ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆಕ್ರೋಶ

Contributed byballekeremanju@gmail.com|Vijaya Karnataka
jds anger against congress mallenhalli mohans statement
ವಿಕ ಸುದ್ದಿಲೋಕ ಕೆ.ಆರ್ .ಪೇಟೆ

ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವಷ್ಟು ಮಟ್ಟಕ್ಕೆ ತಾಲೂಕಿನ ಯಾವೊಬ್ಬ ರಾಜಕಾರಣಿಗಳು ಬೆಳೆದಿಲ್ಲಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಹೇಳಿದರು.
ಪಟ್ಟಣದಲ್ಲಿತಾಲೂಕು ಜೆಡಿಎಸ್ ಘಟಕ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧದ ಪ್ರತಿಭಟನಾ ಸಭೆಯಲ್ಲಿಮಾತನಾಡಿದ ಅವರು,‘‘ನಮ್ಮ ಶಾಸಕರು ಜವಾಬ್ದಾರಿಯಿಂದ ಕ್ಷೇತ್ರದಲ್ಲಿಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷದಲ್ಲಿದ್ದರೂ ಅನುದಾನವನ್ನು ಸಮರ್ಪಕವಾಗಿ ಬಳಸಿ ಕಾಮಗಾರಿ ಮಾಡಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಅದರ ನಾಯಕರಿಗೆ ಕಾಳಜಿಯಿದ್ದರೆ ಶಾಸಕರ ಜತೆಯಲ್ಲಿಕೈಜೋಡಿಸಿ ಕೆಲಸ ಮಾಡಿ. ಇಲ್ಲದಿದ್ದರೆ ಸುಮ್ಮನಿರಲಿ. ನಮಗೆ ಹಾಗೂ ನಮ್ಮ ಪಕ್ಷಕ್ಕೆ ಮಾಜಿ ಶಾಸಕ ಚಂದ್ರಶೇಖರ್ ಅವರ ಮೇಲಷ್ಟೆ ಅಲ್ಲತಾಲೂಕಿನ ಜವಾಬ್ದಾರಿ ಹೊತ್ತು ಕೆಲಸ ಮಾಡಿರುವ ಎಲ್ಲರ ಮೇಲೂ ಗೌರವವಿದೆ. ಆದರೆ, ನಮ್ಮ ಪಕ್ಷದ ನಾಯರು ಅಥವಾ ಶಾಸಕರನ್ನು ನಿಂದಿಸಿದರೆ ಸಹಿಸುವುದಿಲ್ಲ,’’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ಹುಲ್ಲೇಗೌಡ ಮಾತನಾಡಿ, ‘‘ಕಾಂಗ್ರೆಸ್ ನವರು ಯಾವುದೇ ವಿಷಯವನ್ನು ಸಾರ್ವಜನಿಕವಾಗಿ ಹೇಳುವ ಮೊದಲು ಯೋಚಿಸಿ. ನಮ್ಮ ಶಾಸಕರು ಒಂದು ವೇಳೆ ಫುಡ್ ಪಾರ್ಕ್ ನವರ ಬಳಿ ಹಣ ಪಡೆದಿದ್ದರೆ ಸಾಬೀತುಪಡಿಸಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ನೀವು ರಾಜಕೀಯದಿಂದ ದೂರ ಉಳಿಯುತ್ತೀರಾ?,’’ ಎಂದು ಸವಾಲು ಹಾಕಿದರು.

ಜೆಡಿಎಸ್ ರಾಜ್ಯ ವಕ್ತಾರ ಅಶ್ವಿನ್ ಕುಮಾರ್ ಮಾತನಾಡಿ, ‘‘ನಿಖಿಲ್ ಕುಮಾರಸ್ವಾಮಿ ನಮ್ಮ ನಾಯಕರು. ಅವರು 3 ಬಾರಿ ಸೋತಿದ್ದರೂ ರಾಜ್ಯವನ್ನು ಸುತ್ತಿ ಜನರ ಕಷ್ಟ ಕೇಳುತ್ತಿದ್ದಾರೆ. ಆದರೆ, ನೀವೇನು ಮಾಡುತ್ತಿದ್ದೀರಿ? ಕೆ.ಆರ್ .ಪೇಟೆಯಲ್ಲಿದರ್ಪ, ದೌರ್ಜನ್ಯಕ್ಕೆ ಕಾಲ ಇಲ್ಲ. ಬಿಡದಿ ಟೌನ್ ಶಿಪ್ ವ್ಯಾಪ್ತಿಯಲ್ಲಿದೇವೇಗೌಡರ ಕುಟುಂಬದ ಆಸ್ತಿ 100 ಎಕರೆ ಇರೋದಾಗಿ ಹೇಳುತ್ತಿದ್ದೀರಿ. ಅದನ್ನು ಸಾಬೀತುಪಡಿಸಿದರೆ ನಿಮ್ಮ ಮನೆ ಮುಂದೆ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತೇನೆ,’’ ಎಂದು ಸವಾಲು ಹಾಕಿದರು.

ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಎ.ಆರ್ .ರಘು, ಕಾರ್ಯಾಧ್ಯಕ್ಷ ವಳಗೆರೆಮೆಣಸ ಮಹದೇವೇಗೌಡ, ದಿಶಾ ಸಮಿತಿ ಸದಸ್ಯ ನರಸನಾಯಕ್ , ರೈತಮೋರ್ಚಾ ತಾಲೂಕು ಉಪಾಧ್ಯಕ್ಷ ಬೇಲದಕೆರೆ ನಂಜಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಬಲದೇವ, ನಿರ್ದೇಶಕರಾದ ಕೆ.ಬಿ.ನಾಗೇಶ, ಕಿಕ್ಕೇರಿ ಮಧು, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪಶೆಟ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಾಮಚಂದ್ರ, ಐನೋರಹಳ್ಳಿ ಮಲ್ಲೇಶ್ , ಯುವ ಘಟಕದ ಅಧ್ಯಕ್ಷ ವಡ್ಡರಹಳ್ಳಿ ಮಹದೇವ್ , ಮುಖಂಡರಾದ ಕಿಕ್ಕೇರಿ ಶೇಖರ್ , ವಕೀಲ ಧನಂಜಯ, ಪುರಸಭಾ ಮಾಜಿ ಸದಸ್ಯ ಹೇಮಂತ್ ಕುಮಾರ್ , ಹೋಬಳಿ ಅಧ್ಯಕ್ಷರಾದ ಸ್ವಾಮೀಗೌಡ, ಸಂತೆಬಾಚಹಳ್ಳಿ ರವಿ, ಬಸವಲಿಗಪ್ಪ, ವಸಂತಕುಮಾರ್ ಸೇರಿದಂತೆ ಹಲವರಿದ್ದರು.

ಚಿತ್ರಶೀರ್ಷಿಕೆ: ಋಈ್ಗ22ಒಖಿಔಓ್ಕP3ಧಿ

ಕೆ.ಆರ್ .ಪೇಟೆಯಲ್ಲಿತಾಲೂಕು ಜೆಡಿಎಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಮಾತನಾಡಿದರು.