ಕೇಂದ್ರ ಸರಕಾರದ ನಡೆಗೆ ಖಂಡನೆ

Contributed bypeerasab995@gmail.com|Vijaya Karnataka
opposition to central governments examination reform methods
ಕೇಂದ್ರ ಸರಕಾರದ ನಡೆಗೆ ಖಂಡನೆ

-ನಂದನ್ ನೀಲಕೇಣಿ ನೇತೃತ್ವದ ಸಮಿತಿಗೆ ವಿರೋಧ |
-ಎನ್ ಟಿಎ ರದ್ದುಗೊಳಿಸಲು ಒತ್ತಾಯ

ವಿಕ ಸುದ್ದಿಲೋಕ ಬಳ್ಳಾರಿ

‘‘ಪರೀಕ್ಷಾ ಸುಧಾರಣೆಗಾಗಿ ಉದ್ಯಮಿ ನಂದನ್ ನೀಲಕೇಣಿ ನೇತೃತ್ವದಲ್ಲಿಟಾಸ್ಕ್ ಫೋರ್ಸ್ ಸಮಿತಿ ರಚಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಎಐಡಿಎಸ್ ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿನಗರದ ನಾನಾ ಕಾಲೇಜುಗಳಲ್ಲಿಸೋಮವಾರ ಪ್ರಚಾರಾಂದೋಲನ ನಡೆಸಲಾಯಿತು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ‘‘ವಿದ್ಯಾರ್ಥಿ ಹಾಗೂ ಯುವಜನರ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿರುವುದು ಸ್ವಾಗತಾರ್ಯ ಬೆಳವಣಿಗೆ. ಆದರೆ, ಕೇಂದ್ರ ಸರಕಾರ ಸುಧಾರಣೆ ನೆಪದಲ್ಲಿಕಾರ್ಪೊರೇಟ್ ದೈತ್ಯ ನಂದನ್ ನೀಲಕೇಣಿ ನೇತೃತ್ವದಲ್ಲಿಟಾಸ್ಕ್ ಫೋರ್ಸ್ ಸಮಿತಿ ರಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಮತ್ತೆ ದ್ರೋಹ ಎಸಗಿದೆ. ಸಣ್ಣಪುಟ್ಟ ಸಮಿತಿ ರಚಿಸುವುದರಿಂದ ಪರೀಕ್ಷಾ ಅಕ್ರಮಗಳಿಗೆ ಪರಿಹಾರ ಸಿಗುವುದಿಲ್ಲ. ವಿದ್ಯಾರ್ಥಿಗಳ ಹಿತಕಾಯುವಲ್ಲಿಸಂಪೂರ್ಣ ವಿಫಲವಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಅನ್ನು ರದ್ದುಗೊಳಿಸುವುದೇ ಇದಕ್ಕೆ ಪೂರಕ ಮಾರ್ಗ. ಪರೀಕ್ಷಾ ವ್ಯವಸ್ಥೆ ಸುಧಾರಿಸುವ ಇಚ್ಛೆ ಸರಕಾರಕ್ಕಿದ್ದರೆ ಕಾರ್ಪೊರೇಟ್ ವ್ಯಕ್ತಿಗಳ ಬದಲು ಶಿಕ್ಷಣ ತಜ್ಞರು, ಮನಶಾಸ್ತ್ರಜ್ಞರು ಹಾಗೂ ಬೋಧನಾ ತಜ್ಞರನ್ನು ನೇಮಿಸಬೇಕಿತ್ತು,’’ ಎಂದರು.

‘‘ನೀಟ್ ಪರೀಕ್ಷೆಯನ್ನು ‘ಪೆನ್ -ಪೇಪರ್ ‘ ಮಾದರಿಯಿಂದ ‘ಆನ್ ಲೈನ್ ’ ಮಾದರಿಗೆ ಬದಲಾಯಿಸುವ ಸರಕಾರದ ನಿರ್ಧಾರ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಮೂಲಸೌಕರ್ಯ, ಸ್ಥಿರ ಇಂಟರ್ ನೆಟ್ ಹಾಗೂ ವಿದ್ಯುತ್ ಕೊರತೆ ಇರುವ ಪ್ರದೇಶಗಳ ಬಡ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಲಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಶ್ರೀಮಂತರಿಗೆ ಮಾತ್ರ ಸೀಮಿತಗೊಳಿಸುವ ಈ ನೀತಿಯ ವಿರುದ್ಧ ವಿದ್ಯಾರ್ಥಿ ಸಮುದಾಯ ನಿರಂತರ ಹೋರಾಟ ರೂಪಿಸಬೇಕು,’’ ಎಂದು ಕಂಬಳಿ ಮಂಜುನಾಥ ಒತ್ತಾಯಿಸಿದರು.

ಸಂಘಟನೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

ಫೋಟೋ ಕ್ಯಾಪ್ಷನ್ : 27 ಬಿಎಲ್ ವೈ ಪೀರಾಸಾಬ್ 2

ಪರೀಕ್ಷಾ ಸುಧಾರಣೆಗಾಗಿ ಉದ್ಯಮಿ ನಂದನ್ ನೀಲಕೇಣಿ ನೇತೃತ್ವದಲ್ಲಿಟಾಸ್ಕ್ ಫೋರ್ಸ್ ಸಮಿತಿ ರಚಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಬಳ್ಳಾರಿಯ ಖಾಸಗಿ ಕಾಲೇಜಿನಲ್ಲಿಎಐಡಿಎಸ್ ಒ ಪದಾಧಿಕಾರಿಗಳು ಪ್ರಚಾರಾಂದೋಲನ ನಡೆಸಿದರು.