ಖಾನಾಪುರ: ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಗುಂಜಿ ಗ್ರಾಮದ ಮನೆಯೊಂದರ ಶೌಚಾಲಯದಲ್ಲಿಚಿರತೆ ರಾತ್ರಿ ಕಳೆದು ಬೆಳಗ್ಗೆ ಓಡಿಹೋಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದ್ದು, ಸ್ಥಳದಲ್ಲಿಯಾವುದೇ ಕುರುಹು ಲಭ್ಯವಾಗಿಲ್ಲ. ಹೀಗಾಗಿ ಶೌಚಾಲಯದ ಬಳಿ ಚಿರತೆ ಕಂಡಿರುವುದು ಕೇವಲ ವದಂತಿ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, ‘‘ಈಚೆಗೆ ಚಿರತೆ ಗುಂಜಿ ಹಾಗೂ ಅಕ್ಕಪಕ್ಕದ ಪ್ರದೇಶದಲ್ಲಿಕಾಣಿಸಿಕೊಂಡಿಲ್ಲ. ಗುಂಜಿ ಗ್ರಾಮದ ಜನರು ಸುಳ್ಳು ವದಂತಿ ನಂಬಿ ರಾತ್ರಿ ಪಟಾಕಿ ಸಿಡಿಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು,’’ ಎಂದು ಇಲಾಖೆ ಮನವಿ ಮಾಡಿದೆ.