ರೆಡ್ಡಿ ಯುವ ಸಮಾವೇಶದಲ್ಲಿಒಗ್ಗಟ್ಟು ಪ್ರದರ್ಶನ

Contributed bychandruhiremath06@gmail.com|Vijaya Karnataka
reddy youth conference show of unity of all
*ಚಿತ್ರ:26ಜಿಎಲ್ ಬಿ13*

ನಗರದ ಜೈ ಭವಾನಿ ಹಾಲ್ ನಲ್ಲಿ‘ರೆಡ್ಡಿ ಯುವ ಸಮಾವೇಶದಲ್ಲಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
**

*ಚಿತ್ರ:26ಜಿಎಲ್ ಬಿ12*

‘ರೆಡ್ಡಿ ಯುವ ಸಮಾವೇಶದಲ್ಲಿಪಾಲ್ಗೊಂಡ ಜನಸ್ತೋಮ.

**

*ಮುಖ್ಯ ಅಂಶಗಳು*

*ಕಲ್ಯಾಣ ಭಾಗದ ಶಾಸಕ ಶರಣಬಸಪ್ಪ ದರ್ಶನಾಪುಗೆ ಮಂತ್ರಿ ಸ್ಥಾನ ನೀಡಬೇಕು.

*3ಎ ಸೌಲಭ್ಯಕ್ಕೆ ಸಂಘಟಿತ ಹೋರಾಟ ಅತ್ಯಗತ್ಯ

**

ರೆಡ್ಡಿ ಯುವ ಸಮಾವೇಶ , ಪ್ರತಿಭಾ ಪುರಸ್ಕಾರ ಆಯೋಜನೆ | ಸಾವಿರಾರು ಯುವಕರು ಭಾಗಿ (ಕಿಕ್ಕರ್ )

ರೆಡ್ಡಿ ಯುವ ಸಮಾವೇಶದಲ್ಲಿಒಗ್ಗಟ್ಟು ಪ್ರದರ್ಶನ

ವಿಕ ಸುದ್ದಿಲೋಕ ಕಲಬುರಗಿ

ರಾಜ್ಯದಲ್ಲಿಅಂದಾಜು 90ಲಕ್ಷ ರೆಡ್ಡಿ ಸಮಾಜದ ಜನಸಂಖ್ಯೆ ಇದೆ. ಈಗ ಸಮಾಜದ ಒಗ್ಗಟ್ಟಿನ ಶಕ್ತಿ ಅಗತ್ಯ ತುಂಬಾ ಇದೆ. ಹೀಗಾಗಿ ಒಳ ಪಂಗಡಗಳನ್ನು ಬದಿಗಿಟ್ಟು ‘ರೆಡ್ಡಿ ಬಂಧು ಎಲ್ಲಒಂದು’ ಎಂಬ ಒಗ್ಗಟ್ಟು ಭಾನುವಾರ ಹಮ್ಮಿಕೊಂಡಿದ್ದ ಬೃಹತ್ ಯುವ ರೆಡ್ಡಿ ಸಮಾವೇಶದಲ್ಲಿಮುಖಂಡರು ಪ್ರದರ್ಶಿಸಿದರು.

ನಗರದ ಜೈ ಭವಾನಿ ಹಾಲ್ ನಲ್ಲಿಜಿಲ್ಲಾರೆಡ್ಡಿ ಯುವಕರ ಸಂಘ, ಜಿಲ್ಲಾರೆಡ್ಡಿ ಸಮಾಜ, ಅಖಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ, ರೆಡ್ಡಿ ಜನ ಸಂಘ, ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘ, ಜಿಲ್ಲಾರೆಡ್ಡಿ ನೌಕರರ ಸಂಘ, ಹೇಮ-ವೇಮ ಟ್ರಸ್ಟ್ ದಿಂದ ಹಮ್ಮಿಕೊಂಡ ‘ರೆಡ್ಡಿ ಯುವ ಸಮಾವೇಶದಲ್ಲಿಮುಖಂಡರು ಒಗ್ಗಟ್ಟಿನ ಜಪ ಪಠಿಸಿದರು.

ಮಾಜಿ ಶಾಸಕಿ ಸೌಮ್ಯರೆಡ್ಡಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ರೆಡ್ಡಿ ಸಮಾಜದಲ್ಲಿಅಪಾರ ಜನಸಂಖ್ಯೆ ಇದ್ದರೂ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಒಳಪಂಗಡಗಳನ್ನು ಬದಿಗಿಟ್ಟು ಸಂಘಟಿತರಾಗುವುದು ಇಂದಿನ ತುರ್ತು ಅಗತ್ಯ ಎಂದು ಹೇಳಿದರು. ನಾವೆಲ್ಲರೂ ಹೇಮರೆಡ್ಡಿ ಮಲ್ಲಮ್ಮನ ತತ್ವ ಸಿದ್ಧಾಂತವನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು. ರೆಡ್ಡಿ ಸಮಾಜದಲ್ಲಿಹಿರಿಯರಾದ ಮಾಜಿ ಸಚಿವ ಶರಬಸವಪ್ಪ ದರ್ಶನಾಪುರ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ ಅವರ ಸಂಪುಟದಲ್ಲಿಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿ, ರಾಜ್ಯದಲ್ಲಿಸುಮಾರು 90ಲಕ್ಷ ಸಮಾಜದ ಜನಸಂಖ್ಯೆಯಿದೆ. ಆದರೆ, ಅದು ಅಲ್ಲಲ್ಲಿಹರಿದು ಹಂಚು ಹೋಗಿದೆ. ಅತ್ಯಂತ ಶ್ರೀಮಂತ ಇತಿಹಾಸ ಹೊಂದಿರುವ ರೆಡ್ಡಿ ಸಮಾಜದಲ್ಲಿಅಧಿಕಾರ, ನಾಯಕತ್ವ ಸಿಗುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿಸಚಿವರಾಗಿದ್ದ ಶರಣಬಸಪ್ಪ ದರ್ಶನಾಪುರ ಅವರಿಗೆ ಡಿಕೆಶಿ ಸಂಪುಟದಲ್ಲಿಯೂ ಅವಕಾಶ ಕೊಡಬೇಕು ಎಂದರು. ಸಮಾಜದ ಜನ 3ಎ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣದ ಸೌಲಭ್ಯ ಪಡೆದುಕೊಳ್ಳಲು ಹೋರಾಟ ಮಾಡಲು ನಾವೆಲ್ಲಒಂದಾಗಬೇಕಿದೆ. ಸಮಾಜ ಸಂಘಟಿತರಾದಾಗ ಮಾತ್ರ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪೂಜ್ಯ ವೇಮನಾನಂದ ಸ್ವಾಮೀಜಿ, ಶಂಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾರೆಡ್ಡಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಪ್ರೊ.ಚನ್ನಾರೆಡ್ಡಿ ಪಾಟೀಲ್ , ಮಾಜಿ ಉಪ ಮೇಯರ್ ಮಹೇಶ ಹೊಸೂರಕರ್ , ರಾಜಕೀಯ ಯುವ ಮುಖಂಡ ಕೃಷ್ಣಾರೆಡ್ಡಿ, ಶೇಖರರೆಡ್ಡಿ, ಎಂ.ಎ.ಕೃಷ್ಣಾರೆಡ್ಡಿ, ಬಾಬುರೆಡ್ಡಿ ಬೈರತಿ, ಶಂಕರರೆಡ್ಡಿ, ರಾಮರೆಡ್ಡಿ ಗೌಡ, ರಾಮಚಂದ್ರ ರೆಡ್ಡಿ, ನಾಗರೆಡ್ಡಿ ಮದನಾ ದೇಶಮುಖ, ಶರಣರೆಡ್ಡಿ ಪಾಟೀಲ್ , ಡಾ.ವಿಶಾಲಾಕ್ಷಿ ಕರಡ್ಡಿ, ಲಕ್ಷ್ಮೇಕಾಂತರೆಡ್ಡಿ ಪಲ್ಲಾ, ಸೂರ್ಯಕಾಂತರೆಡ್ಡಿ ವೈಜಾಪುರ, ಡಾ.ಹನುಮಂತರೆಡ್ಡಿ ಶೇರಿಕಾರ, ನಾಗಭೂಷಣ ರೆಡ್ಡಿ, ಕಿರಣರೆಡ್ಡಿ ಪಾಟೀಲ್ , ಸಾಯಬಣ್ಣ ರೆಡ್ಡಿ, ಬಸವರಾಜ ರೆಡ್ಡಿ, ಯುವರೆಡ್ಡಿ, ಶಂಕರಬಾಬು ರೆಡ್ಡಿ, ಸಮಾಜದ ಪದಾಧಿಕಾರಿಗಳು ಇದ್ದರು. ಶಿವಲಿಂಗರೆಡ್ಡಿ ಗೌಡ ಬೆನಕನಹಳ್ಳಿ ಪ್ರಾಸ್ತಾವಿಕ ಸ್ವಾಗತಿಸಿದರು. ಡಾ.ಅಮರಮ್ಮ ಪಾಟೀಲ್ ಪ್ರಾರ್ಥಿಸಿದರು. ಡಾ.ಭಾಗ್ಯಲಕ್ಷ್ಮೇ, ಜಿ.ಜಿ.ವಣಿಕ್ಯಾಳ ನಿರೂಪಿಸಿದರು.

*ಬಾಕ್ಸ್ *

ರೆಡ್ಡಿ ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಯಲಿ

ಹಿಂದಿನಿಂದಲೂ ಕೃಷಿ ಅವಲಂಬಿತವಾದ ರೆಡ್ಡಿ ಸಮಾಜದ ಜನ ಶ್ರೀಮಂತರಾದರೂ ವರ್ಷಗಳು ಉರುಳಿದಂತೆ ಬಡತನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈಗಲೂ ಕೃಷಿಯನ್ನೇ ನೆಚ್ಚಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಾಜದ ಜನ ಮುಂದೆ ಬರಲು ಶಿಕ್ಷಣ ಪಡೆಯುವತ್ತ ಗಮನ ಹರಿಸಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ರೆಡ್ಡಿ ಯುವ ಸಮಾಜದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೆಡ್ಡಿ ಬಂಧು ಎಲ್ಲಒಂದು ಎಂದು ರೆಡ್ಡಿ ಉಪಪಂಗಡಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಮನೋಭಾವ ಬೆಳೆಸಿಕೊಳ್ಳಲು ಸಮಾಜದಿಂದ ಈ ಸಮಾವೇಶ ಏರ್ಪಡಿಸಲಾಗಿದೆ. ಸಣ್ಣಪುಟ್ಟ ವಿವಾದಗಳನ್ನು ಬದಿಗಿಟ್ಟು ರೆಡ್ಡಿ ಸಮಾಜ ವನ್ನು ಒಗ್ಗೂಡಿಸಲು ಎಲ್ಲರೂ ಮುಂದೆ ಬರಬೇಕು. ರಾಷ್ಟಕೂಟ ಸಾಮ್ರಾಜ್ಯ ಕಟ್ಟಿದವರೂ ರೆಡ್ಡಿಗಳು. ರೆಡ್ಡಿ ಸಮಾಜ ಎಂದಿಗೂ ಕೈಚಾಚಿ ಬೇಡಿಲ್ಲ. ಆದರೆ, ಎಂದಿಗೂ ನೀಡಿದ ಸಮಾಜವಾಗಿದೆ. ಸಮಾಜದ ಪ್ರಮುಖರು ಎಲ್ಲಕ್ಷೇತ್ರಗಳಲ್ಲಿಯೂ ಇದ್ದಾರೆ. ಹಳ್ಳಿಗಳಲ್ಲಿಜನ ಜಾಗೃತರಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಾಧನೆ ಮಾಡಲು ಶ್ರಮಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

*ಕೋಟ್ *

ಗ್ರಾಮೀಣ ಭಾಗದಲ್ಲಿಸಮಾಜದ ಒಗ್ಗಟ್ಟಿನ ಕಾರ್ಯಕ್ರಮಗಳಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ರೆಡ್ಡಿ ಸಮಾಜ ಹೊರ ಜಗತ್ತಿಗೆ ಗೊತ್ತಾಗಬೇಕಿದೆ. ಸಮಾಜದ ಜನ ಜಾಗೃತರಾಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿಯುವಕರಲ್ಲಿಜಾಗೃತಿ ಮೂಡಿಸಲು ಯುವ ಸಮಾವೇಶ ಆಯೋಜಿಸಲಾಗಿದೆ.

-ವಿಶ್ವಕಾಮರೆಡ್ಡಿ ಗೋಟೂರ,ಅಧ್ಯಕ್ಷರು ಜಿಲ್ಲಾರೆಡ್ಡಿ ಯುವಕರ ಸಂಘ

**

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

2025-26ನೇ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿಶೇ.90ರಷ್ಟು ಅಂಕ ಪಡೆದ ರೆಡ್ಡಿ ಸಮಾಜದ 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಇದೇ ವೇಳೆ ಸಮಾಜದ ಸಾಧಕರಾದ ಶಿವಶರಣರೆಡ್ಡಿ ಕೆ ಕಾಳಗಿ (ಕೃಷಿ ಕ್ಷೇತ್ರ), ವಿಜಯಭಾಸ್ಕರ ರೆಡ್ಡಿ (ಸಾಹಿತ್ಯ ಮತ್ತು ಕಲೆ), ಶೈಲರೆಡ್ಡಿ ಮರಪಳ್ಳಿ (ಕಾನೂನು ಕ್ಷೇತ್ರ), ನಾಗೇಂದ್ರ ಹೊಕ್ರಾಣಿ (ಉದ್ಯಮ ಕ್ಷೇತ್ರ) ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.