ಗಣತಿ ನಮೂನೆ ಡಿಜಿಟಲೀಕರಣ

Contributed byrathodjayakumar92@gmail.com|Vijaya Karnataka
voter list digitization and recruitment interview special information from hospet
ಗಣತಿ ನಮೂನೆ ಡಿಜಿಟಲೀಕರಣ

ಹೊಸಪೇಟೆ (ವಿಜಯನಗರ):
ಜಿಲ್ಲೆಯ ಐದು ತಾಲೂಕಿನಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐಆರ್ ) ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಈವರೆಗೆ ಒಟ್ಟು 11,42,732 ಇ ಫಾಮ್ ರ್ ನಮೂನೆಗಳನ್ನು ಒಟ್ಟು 1234 ಮತಗಟ್ಟೆ ಅಧಿಕಾರಿಗಳು ಶೇ.100 ರಷ್ಟು ಗಣತಿ ನಮೂನೆಗಳ ವಿತರಿಸಿದ್ದಾರೆ.

ಜೂನ್ 30 ರಿಂದ ಅಭಿಯಾನ ಪ್ರಾರಂಭವಾಗಿದ್ದು, ಆಗಸ್ಟ್ 8 ರವರೆಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಹಾಗೂ ಡಿಜಿಟಲೀಕರಣ ಪ್ರಕ್ರಿಯೆ ನಡೆಯಲಿದೆ.

ವಿತರಿಸಲಾದ ಗಣತಿ ನಮೂನೆಗಳ ಪೈಕಿ ಒಟ್ಟು 949502 (ಶೇ.83.09) ನಮೂನೆಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಇದಲ್ಲದೆ 2970 (ಶೇ. 0.26) ಮತದಾರರು ಸ್ವತಃ ಆನ್ ಲೈನ್ ಮೂಲಕ ನಮೂನೆಗಳನ್ನು ಸಲ್ಲಿಸಿದ್ದಾರೆ.

ಬಿಎಲ್ ಒಗಳ ಪರಿಶೀಲನೆ ವೇಳೆ ಜಿಲ್ಲೆಯಲ್ಲಿ30443 ಮೃತ ಮತದಾರರು ಹಾಗೂ ಕಾಯಂ ಆಗಿ ಸ್ಥಳಾಂತರಗೊಂಡಿರುವ 39408 ಮತದಾರರರನ್ನು ಗುರುತಿಸಲಾಗಿದೆ. ಅಲ್ಲದೇ ಈಗಾಗಲೇ 12,722 ದಾಖಲಾಗಿರುವವರು ಹಾಗೂ 4173 ಜನ ಸಂಪರ್ಕಕ್ಕೆ ಸಿಗದ ಅಥವಾ ಅಲಭ್ಯವಿರುವ ಮತದಾರರನ್ನು ಗುರುತಿಸಿ ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್ . ಮನ್ನಿಕೇರಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ): ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಅಧೀನ ಸಂಸ್ಥೆಗಳಲ್ಲಿಖಾಲಿ ಇರುವ 15 ಶುಶ್ರೂಷಧಿಕಾರಿಗಳ ಹುದ್ದೆಗೆ 1 ವರ್ಷದ ಗುತ್ತಿಗೆ ಆಧಾರದಡಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಿದ ಆರ್ಹ ಅಭ್ಯರ್ಥಿಗಳಿಗೆ ಆಗಸ್ಟ್ 6 ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿನೇರ ಸಂದರ್ಶನ ಏರ್ಪಡಿಸಲಾಗಿದೆ. 15 ಶುಶ್ರೂಷಕ ಹುದ್ದೆಗಳಲ್ಲಿ12 ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ, ಉಳಿದ 3 ಹುದ್ದೆಗಳು ಕಲ್ಯಾಣ ಕರ್ನಾಟಕ ಹೊರತುಪಡಿಸಿದ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಮತ್ತು ಇತರೆ ದಾಖಲೆಗಳ ಮೂಲ ಪ್ರತಿ ಒಂದು ಜತೆ ದೃಢೀಕೃತ ನಕಲು ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.

ಅವಧಿ ವಿಸ್ತರಣೆ

ಹೊಸಪೇಟೆ (ವಿಜಯನಗರ): ಸಿಇಪಿಎಂಐಜೆಡ್ ಯೋಜನೆಯಡಿ ಹೊಸಪೇಟೆ ತಾಲೂಕಿನ ಗಣಿಬಾಧಿತ ಗ್ರಾಮಗಳಲ್ಲಿಎರಡು ಮಿಶ್ರತಳಿ ಹಸು ಹಾಗೂ ಉನ್ನತೀಕರಿಸಿದ ಎಮ್ಮೆ ಸಾಕಣೆಗೆ ಸಹಾಯ ಧನಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಆಗಸ್ಟ್ 13 ರವರೆಗೆ ವಿಸ್ತರಿಸಲಾಗಿದೆ.

ಈ ಯೋಜನೆಯನ್ನು ಕೆ.ಎಂ.ಇ.ಆರ್ .ಸಿ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸಲು ಜಿ.ಪಿ.ಎಲ್ .ಎಫ್ ಘಟಕದ ನೋಂದಾಯಿತ ಸಕ್ರಿಯ ಎಸ್ .ಎಚ್ .ಜಿ ಸದಸ್ಯರುಗಳು ಇಲಾಖೆ ವೆಬೈ್ಸಟ್ ಡಿಡಿಡಿ.vಜ್ಜಿaya್ಞaಜa್ಟa.್ಞಜ್ಚಿ.ಜ್ಞಿ ಮೂಲಕ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಸಂಬಂಧಿತ ಗ್ರಾಪಂ ಜಿಪಿಎಲ್ ಎಫ್ ಗಳನ್ನು ಸಂಪರ್ಕಿಸಬಬೇಕು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.