ಇಂದು ಬಳಸಿ...

Contributed bymahesh.adali@gmail.com|Vijaya Karnataka
123rd jayanti of madhurachennaru celebrating the spirit of kannada
ಮಧುರಚೆನ್ನರ 123ನೇ ಜಯಂತಿ ಕಾರ್ಯಕ್ರಮ

ನೆಲದ ಅಸ್ಮಿತೆ ಎತ್ತಿ ಹಿಡಿದ ಕವಿ
ವಿಕ ಸುದ್ದಿಲೋಕ ವಿಜಯಪುರ

‘‘ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಕವಿ ಮಧುರಚೆನ್ನರು ಕಾವ್ಯದ ಮೂಲಕ ನಮ್ಮ ನೆಲದ ಅಸ್ಮಿತೆಯನ್ನು ಜಾಗತಿಕ ಮಟ್ಟದಲ್ಲಿಎತ್ತಿಹಿಡಿದ ಹಾಗೂ ಜನಮಾನಸದಲ್ಲಿಶಾಶ್ವತವಾಗಿ ಉಳಿದ ದಾರ್ಶನಿಕ ಕವಿ’’ ಎಂದು ಸಾಹಿತಿ ಸಿ.ಎಂ.ಬಂಡಗಾರ ಹೇಳಿದರು.

ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಹಾಗೂ ಮೋರಟಗಿ ಕಲ್ಪವೃಕ್ಷ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿನಡೆದ ಮಧುರಚೆನ್ನರ 123ನೇ ಜಯಂತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ಭೀಮೆಯ ತಟದಲ್ಲಿಹುಟ್ಟಿ ಬೆಳೆದ ಮಧುರಚೆನ್ನರು ನಿಸರ್ಗದೊಂದಿಗೆ ಕಾವ್ಯದ ಲೇಪನ ಮಾಡಿ ಜಾಗತಿಕ, ಆಧ್ಯಾತ್ಮಿಕ ಹಾಗೂ ಸಾಹಿತ್ಯ ಲೋಕದಲ್ಲಿವಿಶಿಷ್ಟ ಹೆಸರು ಗಳಿಸಿದ್ದಾರೆ. ಹಲಸಂಗಿಯನ್ನು ನವೋದಯ ಕಾವ್ಯದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲ್ಪವೃಕ್ಷ ಕಾಲೇಜಿನ ಪ್ರಾಚಾರ್ಯ ಎ.ಬಿ.ಸಿಂದಗಿ ಮಾತನಾಡಿ, ‘‘ಮಧುರಚೆನ್ನರ ಸಾಹಿತ್ಯ ಮತ್ತು ಚಿಂತನೆಯ ಮೇಲೆ ಅರವಿಂದರ ಪ್ರಭಾವ ಸಾಕಷ್ಟಿತ್ತು. ಅನುಭಾವದ ನೆಲೆಯಲ್ಲಿಅವರು ಸೃಷ್ಟಿಸಿದ ವಿಶಿಷ್ಟ ಸಾಹಿತ್ಯವು ಕನ್ನಡಕ್ಕೆ ನೀಡಿದ ಅಮೂಲ್ಯ ಕೊಡುಗೆಯಾಗಿದೆ’’ ಎಂದು ಹೇಳಿದರು.

ಪ್ರತಿಷ್ಠಾನದ ಸದಸ್ಯ ಬಿ.ಆರ್ .ಬನಸೋಡೆ ಮಾತನಾಡಿದರು. ಮಧುರಚೆನ್ನರ ಕುಟುಂಬ ಸದಸ್ಯರಾದ ಜಗದೀಶ ಗಲಗಲಿ, ಮಹಾದೇವಿ ಗಲಗಲಿ ಅವರು ಕವಿಯ ಬದುಕು, ಸಾಹಿತ್ಯ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಸ್ಮರಿಸಿದರು.

ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಪುರುಷೋತ್ತಮ ಗಲಗಲಿ, ದ್ರಾಕ್ಷಾಯಣಿ ಬಿರಾದಾರ, ಇಲಾಖೆಯ ಸಿಬ್ಬಂದಿ ಅಯ್ಯುಬ್ ದ್ರಾಕ್ಷಿ, ಅಂಜನಾ ಇಜೇರಿ, ಪ್ರತಿಷ್ಠಾನದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸದಸ್ಯ ಡಾ.ರಮೇಶ ಕತ್ತಿ, ಜಿ.ಎಂ.ಪಾಟೀಲ ಇತರರಿದ್ದರು.

ಕಲಾವಿದ ಭೀಮು ಕಟ್ಟಿಮನಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆದವು.

ಹಲಸಂಗಿ-ಬಿಜೆಪಿ31

ಮೋರಟಗಿ ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿನಡೆದ ಮಧುರಚೆನ್ನರ 123ನೇ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.