Appointment Of Hansraj Singh As Indias New Ambassador To Cuba
ಡೈಜೆಸ್ಟ್ 1
Contributed by: Jaya shree|Vijaya Karnataka•
ಹನ್ಸ್ ರಾಜ್ ಸಿಂಗ್ ನೇಮಕ
ಹನ್ಸ್ ರಾಜ್ ಸಿಂಗ್ ವರ್ಮಾ ಅವರನ್ನು ಕ್ಯೂಬಾ ಗಣರಾಜ್ಯಕ್ಕೆ ಭಾರತ ದ ಮುಂದಿನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರು ಶೀಘ್ರದಲ್ಲೇ ಹವಾನಾದಲ್ಲಿತಮ್ಮ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. 2008ರ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆಯ ಅಧಿಧಿಕಾರಿಯಾಗಿರುವ ಇವರು, ಈ ಮೊದಲು ಬ್ರೆಜಿಲ್ ನ ಸಾವೊ ಪೌಲೊದಲ್ಲಿಭಾರತದ ಕಾನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ಭಾರತ ಮತ್ತು ಕ್ಯೂಬಾ ನಡುವೆ 1959ರಿಂದಲೂ ಉತ್ತಮ ರಾಜತಾಂತ್ರಿಕ ಸಂಬಂಧವಿದ್ದು, ಈ ನೇಮಕವು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ.ಸಾರಿಗೆ ಸಾಮರ್ಥ್ಯ ಒಪ್ಪಂದ
ನಾಸಾ ಸಂಸ್ಥೆಯು ಸ್ಪೇಸ್ ಎಕ್ಸ್ ನೊಂದಿಗೆ ತನ್ನ ವಾಣಿಜ್ಯ ಸಿಬ್ಬಂದಿ ಸಾರಿಗೆ ಸಾಮರ್ಥ್ಯ ಒಪ್ಪಂದವನ್ನು 94.6 ಕೋಟಿ ಡಾಲರ್ ಗಳ ಪರಿಷ್ಕರಣೆಯೊಂದಿಗೆ 2026ರ ಸೆಪ್ಟೆಂಬರ್ 18ರಂದು ವಿಸ್ತರಿಸಿದ್ದು, ಇದರಡಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಖಖ) ಕ್ರೂ-15, ಕ್ರೂ-16 ಮತ್ತು ಕ್ರೂ-17 ಎಂಬ ಮೂರು ಹೊಸ ಸಿಬ್ಬಂದಿ ಸಹಿತ ಡ್ರ್ಯಾಗನ್ ವಿಮಾನಗಳ ಹಾರಾಟ ಸೇರ್ಪಡೆಯಾಗಿದೆ. ಇದರೊಂದಿಗೆ ಸ್ಪೇಸ್ ಎಕ್ಸ್ ನ ಒಟ್ಟು ಒಪ್ಪಂದದ ಮೌಲ್ಯವು ಸುಮಾರು 592 ಕೋಟಿ ಡಾಲರ್ ಗೆ ಏರಿಕೆಯಾಗಿದ್ದು, ಈ ಒಪ್ಪಂದದ ಅವಧಿಧಿಯು 2030ರವರೆಗೆ ಮುಂದುವರಿಯಲಿದೆ.
ಲುಕ್ ಲಿಂಡ್ ಬರ್ಗ್ ನೇಮಕ
ವಿಶ್ವಸಂಸ್ಥೆಯು ಅಮೆರಿಕದ ಕೃಷಿ ಅಧಿಕಾರಿಯಾದ ಲುಕ್ ಲಿಂಡ್ ಬರ್ಗ್ ಅವರನ್ನು ವಿಶ್ವ ಆಹಾರ ಕಾರ್ಯಕ್ರಮದ ಹೊಸ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೆಪ್ಟೆಂಬರ್ 18ರಂದು ನೇಮಕ ಮಾಡಿದೆ. ಡಬ್ಲ್ಯೂಎಫ್ ಪಿ ಕಾರ್ಯನಿರ್ವಾಹಕ ಮಂಡಳಿಯ ಅನುಮೋದನೆ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯಧ್ಯಕ್ಷ ಆಂಟೋನಿಯೊ ಗುಟೆರಸ್ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆಯ ಮಹಾನಿರ್ದೇಶಕ ಕ್ಯು ಡೊಂಗ್ಯು ಅವರ ಜಂಟಿ ಘೋಷಣೆಯ ಬಳಿಕ ಈ ನೇಮಕಗೊಂಡಿದೆ. ವಿಶ್ವದಲ್ಲೇ ಹಸಿವು ನಿವಾರಣೆ ಮತ್ತು ತುರ್ತು ಸರಕು ಸಾಗಣೆಯಲ್ಲಿತೊಡಗಿರುವ ಅತಿ ದೊಡ್ಡ ಮಾನವೀಯ ಸಂಸ್ಥೆಯಾಗಿರುವ ಡಬ್ಲ್ಯೂಎಫ್ ಪಿಯ ಮುಖ್ಯ ಆಡಳಿತಾಧಿಕಾರಿಯಾಗಿ ಅವರು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದು, ಈ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಮಹಿಳಾ ಯೂತ್ ಲೀಗ್
ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ವತಿಯಿಂದ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಖಿ15 ಮಹಿಳಾ ಯೂತ್ ಲೀಗ್ ’ ಅಕ್ಟೋಬರ್ 15ರಂದು ಕರ್ನಾಟಕದ ಬೆಳಗಾವಿಯಲ್ಲಿರುವ ಸ್ಪೋರ್ಟಿಂಗ್ ಪ್ಲಾನೆಟ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿಆರಂಭವಾಗಲಿದೆ. ದೇಶಾದ್ಯಂತದ ಒಟ್ಟು 16 ತಂಡಗಳು ಈ ಲೀಗ್ ನಲ್ಲಿಭಾಗವಹಿಸಲಿದ್ದು, ಅಕ್ಟೋಬರ್ 31ರಂದು ಇದರ ಫೈನಲ್ ಪಂದ್ಯ ನಡೆಯಲಿದೆ. ಭಾಗವಹಿಸುತ್ತಿರುವ 16 ತಂಡಗಳನ್ನು ಆರಂಭಿಕ ಹಂತದಲ್ಲಿತಲಾ ನಾಲ್ಕು ತಂಡಗಳಂತೆ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಲಿವೆ. ಸೆಸಾ ಫುಟ್ ಬಾಲ್ ಅಕಾಡೆಮಿ, ಸೇತು ಎಫ್ ಸಿ, ಮುಂಬಯಿ ನೈಟ್ಸ್ ಎಫ್ ಸಿ ಮತ್ತು ಬೆಳಗಾವಿ ಯುನೈಟೆಡ್ ಫುಟ್ ಬಾಲ್ ಅಕಾಡೆಮಿ ಸೇರಿದಂತೆ ಪ್ರಮುಖ 16 ತಂಡಗಳು ಈ ಪಂದ್ಯಾವಳಿಯಲ್ಲಿಕಣಕ್ಕಿಳಿಯುತ್ತಿವೆ. ಜುಲೈ 2026ರಲ್ಲಿಆರಂಭವಾದ ಅಐಊಊ ಖಿ17 ಮಹಿಳಾ ಯೂತ್ ಲೀಗ್ ನ ಮುಂದುವರಿದ ಭಾಗವಾಗಿ ಈ ಖಿ15 ಮಹಿಳಾ ಯೂತ್ ಲೀಗ್ ಅನ್ನು ಆಯೋಜಿಸಲಾಗಿದೆ.