ಮೇಷ : ಸತತ ಪರಿಶ್ರಮದ ಜೊತೆ ವರಿಷ್ಠರ ಸಹಾಯ ಸೇರಿಕೊಂಡು ರಾಜಕೀಯ ಪಕ್ಷದಲ್ಲಿಉನ್ನತ ಹುದ್ದೆ ಪ್ರಾಪ್ತಿಯಾಗಲಿದೆ. ಮನೆಯಲ್ಲಿಅತಿಥಿ ಸತ್ಕಾರ ನಡೆಯಲಿದೆ. ದೇವರ ಕೃಪೆಯಿಂದ ನಿರೀಕ್ಷೆಗೂ ಮೀರಿದ ಜಯ ಸಿಗಲಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೆಂಪು)
------------
ವೃಷಭ : ಇಂದು ನೀವು ಹೊಸ ಪ್ರಯೋಗಗಳನ್ನು ಮಾಡುವ, ಕಲಿಯುವ ಅವಕಾಶ ಸಿಗಲಿದೆ. ದುರಂಹಕಾರ ವ್ಯಕ್ತಪಡಿಸಿದಲ್ಲಿನೀವು ತೊಂದರೆಗೆ ಸಿಲುಕುವ ಸಂಭವವಿದೆ. ಹಣಕಾಸಿನ ವಿಚಾರದಲ್ಲಿಎಚ್ಚರಿಕೆಯಿಂದ ಇರಿ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ನೀಲಿ)
-----------
ಮಿಥುನ : ಏಕಕಾಲದಲ್ಲಿಸಾಕಷ್ಟು ಕೆಲಸಗಳನ್ನು ಮಾಡುವ ಪ್ರಯತ್ನದಿಂದ ಎಲ್ಲದರಲ್ಲೂಅಪಕೀರ್ತಿ ಉಂಟಾಗಬಹುದು. ಆದ್ದರಿಂದ ಒಂದು ಕೆಲಸವನ್ನು ಮುಗಿಸಿ ನಂತರ ಮತ್ತೊಂದರ ಬಗ್ಗೆ ಯೋಚಿಸಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಸಿರು)
---------
ಕರ್ಕ : ಕೆಲಸವನ್ನು ಮಾಡುವಾಗ ಮೊದಲಿನಿಂದ ಕಡೆಯ ತನಕವೂ ಒಂದೇ ರೀತಿಯಾಗಿ ಗಮನವನ್ನು ನೀಡಿ. ಶತ್ರುಗಳ ವಿರುದ್ಧ ಸನ್ಮಾರ್ಗದ ಸೇಡನ್ನು ತೀರಿಸಿಕೊಳ್ಳಲು ಉತ್ತಮ ಸಮಯಾವಕಾಶ, ಆಸ್ಪದ ಸಿಗುವುದು.
ಕನ್ಯಾ : ಆಲಸ್ಯವನ್ನು ದೂರ ಮಾಡಿಕೊಂಡು ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದನ್ನು ಅಭ್ಯಸಿಸಿ. ಹಿರಿಯರು ನಿಮ್ಮ ತಪ್ಪುಗಳನ್ನು ಹೇಳಿದಾಗ ಒಪ್ಪಿಕೊಳ್ಳುವ ಮನಃಸ್ಥಿತಿ ರೂಢಿಸಿಕೊಳ್ಳಿ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಬೂದು)
--------
ತುಲಾ : ಮಗ ಅಥವಾ ಮಗಳ ಆರೋಗ್ಯದ ವಿಚಾರವಾಗಿ ಆಸ್ಪತ್ರೆಗೆ ತಿರುಗಾಡುವ ಪರಿಸ್ಥಿತಿ ಬರುತ್ತದೆ. ಸಂಬಂಧಿಕರ ಮಾತುಗಳು ಬೇಸರವನ್ನು ತರಬಹುದು. ದೈಹಿಕ ಆಯಾಸವಾಗುವುದರಿಂದ ಕೆಲಸ ಬೇಗ ಮುಗಿಸಿ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಕಪ್ಪು)
--------
ವೃಶ್ಚಿಕ : ಸಂಗಾತಿಯೊಂದಿಗಿನ ಸಂಬಂಧವನ್ನು ಭದ್ರ ಮಾಡಿಕೊಳ್ಳಲು ನಿಮ್ಮ ಬಿಡುವಿಲ್ಲದ ಸಮಯದಲ್ಲೂಸ್ವಲ್ಪ ಸಮಯ ನೀಡುವ ಪ್ರಯತ್ನ ಮಾಡಿ. ಬಂಧುಗಳಿಂದ ಉಡುಗೊರೆಯ ರೂಪದಲ್ಲಿದ್ರವ್ಯ ಲಾಭವಾಗುವುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ನೀಲಿ)
-----
ಧನು : ಸ್ನೇಹಿತರು ವಂಚನೆ ಮಾಡುವ ಪ್ರಸಂಗವಿದೆ. ಸ್ವಯಂ ತೀರ್ಮಾನದಿಂದ ತೆಗೆದುಕೊಳ್ಳುವ ಔಷಧದಿಂದಲೇ ಆರೋಗ್ಯದಲ್ಲಿಏರುಪೇರುಗಳಾಗುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕೇಸರಿ)
--------
ಮಕರ : ಕಬ್ಬಿಣ, ಸೀಮೆಂಟ್ ವ್ಯಾಪಾರಿಗಳಿಗೆ ಒಳ್ಳೆಯ ಆದಾಯ ದೊರೆಯುತ್ತದೆ. ವ್ಯವಹಾರದಲ್ಲಿಸಹೋದರನನ್ನು ಸೇರಿಸಿಕೊಳ್ಳುವ ಬಗ್ಗೆ ಮೊದಲೇ ಯೋಚಿಸಿ. ಹೂಡಿಕೆಯಲ್ಲಿಬಹಳ ಬುದ್ಧಿವಂತಿಕೆಯನ್ನು ಉಪಯೋಗಿಸಬೇಕಾಗುತ್ತದೆ.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಗುಲಾಬಿ)
----------
ಕುಂಭ : ವಿಶೇಷವಾಗಿ ಮಹಿಳೆಯರು ಋುಣಾತ್ಮಕ ಚಿಂತನೆ ಮಾಡುವುದರಿಂದಾಗಿ ಆರೋಗ್ಯ ಹಾಳಾಗುವ ಲಕ್ಷಣವಿದೆ. ಅಕ್ಕ-ತಂಗಿಗಾಗಿ ಹಣ ಮತ್ತು ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು.
(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಸಿಂಧೂರ ಕೆಂಪು)
--------
ಮೀನ : ನಾನಾ ವಿಧವಾದ ಆದಾಯ ಮೂಲಗಳಿಂದ ಆರ್ಥಿಕ ತಳಪಾಯ ಭದ್ರವಾಗುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ನಿರ್ಲಕ್ಷತ್ರ್ಯ ವಹಿಸುವ ಸಾಧ್ಯತೆಯಿದೆ. ನಿಮ್ಮ ಆಸೆ-ಆಕಾಂಕ್ಷೆಗಳು ಈ ದಿನ ಈಡೇರಲಿವೆ.