ಸಂಗೀತದ ಸ್ವರ ಎಸ್ .ಜಾನಕಿ

Contributed byrangaswamyrangatm@gmail.com|Vijaya Karnataka
s janaki the greatness of indian music and the nightingale of kannada music
ಸಂಗೀತದ ಸ್ವರ ಎಸ್ .ಜಾನಕಿ

ತುರುವೇಕೆರೆ: ಭಾರತೀಯ ಚಿತ್ರರಂಗದಲ್ಲಿಸಂಗೀತದ ಮೂಲಕ ಇತಿಹಾಸ ಸೃಷ್ಟಿಸಿದ ಗಾನ ಕೋಗಿಲೆ ಎಸ್ .ಜಾನಕಿ ಎಂದು ತಾಲೂಕು ಕಸಾಪ ಅಧ್ಯಕ್ಷ ಡಿ.ಪಿ.ರಾಜು ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿಹಮ್ಮಿಕೊಂಡಿದ್ದ ಎಸ್ .ಜಾನಕಿ ಗಾನಾಂಜಲಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸುಮಾರು 48 ಸಾವಿರ ಹಾಡುಗಳನ್ನು ನಾನಾ ಭಾಷೆಗಳಲ್ಲಿಹಾಡಿ, ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅತಿಹೆಚ್ಚು ಕನ್ನಡ ಭಾಷೆಯಲ್ಲಿಹಾಡಿ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಮಹಾತಾಯಿ. ಅವರ ಸಂಗೀತದ ಆಸಕ್ತಿ, ಶ್ರದ್ಧೆ ಮತ್ತು ಬೆಂಬಿಡದ ಛಲಶಕ್ತಿ ಇಂದಿನ ಯುವಶಕ್ತಿಯಲ್ಲಿಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಕಲೆ, ಸಾಹಿತ್ಯ ಪರಂಪರೆ ಉಳಿಸಲು ಸಾಧ್ಯ ಎಂದು ತಿಳಿಸಿದರು.

ಬರಹಗಾರ ತುರುವೇಕೆರೆ ಪ್ರಸಾದ್ ಮಾತನಾಡಿ, ಎಸ್ .ಜಾನಕಿ ಮೂಲತಹಃ ಆಂಧ್ರದವರಾಗಿದ್ದರೂ ಅತಿಹೆಚ್ಚು ಕನ್ನಡದಲ್ಲೇ ಹಾಡುಗಳನ್ನು ಹಾಡಿದ್ದಾರೆ. ತನ್ನ ಸ್ವರಮಾಂತ್ರಿಕತೆಯಿಂದ ಸಂಗೀತದ ಹಿರೆಮೆ, ಕನ್ನಡ ಭಾಷೆಯ ಗರಿಮೆ ಹೆಚ್ಚಿಸಿದ್ದರು ಎಂದರು.

ಎಸ್ .ಜಾನಕಿ ಅವರ ಹಾಡುಗಳನ್ನು ಸಂಗೀತಗಾರ ಈಶ್ವರ್ ಮತ್ತು ಕಿರಣ್ ಹಾಡಿದರು. ವಾಸವಿ ಸತೀಶ್ , ಕವಿತಾ ಸತ್ಯನಾರಾಯಣ್ , ಕೆಲ ಕನ್ನಡ ಗೀತೆಗಳನ್ನು ಹಾಡಿದರು. ನಿರೂಪಕಿ ರೂಪಾ ಸೇರಿದಂತೆ ತಾಲೂಕಿನ ಕಲಾಭಿಮಾನಿಗಳು ಕಾರ ್ಯಕ್ರಮದಲ್ಲಿಭಾಗವಹಿಸಿದ್ದರು.

28 ಟಿವಿಕೆ 01: ತುರುವೇಕೆರೆ ಕನ್ನಡ ಭವನದಲ್ಲಿಎಸ್ .ಜಾನಕಿ ಗಾನಾಂಜಲಿ ಕಾರ ್ಯಕ್ರಮ ನೆರವೇರಿತು.