‘ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ’

Contributed bykvkampli@gmail.com|Vijaya Karnataka
empowerment for strong women
‘ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ’

ಬೃಹನ್ಮಠದ ನಾಗಭೂಷಣ ಶಿವಾಚಾರ್ಯರ ಸಲಹೆ |
ವಿಕ ಸುದ್ದಿಲೋಕ ಕಂಪ್ಲಿ

‘‘ಮಹಿಳೆಯರು ಪೂರಕ ತರಬೇತಿ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು,’’ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸ್ವ ಉದ್ಯೋಗ ಕೌಶಲ ವಸ್ತು ಪ್ರದರ್ಶನ ಸಮಾರಂಭದಲ್ಲಿಮಾತನಾಡಿದರು.

ಪ್ರದರ್ಶನಕ್ಕೆ ಇಟ್ಟಿದ್ದ ಕಸೂತಿ ಮೂಡಿದ ನಾನಾ ಕಲೆಗಳ ವಸ್ತುಗಳು, ಅಲಂಕಾರಿಕ ವಸ್ತುಗಳು, ವ್ಯಾನಿಟಿ ಬ್ಯಾಗ್ , ಸಿರಿ ಧಾನ್ಯ, ಸಾವಯವ ಆಹಾರ ಪದಾರ್ಥಗಳು ಗಮನಸೆಳೆದವು. ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಇಟಗಿ ಬಸವರಾಜಗೌಡ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಜಗನ್ನಾಥ ಹಿರೇಮಠ, ಪಾಠಶಾಲೆ ಮಾಜಿ ಅಧ್ಯಕ್ಷ ಎಸ್ .ಎಸ್ .ಎಂ.ಚನ್ನಬಸವರಾಜ ಸೇರಿ ಬಳಗದ ಪದಾಧಿಕಾರಿಗಳು, ಸದಸ್ಯೆಯರು ಇದ್ದರು.

ಫೋಟೋ ಕ್ಯಾಪ್ಷನ್ : 26ಕೆಎಂಪಿ2

ಕಂಪ್ಲಿಪಟ್ಟಣದಲ್ಲಿಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ವಸ್ತು ಪ್ರದರ್ಶನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.