ಪಠ್ಯೇತರ ಚಟುವಟಿಕೆಯಲ್ಲಿಭಾಗವಹಿಸಿ

Contributed byvk.singad@gmail.com|Vijaya Karnataka
extracurricular activities inspiring students
ಪಠ್ಯೇತರ ಚಟುವಟಿಕೆಯಲ್ಲಿಭಾಗವಹಿಸಿ

ವಿಕ ಸುದ್ದಿಲೋಕ ಕಮತಗಿ
‘‘ಶಿಕ್ಷಣದ ಜತೆಗೆ ಕ್ರೀಡೆ, ಕಲೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆ ಹೊಂದಬೇಕು,’’ ಎಂದು ನಿವೃತ್ತ ಉಪನ್ಯಾಸಕ ಶ್ರೀಶೈಲ ರಾಚಣ್ಣವರ ಹೇಳಿದರು.

ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿಹುಚ್ಚೇಶ್ವರ ಪ್ರೌಢಶಾಲೆಯ 2026-27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಲಿಂ.11ನೇ ಹುಚ್ಚೇಶ್ವರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ವಿದ್ಯಾರ್ಥಿ ಜೀವನದಲ್ಲಿಸಮಯಕ್ಕೆ ಮಹತ್ವ ನೀಡಬೇಕು. ಯಶಸ್ಸು ಸಾಧನೆಗೆ ಸಮಯದ ಪರಿಪಾಲನೆ ಅವಶ್ಯವಾಗಿದೆ. ಅಭ್ಯಾಸದ ಜತೆಗೆ ಸಂಗೀತ, ನೃತ್ಯ, ನಾಟಕ ಸೇರಿದಂತೆ ಇತರೆ ಕಲೆಗಳಿಗೂ ಆದ್ಯತೆ ನೀಡಬೇಕು,’’ ಎಂದರು.

ಗುಳೇದಗುಡ್ಡ-ಕೋಟೆಕಲ್ ಅಮರೇಶ್ವರ ಮಠದ ಡಾ.ನೀಲಕಂಠ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ,‘‘ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯ ಹಾಗೂ ಗುರು ಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಬೇಕು,’’ ಎಂದರು.

ಹುಚ್ಚೇಶ್ವರ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ವಿ.ಆರ್ . ಮಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗಂಗಪ್ಪ ಭೂತಲ, ಎಂ.ಬಿ. ಶಾಬಾದಿ, ಆರ್ .ಎಸ್ . ಭಾಪ್ರಿ, ಅನೀಲಕುಮಾರ ಹುಚ್ಚೇಶ್ವರಮಠ, ಮುಖ್ಯಗುರು ಎಚ್ .ಎಂ. ಪಾಟೀಲ ಮತ್ತಿತರರಿದ್ದರು.

23ಕೆಎಂಜಿ-01

ಕಮತಗಿ ಹುಚ್ಚೇಶ್ವರ ಪ್ರೌಢಶಾಲೆಯ 2026-27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಲಿಂ.11ನೇ ಹುಚ್ಚೇಶ್ವರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿನಿವೃತ್ತ ಉಪನ್ಯಾಸಕ ಶ್ರೀಶೈಲ ರಾಚಣ್ಣವರ ಅವರಿಗೆ ಗೌರವಿಸಲಾಯಿತು.