ಕಾರವಾರ: ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿಸಲ್ಲಿಸಿದ ಕಾರವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಶಾ ಕಾರ್ಯಕರ್ತೆಯರನ್ನು ನೌಕಾಪಡೆ ವತಿಯಿಂದ
ಇತ್ತೀಚೆಗೆ ಸನ್ಮಾನಿಸಲಾಯಿತು.ಕಮಾಂಡರ್ ಕೆ. ಅನಂತರಾಜ್ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿದರು. ಇತ್ತೀಚೆಗೆ ನೌಕಾಪಡೆ ಆಯೋಜಿಸಿದ್ದ ವೈದ್ಯಕೀಯ ಶಿಬಿರಗಳಲ್ಲಿಸಕ್ರಿಯವಾಗಿ ಪಾಲ್ಗೊಂಡು, ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಲ್ಲಿಮತ್ತು ಜನರನ್ನು ಶಿಬಿರಕ್ಕೆ ಕರೆತರುವಲ್ಲಿಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದರು. ಅವರಿಂದ ಆರೋಗ್ಯ ಉಚಿತ ತಪಾಸಣೆ ಯಶಸ್ವಿಯಾದ ಹಿನ್ನೆಲೆಯಲ್ಲಿಆಶಾಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಕಮಾಂಡರ್ ಅನಂತರಾಜ್ ಮಾತನಾಡಿ, ‘‘ ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಅವರ ಶ್ರಮದಿಂದ ನಮ್ಮ ವೈದ್ಯಕೀಯ ಶಿಬಿರಗಳು ಯಶಸ್ವಿಯಾಗಿ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ’’ ಎಂದರು.