗಪ್ಪ ಇಟ್ಟಿಗಿ, ದಾವಣಗೆರೆ ಹೃದಯ ಸಂಬಂಧಿ ಘಟನೆಗಳ ನಂತರ ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆಗಳು ಹೆಚ್ಚಾಗಿ ಆತಂಕ ಅಥವಾ ಖಿನ್ನತೆಗೆ ಕಾರಣವಾಗುತ್ತವೆ. ದೇಹವು ಸುಸ್ತಾಗಿದ್ದರೂ ನಿದ್ರೆಗೆ ಅಡಚಣೆ ಉಂಟುಮಾಡಬಹುದು. ಆತಂಕ ಅಥವಾ ಖಿನ್ನತೆಯು ವೈದ್ಯಕೀಯ ಸ್ಥಿತಿಯೇ ಹೊರತು ವ್ಯಕ್ತಿತ್ವದ ದೌರ್ಬಲ್ಯವಲ್ಲ, ಇದು ಸೂಕ್ತ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತದೆ. ನಿದ್ರೆಯ ಮಾತ್ರೆಗೆ ಸಂಬಂಧಿಸಿದಂತೆ ದೀರ್ಘಕಾಲದವರೆಗೆ ಪ್ರತಿದಿನ ತೆಗೆದುಕೊಳ್ಳುವ ಕೆಲವು ಮಾತ್ರೆಗಳಿದ್ದು, ದೇಹವು ಅಂಥವಕ್ಕೆ ಒಗ್ಗಿಕೊಳ್ಳಬಹುದು. ಮಿದುಳು ತನ್ನಷ್ಟಕ್ಕೆ ತಾನೇ ನಿದ್ರಿಸುವುದನ್ನು ನಿಲ್ಲಿಸಿ ಮಾತ್ರೆಗಳ ಮೇಲೆ ಅವಲಂಬಿತವಾಗಲು ಪ್ರಾರಂಭಿಸುತ್ತದೆ. ಆದ್ದರಿಂದ ಒಂದು ಡೋಸ್ ತಪ್ಪಿದರೂ ಸಹ ನಿದ್ರೆ ಬರುವುದಿಲ್ಲ. ಇಂತಹ ಮಾತ್ರೆಗಳನ್ನು ಎಂದಿಗೂ ಇದ್ದಕ್ಕಿದ್ದಂತೆ ನಿಲ್ಲಿಸಬಾರದು; ಉತ್ತಮ ದೀರ್ಘಕಾಲೀನ ಫಲಿತಾಂಶವನ್ನು ನೀಡುವ ಸಿಬಿಟಿ-ಐ ಥೆರಪಿಯೊಂದಿಗೆ ಮನೋವೈದ್ಯರ ಮಾರ್ಗದರ್ಶನದಲ್ಲಿಹಂತ ಹಂತವಾಗಿ ಕಡಿಮೆ ಮಾಡುವುದು ಅಗತ್ಯ. ಮಧ್ಯಾಹ್ನದ ನಂತರ ಕೆಫಿನ್ ಸೇವನೆಯನ್ನು ತಪ್ಪಿಸಿ. ಹಾಸಿಗೆಯನ್ನು ನಿದ್ರೆಗಾಗಿ ಮಾತ್ರ ಬಳಸಿ. ಹಗಲಿನಲ್ಲಿದೀರ್ಘ ನಿದ್ರೆಯನ್ನು ತಪ್ಪಿಸಿ ಮತ್ತು ಪ್ರತಿದಿನ ಬೆಳಗಿನ ಬಿಸಿಲಿಗೆ ಮೈಯೊಡ್ಡಿ. ಆತಂಕ ಅಥವಾ ಖಿನ್ನತೆಯ ಸರಿಯಾದ ಮೌಲ್ಯಮಾಪನಕ್ಕಾಗಿ ಮತ್ತು ನಿದ್ರೆಯ ಮಾತ್ರೆಯನ್ನು ಸುರಕ್ಷಿತವಾಗಿ ಕಡಿಮೆ ಮಾಡಲು ಮನೋವೈದ್ಯರನ್ನು ಸಂಪರ್ಕಿಸಿ.