ವಿಕ ಸುದ್ದಿಲೋಕ ಚಿಕ್ಕಮಗಳೂರುಒಬ್ಬ ವ್ಯಕ್ತಿ ಅಥವಾ ಮೌಲಿಕ ವ್ಯಕ್ತಿತ್ವವೊಂದು ನಮ್ಮಿಂದ ದೂರವಾದಾಗ ಅವರಿಗೆ ಎಷ್ಟೇ ವರ್ಷವಾಗಿದ್ದರೂ ಅವರು ಇನ್ನೂ ಬದುಕಿರಬೇಕಿತ್ತು ಎನಿಸುತ್ತದೆ ಅಂತಹ ವ್ಯಕ್ತಿತ್ವ ಎಸ್ .ಜಾನಕಿ ಅವರದ್ದಾಗಿತ್ತು ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಹೇಳಿದರು.
ಪೂರ್ವಿ ಸಗಮ ಸಂಗೀತ ಅಕಾಡೆಮಿ ಟ್ರಸ್ಟ್ , ಯುರೇಕಾ ಅಕಾಡೆಮಿ, ಬ್ರಾಹ್ಮಣ ಮಹಾಸಭಾ, ಸಾಂಸ್ಕೃತಿಕ ಸಂಘ, ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ , ಲಯನ್ಸ್ ಮತ್ತಿತರೆ ಸಂಘ, ಸಂಸ್ಥೆಗಳ ಸಹಯೋಗದಲ್ಲಿನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿಭಾನುವಾರ ಹಮ್ಮಿಕೊಂಡಿದ್ದ ಗಾನಕೋಗಿಲೆ ಎಸ್ .ಜಾನಕಿ ಸ್ವರ ನಮನ ಕಾರ್ಯಕ್ರಮದಲ್ಲಿಅವರು ಅಭಿನಂದನಾ ನುಡಿಗಳನ್ನಾಡಿದರು.
ಎಸ್ .ಜಾನಕಿ ಅವರು ಭೌತಿಕವಾಗಿ ದೂರವಾಗಿದ್ದಾರೆ ವಿನಹ ಅವರ ಸಾಧನೆ ಮತ್ತು ಹಾಡುಗಳ ಮೂಲಕ ಅವರು ನಮ್ಮ ಜತೆಯೆ ಇರುತ್ತಾರೆ. ಅವರನ್ನು ಎಂದಿಗೂ ನಾವು ಮರೆಯಲು ಸಾಧ್ಯವಿಲ್ಲ. ಎಳೆ ವಯಸ್ಸಿನಲ್ಲೇ ಅವರು ಶಾಸ್ತ್ರೀಯ ಸಂಗೀತ ಕಲಿಯದೆ ಸಾಧನೆ ಮಾಡಿದ ಸಾಧಕಿ. ಅಂತಹ ಒಬ್ಬ ಮೇರು ಗಾಯಕಿ 17 ಭಾಷೆಯಲ್ಲಿ48 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಸರಳತೆ ಮೈಗೂಡಿಸಿಕೊಂಡಿದ್ದ ಎಸ್ .ಜಾನಕಿಗೆ ಅವರ ಬದುಕಿನ ಪದಕೋಶದಲ್ಲಿಅಹಂಕಾರ ಎಂಬ ಪದವೇ ಇರಲಿಲ್ಲ. ಅವರು ಪ್ರಶಸ್ತಿಯನ್ನು ಹಿಂಬಾಲಿಸಿದವರಲ್ಲಅವರನ್ನೇ ಅರಸಿ ಪ್ರಶಸ್ತಿಗಳು ಬರುತ್ತಿದ್ದವು ಎಂದು ಹೇಳಿದರು.
ಶಾಸಕ ಎಚ್ .ಡಿ.ತಮ್ಮಯ್ಯ ಮಾತನಾಡಿ, ದಕ್ಷಿಣ ಭಾರತದ ಕೋಗಿಲೆ ಎಂದೇ ಖ್ಯಾತರಾದ ಎಸ್ .ಜಾನಕಿ ಅವರು ಹಾಡದ ಯಾವುದೇ ಭಾಷೆಯಿಲ್ಲಎನಿಸುತ್ತದೆ. 1957ರಿಂದ 2017ರವರೆಗೆ 6 ದಶಕಗಳ ಕಾಲ ತನ್ನ ದನಿಯನ್ನು ಚೆನ್ನಾಗಿ ಇಟ್ಟುಕೊಂಡು ನಿರಂತರವಾಗಿ ಹಾಡಿದ ಮಹಾಸಾಧಕಿ ಎಂದು ಹೇಳಿದರು.
ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಗಾಯಕಿ ಎಸ್ .ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ದೀಪಕ್ ದೊಡ್ಡಯ್ಯ, ಎಂ.ಎಸ್ .ಸುಧೀರ್ , ಎಚ್ .ಎನ್ .ನಂಜೇಗೌಡ, ಡಾ.ಸುಬ್ಬರಾಯ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ, ಲಯನ್ಸ್ ಜಿ.ರಮೇಶ್ ಮತ್ತಿತರೆ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಸುಮಾ ಪ್ರಸಾದ್ ನಿರೂಪಿಸಿ, ಉಜ್ವಲ್ ಪಡುಬಿದ್ರೆ ವಂದಿಸಿದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್ .ಸುಧೀರ್ ಸಾರಥ್ಯದಲ್ಲಿಪೂರ್ವಿ ಗಾಯಕರು ಎಸ್ .ಜಾನಕಿ ಅವರ ಹಾಡುಗಳನ್ನು ಸುಮಧುರವಾಗಿ ಹಾಡಿ ರಂಜಿಸಿದರು.
ಫೋಟೋ 26ರುದ್ರಯ್ಯ-ಪಿ6
ಚಿಕ್ಕಮಗಳೂರಿನಲ್ಲಿನಡೆದ ಎಸ್ .ಜಾನಕಿ ಸ್ವರ ನಮನ ಕಾರ್ಯಕ್ರಮದಲ್ಲಿಗಣ್ಯರು ಎಸ್ .ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.