ಇಂದು, ನಾಳೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯ

Contributed byDHANANJAYAGOWDA|Vijaya Karnataka
power supply disruption in bangalore city july 28 and 29
ವಿಕ ಸುದ್ದಿಲೋಕ ಬೆಂಗಳೂರು

ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿಜು.28 ಮತ್ತು 29ರಂದು ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿವ್ಯತ್ಯಯ ಉಂಟಾಗಲಿದೆ.
ಜು.28ರಂದು ಪುರವಂಕರ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ಹಳೇಹಳ್ಳಿ, ಮಾರಗೊಂಡನಹಳ್ಳಿ, ಕಲ್ಕೆರೆ ರಸ್ತೆ, ಬೈರತಿ ಗ್ರಾಮ, ಕನಕಶ್ರೀ ಲೇಔಟ್ , ಆತ್ಮ ವಿದ್ಯಾನಗರ, ಬೈರತಿ, ಗುಬ್ಬಿ ಕ್ರಾಸ್ , ಬೈರತಿ ಬಂಡೆ, ಕ್ಯಾಲಸನಹಳ್ಳಿ, ಪುರವಂಕರ ಅಪಾರ್ಟ್ ಮೆಂಟ್ , ಪೂರ್ಣ ಪ್ರಜ್ಞಾ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜು.29ರಂದು ಕಟ್ಟಿಗೇನಹಳ್ಳಿ ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ, ಉತ್ತರ ಗೇಟ್ 1, 2,3, ರಾಯಭಾರ ಕಚೇರಿ, ಫಿಲಿಫ್ಸ್ ಕಂಪನಿ, ದ್ವಾರಕಾನಗರ, ಬಾಬಾನಗರ, ಕಟ್ಟಿಗೇನಹಳ್ಳಿ, ಬಾಗಲೂರು ಕ್ರಾಸ್ , ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, ವಿನಾಯಕನಗರ ಸುತ್ತಲಿನ ಪ್ರದೇಶಗಳಲ್ಲಿವಿದ್ಯುತ್ ಪೂರೈಕೆಯಲ್ಲಿವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ಪ್ರಕಟಣೆ ತಿಳಿಸಿದೆ.