ವಿಕ ಸುದ್ದಿಲೋಕ ತೇರದಾಳತೇರದಾಳ ತಾಲೂಕಿನ ಹನಗಂಡಿ ಗ್ರಾಮದ ದಿಗಂಬರೇಶ್ವರ ದೇವಸ್ಥಾನ ರಸ್ತೆಯಲ್ಲಿರುವ ಕೆರೆಗೆ ಮೂರ್ನಾಲ್ಕು ದಿನಗಳಿಂದ ಕಾಲುವೆ ನೀರು ಹರಿದು ಬರುತ್ತಿದ್ದು, ಅರ್ಧಕ್ಕಿಂತಲೂ ಹೆಚ್ಚಿಗೆ ಭರ್ತಿಯಾಗಿದೆ .
ಬೇಸಿಗೆಯಲ್ಲಿಖಾಲಿ ಆಗಿದ್ದ ಹನಗಂಡಿ ಗ್ರಾಮದ ಕೆರೆ ಮಳೆಗಾಲ ಬಂದರೂ ತುಂಬಿರಲಿಲ್ಲ. ಈಗ ನೀರು ಹರಿದು ಬಂದಿದ್ದರಿಂದ ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗಿದೆ. ಅಂತರ್ಜಲಮಟ್ಟ ಹೆಚ್ಚಳಗೊಳ್ಳಲು ಸಹಕಾರಿ ಆಗಿದೆ. ಒಂದೆರಡು ಒಳ್ಳೆಯ ಮಳೆಯಾದರೆ ನಮ್ಮ ಗ್ರಾಮದ ಕೆರೆ ಕಾಲುವೆ ಬದಲು ಮಳೆ ನೀರಿನಿಂದಲೇ ತುಂಬುತ್ತದೆ ಎಂದು ಗ್ರಾಪಂ ಮಾಜಿ ಸದಸ್ಯ ಧರೇಶ ಹುದ್ದಾರ, ಅಲ್ಲಾಬಕ್ಷ ಅಲಾಸ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಎಲ್ ಬಿಸಿ ಕಾಲುವೆಗೆ ನೀರು ಬಿಟ್ಟಿದ್ದರೂ ಕೆರೆಗೆ ಬಂದಿರಲಿಲ್ಲ. ಗ್ರಾಪಂ ಮಾಜಿ ಸದಸ್ಯರು ಹಾಗೂ ಮುಖಂಡರು ಕೆರೆ ತುಂಬಿಸುವುದಕ್ಕಾಗಿ ಕಾಲುವೆಗೆ ನೀರು ತರಲು ಕೂಲಿಕಾರರಿಗೆ ಸ್ವತಃ ಹಣ ನೀಡಿ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ, ಅಷ್ಟೊಂದು ಪ್ರಮಾಣದಲ್ಲಿನೀರು ಬಂದಿರಲಿಲ್ಲ. ಇದರಿಂದ ನೊಂದ ಗ್ರಾಮಸ್ಥರು , ಕರೆಗೆ ನೀರು ತುಂಬಿಸದಿದ್ದರೆ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ತಹಸೀಲ್ದಾರ್ ಅವರಿಗೆ ಎಚ್ಚರಿಕೆ ನೀಡಿದ್ದರು. ತಹಸೀಲ್ದಾರ್ ವಿಜಯಕುಮಾರ ಕಡಕೋಳ ಅವರು ಜಮಖಂಡಿ ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದು ಕೆರೆ ತುಂಬಿಸಲು ಕ್ರಮ ಕೈಗೊಂಡಿದ್ದಾರೆ.
ಫೋಟೊ ಫೈಲ್ ನೇಮ್ ಟಿಡಿಎಲ್ -28-1ಎ,ಬಿ
ಎ ಮತ್ತು ಬಿ) ಜಿಎಲ್ ಬಿಸಿ ಕಾಲುವೆ ನೀರಿನಿಂದ ಅರ್ಧದಷ್ಟು ಭರ್ತಿಯಾಗಿರುವ ಹನಗಂಡಿ ಕೆರೆ .