ಪುಟ 4 ಸೆಕೆಂಡ್ ಲೀಡ್

Contributed byJaya shree|Vijaya Karnataka
pgcet 2026 first round seat allocation result announced
ಪಿಜಿಸಿಇಟಿ ಫಲಿತಾಂಶ ಪ್ರಕಟ

- ಆಯ್ಕೆ ಬದಲಾವಣೆಗೂ ಅವಕಾಶ
ಪಿಜಿಸಿಇಟಿ-2026ರ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್ ಹಾಗೂ ಎಂ.ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ ಮೊದಲ ಸುತ್ತಿನ ಸೀಟು ಹಂಚಿಕೆಯ ಅಣುಕು ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ. ಅಭ್ಯರ್ಥಿಗಳು ತಾವು ದಾಖಲಿಸಿರುವ ಆಯ್ಕೆಗಳನ್ನು ಬದಲಾಯಿಸಲು, ಡಿಲೀಟ್ ಮಾಡಲು ಅಥವಾ ಹೊಸ ಆಯ್ಕೆಗಳನ್ನು ಸೇರಿಸಲು ಸೆಪ್ಟೆಂಬರ್ 22ರ ಬೆಳಿಗ್ಗೆ 11 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಇದುವರೆಗೆ ಆಯ್ಕೆಗಳನ್ನು ದಾಖಲಿಸದ ಅಭ್ಯರ್ಥಿಗಳೂ ಈ ಅವಧಿಯಲ್ಲಿಹೊಸದಾಗಿ ಆಯ್ಕೆಗಳನ್ನು ದಾಖಲಿಸಬಹುದು. ಮೊದಲ ಸುತ್ತಿನಲ್ಲಿದಾಖಲಿಸಿದ ಆಯ್ಕೆಗಳನ್ನೇ ನಂತರದ ಸುತ್ತುಗಳ ಸೀಟು ಹಂಚಿಕೆಗೂ ಪರಿಗಣಿಸಲಾಗುತ್ತದೆ. ಆಯ್ಕೆಗಳನ್ನು ದಾಖಲಿಸಲು ಒಮ್ಮೆ ಮಾತ್ರ ಅವಕಾಶ ಇರುವುದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಆಯ್ಕೆಗಳನ್ನು ದಾಖಲಿಸುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ . ಪ್ರಸನ್ನ ಮನವಿ ಮಾಡಿದ್ದಾರೆ.