ಚಿಲಿಂಬಿ ಆದಶ್ ರ್ ಫ್ರೆಂಡ್ಸ್ ಆಟಿ ಕೂಟ

Contributed byvijaya.poojary@timesgroup.com|Vijaya Karnataka
the significance of culture highlighted in chilmabi adashar friends sports meet
ವಿಕ ಸುದ್ದಿಲೋಕ ಮಂಗಳೂರು

ಮಂಗಳೂರಿನ ಚಿಲಿಂಬಿ ಆದರ್ಶ ನಗರದಲ್ಲಿಆದಶ್ ರ್ ಫ್ರೆಂಡ್ಸ್ ಅಸೋಸಿಯೇಶನ್ ನಿಂದ ಸಂಪ್ರದಾಯ, ಸಂಸ್ಕೃತಿ ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಆಟಿ-ಕೂಟ ಕಾರ್ಯಕ್ರಮ ನಡೆಯಿತು.
ನಿಟ್ಟೆ ತುಳು ಅಧ್ಯಯನ ಕೇಂದ್ರದ ಸಂಯೋಜಕ ಡಾ.ಸಾಯಿಗೀತ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಆರಾಧನೆ, ಬೆರ್ಮೆರೆ ಆರಾಧನೆ ಹಾಗೂ ನಾಗಾರಾಧನೆಯಂತಹ ಸಂಪ್ರದಾಯಗಳ ಮೂಲಕ ತುಳುನಾಡು ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಂಡಿದೆ. ವಿವಿಧತೆಯಲ್ಲಿಏಕತೆಯನ್ನು ಸಾರುವ, ಮೌಲ್ಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಿರುವ ಈ ಆಟಿ ಕೂಟ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.

ದೈವ ನರ್ತಕ, ಎಸ್ ಡಿಎಂ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ರವೀಶ್ ಪಡುಮಲೆ ಮಾತನಾಡಿ, ತುಳುನಾಡಿನ ಮೂಲ ಬೆರ್ಮೆರ್ ಆರಾಧನೆಯ ಇತಿಹಾಸವನ್ನು ವಿವರಿಸಿದರು. ಹಿಂದೆ ಮರದ ಕೆಳಗೆ ಕಲ್ಲುಪ್ರತಿಷ್ಠಾಪಿಸಿ ಬೆರ್ಮೆರ್ ಆರಾಧನೆ ನಡೆಸಲಾಗುತ್ತಿತ್ತು. ಕಾಲಕ್ರಮೇಣ ಅದೇ ಶಕ್ತಿಯನ್ನು ನಾನಾ ದೈವಗಳ ರೂಪದಲ್ಲಿಆರಾಧಿಸುವ ಪರಂಪರೆ ಬೆಳೆದಿದೆ ಎಂದರು.

ಮಾಜಿ ಮೇಯರ್ ಎಂ.ಶಶಿಧರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ರತ್ನ ನವೀನ್ ಭಂಡಾರಿ, ರಜನೀಶ್ ಕಾಪಿಕಾಡ್ , ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಕಿಶೋರ್ ಕೋಟ್ಯಾನ್ ಉಪಸ್ಥಿತರಿದ್ದರು. ಅಸೋಸಿಯೇಶನ್ ಅಧ್ಯಕ್ಷ ಪ್ರಶಾಂತ್ ಸ್ವಾಗತಿಸಿದರು. ಮಹಿಳಾ ಉಪಾಧ್ಯಕ್ಷೆ ಪ್ರತಿಕ್ಷಾ ಕಿಶೋರ್ ವಂದಿಸಿದರು. ಶುಭರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.

28ಎಂಎನ್ ಜಿ-ಆದರ್ಶ ಆಟಿಕೂಟ