ವಾಷಿಂಗ್ಟನ್ : ‘‘ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರದಲ್ಲಿಚೀನಾ ಸೇರಿದಂತೆ ವಿಶ್ವದ ಎಲ್ಲಾದೇಶಗಳಿಗಿಂತ ಅಮೆರಿಕದ ಮುನ್ನಡೆ ಕಾಯ್ದುಕೊಳ್ಳುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ಸಲಹೆಗಾರ ಹಾಗೂ ಕೃತಕ ಬುದ್ಧಿಮತ್ತೆ ಕಾರ್ಯಪಡೆ ರಚನೆ ಮಾಡಲಾಗುವುದು,’’ ಎಂದು ಡೊನಾಲ್ಡ… ಟ್ರಂಪ್ ಘೋಷಣೆ ಮಾಡಿದ್ದಾರೆ. ‘‘ಅಸ್ತಿತ್ವದಲ್ಲಿರುವ ಕ್ರಿಮಿನಲ್ ಮತ್ತು ನಾಗರಿಕ ನ್ಯಾಯ ಸಂಹಿತೆ ವ್ಯವಸ್ಥೆಯ ಅಡಿಯಲ್ಲಿಎಐ ಉದ್ಯಮದ ಬೆಳವಣಿಗೆಯನ್ನು ನಮ್ಮ ಆಡಳಿತ ಬೆಂಬಲಿಸಲಿದೆ. ಸಂಭವನೀಯ ತಪ್ಪುಗಳನ್ನು ಆರಂಭದಲ್ಲಿಯೇ ಗುರುತಿಸಿ, ಸರಿಪಡಿಸಲಿದೆ,’’ ಎಂದು ಟ್ರಂಪ್ ಹೇಳಿದ್ದಾರೆ. ‘‘ಎಐ ಉದ್ಯಮದ ಬೆಳವಣಿಗೆಯನ್ನು ಪೋಷಿಸುತ್ತೇವೆ. ಸ್ಪೇಸ್ ಪೋರ್ಸ್ ಮಾದರಿಯಲ್ಲೇ ಎಐ ಪೋರ್ಸ್ ರಚಿಸುತ್ತೇವೆ. ಹೆಚ್ಚಿನ ಬುದ್ಧಿವಂತಿಕೆ ಹೊಂದಿದ ವ್ಯಕ್ತಿಗಳು ಮಾತ್ರ ಎಐ ಸಲಹೆಗಾರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಎಐ ಉದ್ಯಮ ದೇಶದ ಆಂತರಿಕ ಉತ್ಪನ್ನದ 25% ರಷ್ಟು ಪಾಲನ್ನು ಹೊಂದಬಹುದು,’’ ಎಂದು ಟ್ರಂಪ್ ಅಂದಾಜಿಸಿದ್ದಾರೆ.