ನಗರದ ತಮಟಕಲ್ಲುಸಮೀಪದ ಹೆದ್ದಾರಿ ದಾಟುತ್ತಿದ್ದ ಕರಡಿ ಮರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ 8.30ರ ಸಮಯದಲ್ಲಿನಡೆದಿದೆ. ಮುಂದಿನ ಟೈರ್ ತಲೆಗೆ ಬಲವಾಗಿ ಬಡಿದ್ದು, ಹಿಂದಿನ ಟೈರ್ ಕರಡಿ ಮೇಲೆ ಹರಿದಿರುವುದರಿಂದ ಪಕ್ಕೆಲುಬುಗಳು ಮುರಿದು ಮೃತಪಟ್ಟಿದೆ.
ಮಾಹಿತಿ ತಿಳಿದ ತಕ್ಷಣ ಪೊಲೀಸ್ , ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮೃತ ಕರಡಿಯನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ. ಅಪಘಾತದ ಸ್ಥಳದಲ್ಲಿಡಿಕ್ಕಿ ಹೊಡೆದ ವಾಹನದ ಭಾಗದ ಕೆಲ ತುಣುಕುಗಳನ್ನು ಸಂಗ್ರಹಿಸಿದ್ದಾರೆ. ವಾಹನ ಬಿಳಿ ಬಣ್ಣದ್ದಾಗಿದ್ದು, ಬುಲೇರೋ ಅಥವಾ ಟಾಟಾ ಸುಮೋ ಇರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿಯೇ ದಾವಣಗೆರೆಗೆ ತೆರಳಿ, ಸಂಶಯಾಸ್ಪದ ವಾಹನಗಳ ಮಾಹಿತಿ ಸಂಗ್ರಹಿಸಿದ್ದಾರೆ. ತನಿಖೆ ಅನುಮತಿ ಸಿಕ್ಕ ತಕ್ಷಣ ತನಿಖೆ ಕೈಗೊಳ್ಳಲಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿಇದೇ ಮೊದಲ ಅಪಘಾತವಾಗಿದೆ. ಕರಡಿಯ ವಯಸ್ಸು ಒಂದೂವರೆಯಿಂದ ಎರಡು ವರ್ಷ ಎಂದು ಅಂದಾಜಿಸಲಾಗಿದೆ. ಮಂಗಳವಾರ ಮೃತ ಕರಡಿ ಮರಿಯ ಶವಪರೀಕ್ಷೆ ಮಾಡಲಾಗಿದೆ. ಗಂಡು ಕರಡಿ ಮರಿಯಾಗಿದ್ದು, ತಾಯಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ಓಡಾಟ ಪ್ರಾರಂಭಿಸಿದೆ. ತನ್ನ ಟೆರಿಟರಿ ಗುರುತಿಸಿಕೊಳ್ಳಲು ಸಂಚರಿಸುತ್ತಾ ಬಂದಾಗ ಹೆದ್ದಾರಿ ದಾಟಲು ಬಾರದೇ ಅಪಘಾತ ಸಂಭವಿಸಿರಬಹುದು ಎಂದು ಆರ್ ಎಫ್ ಒ ವಸಂತ ಕುಮಾರ್ ವಿಕಗೆ ತಿಳಿಸಿದರು.
---
ಫೋಟೋ: 28ಸಿಟಿಡಿ88
ಚಿತ್ರದುರ್ಗ ನಗರದ ತಮಟಕಲ್ಲುಸಮೀಪ ಹೆದ್ದಾರಿಯಲ್ಲಿಕರಡಿ ಮರಿ ಮೃತಪಟ್ಟಿರುವುದು.
ಫೋಟೋ: 28ಸಿಟಿಡಿ88ಎ
ಚಿತ್ರದುರ್ಗ ನಗರದ ತಮಟಕಲ್ಲುಸಮೀಪ ಹೆದ್ದಾರಿಯಲ್ಲಿಮೃತಪಟ್ಟ ಕರಡಿ ಮರಿ ವೀಕ್ಷಿಸುತ್ತಿರುವ ಅರಣ್ಯ ಸಿಬ್ಬಂದಿ.