ಇಂಟ್ರೊ: ಜಾಗತಿಕವಾಗಿ ಸೂಪರ್ ಫುಡ್ ಆಗಿ ಗಮನ ಸೆಳೆಯುತ್ತಿರುವ ನುಗ್ಗೆ ಹೊಸ ಪ್ರಯೋಗಗಳಿಗೆ ಒಗ್ಗಿಕೊಳ್ಳುತ್ತಿದ್ದು, ಈ ಮೂಲಕ ಆಹಾರ ಹಾಗೂ ಆರೋಗ್ಯ ಕ್ಷೇತ್ರದಲ್ಲಿತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿದೆ.ಲವಲವಿಕೆ ಸುದ್ದಿಲೋಕ
ಒಂದು ಕಾಲದಲ್ಲಿಭಾರತದ ಮನೆಗಳ ಹಿತ್ತಲಿನಲ್ಲಿಕಾಯಂ ಸ್ಥಾನ ಪಡೆದಿದ್ದ ನುಗ್ಗೆ ಗಿಡ ಈಗ ಜಾಗತಿಕ ಮಟ್ಟದಲ್ಲಿವೆಲ್ನೆಸ್ ಕ್ಷೇತ್ರದಲ್ಲಿಸೂಪರ್ ಫುಡ್ ಆಗಿ ಹೊರ ಹೊಮ್ಮಿದೆ. ಅಷ್ಟೇ ಅಲ್ಲಇದರಿಂದ ತಯಾರಿಸಬಹುದಾದ ಆಹಾರ ಪದಾರ್ಥಗಳು ಕೂಡ ಹೊಸ ಹೊಸ ಪ್ರಯೋಗಳಿಗೆ ಒಳಗಾಗುತ್ತಿದೆ. ಇದರ ಎಲೆಗಳು, ಹೂವುಗಳು, ಕಾಯಿಗಳು ಹಾಗೂ ಬೀಜಗಳಲ್ಲಿಅಪಾರ ಪ್ರಮಾಣದ ವಿಟಮಿನ್ , ಪ್ರೊಟೀನ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ತುಂಬಿವೆ. ಆದರೆ, ನುಗ್ಗೆಯ ಬೀಜ ಮತ್ತು ಎಲೆಗಳಲ್ಲಿರುವ ಸ್ವಾಭಾವಿಕ ಕಹಿ ಮುಖಭಾವದಿಂದಾಗಿ ಇದನ್ನು ದಿನನಿತ್ಯದ ಆಹಾರದಲ್ಲಿಬಳಸಲು ಹಲವರು ಹಿಂಜರಿಯುತ್ತಿದ್ದರು. ಈ ಸಮಸ್ಯೆಗೀಗ ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ವಿಭಾಗದ ವಿಜ್ಞಾನಿಗಳು ಸೂಕ್ತ ಪರಿಹಾರ ಕಂಡುಕೊಂಡಿದ್ದಾರೆ. ನುಗ್ಗೆ ಮರದ ಪ್ರತಿಯೊಂದು ಭಾಗವನ್ನೂ ತ್ಯಾಜ್ಯವಿಲ್ಲದೆ, ಕಹಿ ಇಲ್ಲದೆ ಆಹಾರದಲ್ಲಿಬಳಸುವ ಹೊಸ ತಂತ್ರಜ್ಞಾನವನ್ನು ಅವರು ಅಭಿವೃದ್ಧಿಪಡಿಸಿದ್ದಾರೆ. ಈ ಮೂಲಕ ಇದರ ಆರೋಗ್ಯಪೂರ್ಣ ರುಚಿಯ ಜಾಲವೂ ವಿಸ್ತರಿಸುತ್ತಿದೆ.
ರುಚಿಯ ವೈವಿಧ್ಯ
ನುಗ್ಗೆಯ ಎಲೆಗಳನ್ನು ಒಣಗಿಸಿ ತಯಾರಿಸುವ ನುಗ್ಗೆ ಹುಡಿ ಟೀ, ಕ್ಯಾಪ್ಸೂಲ್ ಗಳು ಮತ್ತು ಶೇಕ್ ಗಳಿಗೆ ಪಾಶ್ಚಿಮಾತ್ಯ ದೇಶಗಳಲ್ಲಿಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ರೊಟೀನ್ , ಪ್ರಮುಖ ವಿಟಮಿನ್ ಗಳು ಹಾಗೂ ಖನಿಜಾಂಶಗಳ ಗಣಿಯಾಗಿರುವುದರಿಂದ, ಸಸ್ಯಾಹಾರಿ ಮತ್ತು ಫಿಟ್ ನೆಸ್ ಪ್ರಿಯರಿಗೆ ಇದು ಪ್ರಮುಖ ಸೂಪರ್ ಫುಡ್ ಆಗಿದೆ. ಕೇವಲ ಎಲೆಯ ಪೌಡರ್ ಗೆ ಸೀಮಿತವಾಗದೆ, ನುಗ್ಗೆ ಎಲೆ ಮತ್ತು ಬೀಜಗಳನ್ನು ಬಳಸಿ ಮಕ್ಕಳು ಮತ್ತು ಯುವಕರಿಗೆ ಇಷ್ಟವಾಗುವ ಪಿಜ್ಜಾ ಬೇಸ್ , ಪ್ಯಾನ್ ಕೇಕ್ ಮತ್ತು ಕುಕೀಸ್ ಗಳು ಸೆಳೆಯುತ್ತಿವೆ. ನುಗ್ಗೆ ಬೀಜದ ಎಣ್ಣೆಯು ಆಲೀವ್ ಎಣ್ಣೆಯಷ್ಟೇ ಪೌಷ್ಟಿಕ ಗುಣಗಳನ್ನು ಹೊಂದಿದೆ. ಇದನ್ನು ಬಳಸಿ ನಾಲಿಗೆಗೆ ರುಚಿ ನೀಡುವ ಮಯೋನೈಸ್ ಕೂಡ ಸಿದ್ಧಪಡಿಸಲಾಗಿದೆ. ಕೆಫೀನ್ ಹೊಂದಿರುವ ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್ ಗಳಿಗೆ ಪರ್ಯಾಯವಾಗಿ ಯುವಜನತೆ ನುಗ್ಗೆ ಟೀಯತ್ತ ಒಲವು ತೋರುತ್ತಿದ್ದಾರೆ.
ವೆಲ್ನೆಸ್ ಮಾರುಕಟ್ಟೆಯಲ್ಲಿನುಗ್ಗೆ ಹವಾ
ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಫಿಟ್ ನೆಸ್ ಹಾಗೂ ವೆಲ್ನೆಸ್ ಇನ್ ಫ್ಲುಯೆನ್ಸರ್ ಗಳು ತಮ್ಮ ಮಾರ್ನಿಂಗ್ ಡಿಟಾP್ಸ… ಸ್ಮೂಥಿ ಮತ್ತು ಗ್ರೀನ್ ಟೀಗಳಲ್ಲಿನುಗ್ಗೆ ಪೌಡರ್ ಬಳಸಿ ಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳು ನುಗ್ಗೆಯ ಔಷಧೀಯ ಗುಣಗಳನ್ನು ಸಾರ್ವಜನಿಕವಾಗಿ ಹೊಗಳಿದ್ದು, ಪಾಶ್ಚಿಮಾತ್ಯ ದೇಶಗಳಿಗೂ ಈ ಹಿತ್ತಲ ಗಿಡದ ಶಕ್ತಿ ಅರಿವಾಗುವಂತೆ ಮಾಡಿದೆ. ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿನುಗ್ಗೆಸೊಪ್ಪನ್ನು ಪರಾಠಾ, ಜ್ಯೂಸ್ ಅಥವಾ ಪೌಡರ್ ರೂಪದಲ್ಲಿನಿತ್ಯದ ಆಹಾರದಲ್ಲಿಸೇರಿಸಿಕೊಳ್ಳುವತ್ತ ಗಮನ ನೀಡುತ್ತಿದ್ದಾರೆ. ಜಾಗತಿಕ ನುಗ್ಗೆ ಉತ್ಪನ್ನಗಳ ಮಾರುಕಟ್ಟೆ ಮೌಲ್ಯವು ಶತಕೋಟಿ ಡಾಲರ್ ಗಳನ್ನು ತಲುಪಿದ್ದು, ಮುಂದಿನ ದಶಕದಲ್ಲಿವೇಗವಾಗಿ ಬೆಳೆಯುವ ಮುನ್ಸೂಚನೆ ಹೊಂದಿದೆ.
ಬಾಕ್ಸ್
ಆರೋಗ್ಯ ಪ್ರಯೋಜನ9/19/2026 5:50:29 Pಋ
ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ದೇಹವನ್ನು ಉರಿಯೂತ ಮತ್ತು ಕೋಶಗಳ ಹಾನಿಯಿಂದ ರಕ್ಷಿಸುತ್ತವೆ. ನುಗ್ಗೆಯಲ್ಲಿರುವ ಕ್ಲೋರೊಜೆನಿಕ್ ಆಸಿಡ್ ಮಧುಮೇಹಿಗಳಲ್ಲಿರಕ್ತದ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಯುತ್ತದೆ. ನುಗ್ಗೆಯ ಎಣ್ಣೆ ಮತ್ತು ಎಲೆಗಳ ಸಾರವು ಚರ್ಮದ ಸುಕ್ಕುಗಳನ್ನು ತಡೆದು, ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ನಾರಿನಂಶ ಹೊಂದಿರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.ಕ್ಯಾಲ್ಷಿಯಂ ಮತ್ತು ಮೆಗ್ನೀಷಿಯಂ ಸಮೃದ್ಧವಾಗಿದ್ದು ಮೂಳೆ ಹಾಗೂ ಹಲ್ಲುಗಳನ್ನು ಬಲಪಡಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹಕಾರಿ. ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ದೇಹದ ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ವಿಟಮಿನ್ ಎ ಕಣ್ಣಿನ ದೃಷ್ಟಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.