ದೇಶ, ಧರ್ಮ ವಿರೋಧಿಗಳಿಂದ ಕಾಕ್ರೋಚ್ ಹೆಸರಿನಲ್ಲಿಯುವಕರನ್ನು ಪ್ರಚೋದಿಸುವ ಯತ್ನ: ವಿ. ಸುನಿಲ್ ಕುಮಾರ್

Contributed byajitha.m@timesofindia.com|Vijaya Karnataka
former minister v sunil kumar accuses anti national elements of provocation in cockroach protest
ವಿಕ ಸುದ್ದಿಲೋಕ ಉಡುಪಿ

ದೇಶ, ಹಿಂದೂ ಧರ್ಮ ವಿರೋಧಿಗಳು ಚಳವಳಿಯ ಹೆಸರಿನಲ್ಲಿಯುವಕರನ್ನು ಪ್ರಚೋದಿಸಿ ದೇಶದಲ್ಲಿಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಕಾಕ್ರೋಚ್ ಹೆಸರಿನಲ್ಲಿಹಳ್ಳಿಹಳ್ಳಿಗಳಲ್ಲಿಯುವ ಸಮುದಾಯವನ್ನು ಎತ್ತಿಕಟ್ಟಿ ಅಸಹಿಷ್ಣುತೆ ಸೃಷ್ಟಿಸಲಾಗುತ್ತಿದೆ ಎಂದು ಮಾಜಿ ಸಚಿವ, ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
ಅವರು ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆಯ ವಿರುದ್ಧ ಕಾಕ್ರೋಚ್ ಹಾಗೂ ಬೆಂಬಲಿಗ ಕಾಂಗ್ರೆಸ್ ಪಕ್ಷವು ದೆಹಲಿಯ ಜಂತರ್ ಮಂತರ್ ನಲ್ಲಿಪ್ರತಿಭಟನೆಯ ಹೆಸರಿನಲ್ಲಿದೇಶದಲ್ಲಿಅರಾಜಕತೆ ಹರಡುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾಬಿಜೆಪಿ ವತಿಯಿಂದ ಮಂಗಳವಾರ ಜಟ್ಕಾ ಸ್ಟ್ಯಾಂಡ್ ಬಳಿ ನಡೆದ ಪ್ರತಿಭಟನೆಯಲ್ಲಿಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಗೆ ಸಂವಿಧಾನ, ಸಂಸತ್ತು, ಕಾನೂನು ಹಾಗೂ ಚುನಾವಣಾ ವ್ಯವಸ್ಥೆಯ ಮೇಲೆಯೇ ನಂಬಿಕೆ ಇಲ್ಲ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸಗಳಲ್ಲಿಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಾಜ ವಿರೋಧಿ ಹಾಗೂ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸುವ ದೇಶವಿರೋಧಿ ಚಟುವಟಿಕೆಗಳ ಬಗ್ಗೆ ಜನರಲ್ಲಿಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಕಾಂಗ್ರೆಸ್ , ಕಾಕ್ರೋಚ್ , ಎಸ್ ಡಿಪಿಐ ಸಹಿತ ರಾಷ್ಟ್ರ ವಿರೋಧಿ ಪಕ್ಷಗಳ ಬೆಂಬಲದಿಂದ ಈ ಹೋರಾಟ ನಡೆದಿದೆ. ಇದು ವಿದ್ಯಾರ್ಥಿಗಳ ಪರ ಕಾಳಜಿಯ ಹೋರಾಟವಲ್ಲ. ವಿದೇಶಿ ಫಡ್ಡಿಂಗ್ ಬಳಸಿಕೊಂಡು ದೇಶದಲ್ಲಿಅರಾಜಕತೆ ಸೃಷ್ಟಿಸುವ ಹುನ್ನಾರ ಇದು. ದೆಹಲಿಯ ಜಂತರ್ ಮಂತರ್ ನಲ್ಲಿನಡೆದ ಪ್ರತಿಭಟನೆಯಲ್ಲಿಭಾಗವಹಿಸಿದವರ ಪೈಕಿ ಶೇ. 95 ರಷ್ಟು ಮಂದಿ ವಿದ್ಯಾರ್ಥಿಗಳಲ್ಲ. ಟೆರಿಸ್ಟ್ ಸಂಘಟನೆಯಿಂದ ಬಂದಿದ್ದು, ಮುಂದಿನ 100 ದಿನಗಳೊಳಗೆ ಈ ದ್ರೋಹಿಗಳ ನಿಜ ಬಣ್ಣ ಬಯಲಾಗಲಿದೆ ಎಂದರು.

ಮಣಿಪಾಲದ 7 ಫ್ಯಾಕಲ್ಟಿ ವಿರುದ್ಧ ಕ್ರಮ ಕೈಗೊಳ್ಳಿ: ನೀಟ್ ಪ್ರಶ್ನಾ ಪತ್ರಿಕೆ ಸೋರಿಕೆಯ ವಿಚಾರವಾಗಿ ಮಣಿಪಾಲದ ವಿದ್ಯಾಸಂಸ್ಥೆಯಲ್ಲಿರುವ ಕೇರಳ ಮತ್ತು ತಮಿಳುನಾಡು ಸಹಿತ 7 ಮಂದಿ ಫ್ಯಾಕಲ್ಟಿ ವಿದ್ಯಾರ್ಥಿಗಳನ್ನು ಪ್ರಚೋದಿಸಿ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ. ಈ 7 ಮಂದಿ ಇಲ್ಲಿನ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾರೆ. ಇದನ್ನು ಪೊಲೀಸರು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದ್ದಲ್ಲಿನಾವು ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ಎಚ್ಚರಿಸಿದರು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಬಿಜೆಪಿ, ಹಿಂದೂ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಬಿಜೆಪಿ ಸಂಘಟಿತ ಹೋರಾಟ ಮಾಡುತ್ತದೆ. ಕೋರ್ಟ್ , ಕೇಸ್ , ಕಚೇರಿ ಸಹಿತ ಯಾವುದಕ್ಕೂ ಕಾರ್ಯಕರ್ತರು ಭಯಭೀತರಾಗುವ ಅಗತ್ಯವಿಲ್ಲ. ಕಾರ್ಯಕರ್ತರನ್ನು ಬಿಟ್ಟುಕೊಡುವ ಮಾತಿಲ್ಲ. ನಿಮ್ಮೆಲ್ಲಖರ್ಚು, ವೆಚ್ಚವನ್ನು ನಾವು ಭರಿಸುತ್ತೇವೆ. ಈ ಜನವಿರೋಧಿ ನಿಲುವಿನ ವಿರುದ್ಧ ನಾವೆಲ್ಲಸಂಘಟಿತರಾಗಿ ಸ್ಥಳೀಯಾಡಳಿತ ಸಹಿತ ಎಲ್ಲಚುನಾವಣೆಯಲ್ಲಿಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದರು.

ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ ಮಾತನಾಡಿದರು.

ಉಡುಪಿ ಜಿಲ್ಲಾಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕೆ. ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ್ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಶ್ರೀಕಾಂತ್ ನಾಯಕ್ ಅಲೆವೂರು, ದಿನಕರ ಬಾಬು, ಕುಯಿಲಾಡಿ ಸುರೇಶ್ ನಾಯಕ್ , ಲಾಲಾಜಿ ಆರ್ . ಮೆಂಡನ್ , ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಶ್ಯಾಮಲ್ ಎಸ್ . ಕುಂದರ್ , ವೀಣಾ ಎಸ್ . ಶೆಟ್ಟಿ, ಗೀತಾಂಜಲಿ ಸುವರ್ಣ, ನಯನಾ ಗಣೇಶ್ , ಉಪಸ್ಥಿತರಿದ್ದರು.

ಫೋಟೊ: 28ಎಎ ಬಿಜೆಪಿ

ಫೋಟೊ: 28ಎಸ್ ಆರ್ ಬಿ ಬಿಜೆಪಿ: ಉಡುಪಿ ಜಿಲ್ಲಾಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.