ಶ್ರೀಪಾಂಡುರಂಗಸ್ವಾಮಿ ರುಕುಮಾಬಾಯಿ ವಿಗ್ರಹಗಳಿಗೆ ವಿಶೇಷ ಪೂಜೆ

Contributed bymahadevakon@gmail.com|Vijaya Karnataka
special puja for shree pandurangaswamy and rukmabai
ಶ್ರೀಪಾಂಡುರಂಗಸ್ವಾಮಿ ರುಕುಮಾಬಾಯಿ ವಿಗ್ರಹಗಳಿಗೆ ವಿಶೇಷ ಪೂಜೆ

ವಿಕ ಸುದ್ದಿಲೋಕ ಮೊಳಕಾಲ್ಮುರು
ಪಟ್ಟಣದ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿಶನಿವಾರ ಆಷಾಢ ಶುದ್ಧ ಪ್ರಥಮ ಏಕಾದಶಿ ಪ್ರಯುಕ್ತ ಶ್ರೀ ಪಾಂಡುರಂಗಸ್ವಾಮಿ ರುಕುಮಾಬಾಯಿ ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರಥಮ ಏಕಾದಶಿ ಪ್ರಯುಕ್ತ ಪಾಂಡುರಂಗಸ್ವಾಮಿ ಹಾಗೂ ದುರ್ಗಾದೇವಿ ದೇವಸ್ಥಾನಗಳಲ್ಲಿಜುಲೈ 15ರಿಂದ 25ರವರೆಗೂ ಭಜನಾ ಕಾರ್ಯಕ್ರಮ ನಡೆಸಲಾಗಿತ್ತು.

ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿಶನಿವಾರ ಬೆಳಗ್ಗೆ ಶ್ರೀವಿಷ್ಣು ಸಹಸ್ರ ನಾಮಾವಳಿ, ಪೂರ್ವಕ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳಲ್ಲಿಹೆಚ್ಚಿನ ಸಂಖ್ಯೆಯ ಮಹಿಳೆಯರು ಪಾಲ್ಗೊಂಡಿದ್ದು ವಿಶೇಷ ಎನ್ನುವಂತ್ತಿತ್ತು. ಈ ವಿಶೇಷ ದಿನದ ಹಿನ್ನೆಲೆಯಲ್ಲಿಭಕ್ತರಿಗೆ ಗರ್ಭಗುಡಿ ಒಳಗೆ ಪ್ರವೇಶ ನೀಡಿ ಮೂರ್ತಿಗಳನ್ನು ಮುಟ್ಟಿ ನಮಸ್ಕರಿಸುವ ಅವಕಾಶ ನೀಡಲಾಗಿತ್ತು.

ದೇವಸ್ಥಾನ ಹೊರಗೆ ಮತ್ತು ಒಳಗಡೆ ಭಕ್ತರು ಸರದಿಯಲ್ಲಿನಿಂತು ವಿಶೇಷವಾಗಿ ಅಲಂಕರಿಸಿದ್ದ ದೇವರ ಪಾದಗಳನ್ನು ಮುಟ್ಟಿ ದರ್ಶನ ಪಡೆದರು. ಸಂಜೆ ಶ್ರೀಸ್ವಾಮಿಯ ಪಲ್ಲಕ್ಕಿ ಮಹೋತ್ಸವ ನಡೆಸಿದ ಭಕ್ತರು ಮಹಾಮಂಗಳಾರತಿ ಕೈಗೊಂಡ ನಂತರ ಪ್ರಸಾದ ವಿನಿಯೋಗ ಮಾಡಿದರು.

ಆಗಸ್ಟ್ 11ಕ್ಕೆ ವಿಶೇಷ ಪೂಜೆ:

ಪಟ್ಟಣದ ದುರ್ಗಾದೇವಿಯ ದೇವಸ್ಥಾನದಲ್ಲಿಆಗಸ್ಟ್ 11ರ ಬೆಳಗ್ಗೆ 7.30 ಗಂಟೆಗೆ ದೇವಿಗೆ ಆಕರ್ಷಕವಾಗಿ ಅಲಂಕಾರ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಆನಂತರ ಲಲಿತನಾಮ ಸಹಸ್ರನಾಮಾವಳಿ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕುಂಕುಮಾರ್ಚನೆ, ಭಜನೆ, ದೇವಿಯ ಉತ್ಸವ ನೆರವೇರಿಸಿ, ಮಹಾ ಮಂಗಳಾರತಿಯೊಂದಿಗೆ ಧಾರ್ಮಿಕ ಆಚರಣೆಗಳಿಗೆ ತೆರೆ ಎಳೆಯಲಾಗುವುದು ಎಂದು ದೇವಸ್ಥಾನ ಸಮಿತಿಯು ಪ್ರಕಟಣೆಯಲ್ಲಿತಿಳಿಸಿದೆ.

----

25 ಎಂಎಲ್ ಕೆ ಪಿ 1

ಮೊಳಕಾಲ್ಮುರಿನ ಪಾಂಡುರಂಗಸ್ವಾಮಿ ದೇವಸ್ಥಾನದಲ್ಲಿಶನಿವಾರ ಪ್ರಥಮ ಏಕಾದಶಿ ಪ್ರಯುಕ್ತ ಪಾಂಡುರಂಗಸ್ವಾಮಿ ಹಾಗೂ ರುಕುಮಾಬಾಯಿಯನ್ನು ವಿಶೇಷವಾಗಿ ಅಲಂಕರಿಸಿರುವುದು.