ಅಮೆರಿಕ

Contributed byShrividya Rao|Vijaya Karnataka
importance and process of midterm elections in america
ಅಮೆರಿಕದ ಮಧ್ಯಂತರ ಚುನಾವಣೆ

ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿಮಧ್ಯಂತರ ಚುನಾವಣೆಗಳು ಅತ್ಯಂತ ನಿರ್ಣಾಯಕ ಪಾತ್ರವಹಿಸುತ್ತವೆ. ವಿಶ್ವದ ಪ್ರಮುಖ ಪ್ರಜಾಪ್ರಭುತ್ವಗಳಲ್ಲಿಒಂದಾದ ಅಮೆರಿಕದ ಈ ಚುನಾವಣೆಗಳ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಅಮೆರಿಕದ ಅಧ್ಯಕ್ಷರ ಅಧಿಧಿಧಿಕಾರಾವಧಿಧಿಧಿ ಒಟ್ಟು ನಾಲ್ಕು ವರ್ಷಗಳು. ಇವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತವೆ. ಈ ನಾಲ್ಕು ವರ್ಷಗಳ ಅವಧಿಧಿಧಿಯ ಮಧ್ಯಭಾಗದಲ್ಲಿಅಂದರೆ ಸರಿಯಾಗಿ ಎರಡು ವರ್ಷಗಳ ಬಳಿಕ ಬರುವ ಚುನಾವಣೆಗಳನ್ನೇ ಮಧ್ಯಂತರ ಚುನಾವಣೆಗಳು ಎಂದು ಕರೆಯಲಾಗುತ್ತದೆ. ಮಧ್ಯಂತರ ಚುನಾವಣೆಯಲ್ಲಿಅಮೆರಿಕದ ಸಂಸತ್ತು ಹಾಗೂ ಸ್ಥಳೀಯ ಸರಕಾರಗಳಿಗೆ ಪ್ರತಿನಿಧಿಧಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅಮೆರಿಕದ ಕಾಂಗ್ರೆಸ್

ಅಮೆರಿಕದ ಸಂಸತ್ತನ್ನು ಕಾಂಗ್ರೆಸ್ ಎಂದು ಕರೆಯಲಾಗುತ್ತದೆ. ಇದು ದೇಶಕ್ಕೆ ಬೇಕಾದ ಕಾನೂನುಗಳನ್ನು ರೂಪಿಸುವ ಶಾಸಕಾಂಗ. ಇದು ಎರಡು ಸದನಗಳನ್ನು ಹೊಂದಿದೆ. ಹೌಸ್ ಆಫ್ ರೆಪ್ರೆಸೆಂಟೇಟಿÊ್ಸ… (ಪ್ರತಿನಿಧಿಗಳಧಿ ಸಭೆ) ಮತ್ತು ಸೆನೆಟ್ . ಇವೆರಡು ಭಾರತದ ಲೋಕಸಭೆ ಮತ್ತು ರಾಜ್ಯಸಭೆಯನ್ನು ಹೋಲುತ್ತದೆ. ಆದಾಗ್ಯೂ, ಇವರ ಸದಸ್ಯರನ್ನು ಚುನಾಯಿಸುವ ವಿಧಾನ ಮತ್ತು ಅವರ ಅಧಿಧಿಕಾರಾವಧಿಧಿಯು ಸಾಕಷ್ಟು ಭಿನ್ನವಾಗಿವೆ.

ಹೌಸ್ ಆಫ್ ರೆಪ್ರೆಸೆಂಟೇಟಿÊ್ಸ…

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿÊ್ಸ… ಅನ್ನು ಸ್ಥೂಲವಾಗಿ ಭಾರತದ ಲೋಕಸಭೆಗೆ ಹೋಲಿಸಬಹುದು. ಏಕೆಂದರೆ ಇಲ್ಲಿನ ಸದಸ್ಯರು ನಿರ್ದಿಷ್ಟ ಭೌಗೋಳಿಕ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ. ಯುಎಸ್ ಹೌಸ್ ಒಟ್ಟು 435 ಸದಸ್ಯರನ್ನು ಹೊಂದಿದೆ. ಪ್ರತಿಯೊಂದು ರಾಜ್ಯಕ್ಕೂ ಅದರ ಜನಸಂಖ್ಯೆಗೆ ಅನುಗುಣವಾಗಿ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ. ಸದನದ ಅತ್ಯಂತ ಪ್ರಮುಖ ಲಕ್ಷಣವೆಂದರೆ ಇಲ್ಲಿನ ಪ್ರತಿನಿಧಿಗಳು ಕೇವಲ ಎರಡು ವರ್ಷಗಳವರೆಗೆ ಮಾತ್ರ ಸೇವೆ ಸಲ್ಲಿಸುತ್ತಾರೆ. ಇದರರ್ಥ ಪ್ರತಿ ಎರಡು ವರ್ಷಗಳಿಗೊಮ್ಮೆ ಎಲ್ಲಾ ಸ್ಥಾನಗಳಿಗೂ ಚುನಾವಣೆ ನಡೆಯುತ್ತದೆ. ಅಮೆರಿಕದಲ್ಲಿರಾಷ್ಟ್ರಮಟ್ಟದ ಚುನಾವಣೆಗಳು ಪದೇ ಪದೇ ನಡೆಯುತ್ತಿರುವುದಕ್ಕೆ ಇದು ಪ್ರಮುಖ ಕಾರಣಗಳಲ್ಲಿಒಂದಾಗಿದೆ.

ಸೆನೆಟ್

ಅಮೆರಿಕದ ಸೆನೆಟ್ ಭಾರತದ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ವ್ಯವಸ್ಥೆಯನ್ನು ಹೋಲುತ್ತದೆ. ಭಾರತದ ರಾಜ್ಯಸಭೆಯಂತೆ ಸೆನೆಟ್ ಸಹ ಎಂದಿಗೂ ಸಂಪೂರ್ಣವಾಗಿ ವಿಸರ್ಜನೆಗೊಳ್ಳದ ಶಾಶ್ವತ ಸದನವಾಗಿದೆ. ಅಮೆರಿಕದ ಸೆನೆಟ್ ಸದಸ್ಯರ ಅಧಿಕಾರವಧಿಯೂ ಆರು ವರ್ಷಗಳಾಗಿವೆ. ರಾಜ್ಯಸಭೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮೂರನೇ ಒಂದು ಭಾಗದಷ್ಟು ಸದಸ್ಯರು ಬದಲಾಗುವಂತೆ, ಅಮೆರಿಕದ ಸೆನೆಟ್ ನಲ್ಲೂ ಅಷ್ಟೇ ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಆ ಸ್ಥಾನಗಳಿಗೆ ಮರುಚುನಾವಣೆ ನಡೆಯುತ್ತದೆ. ಅಮೆರಿಕದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಸರಿಯಾಗಿ ಇಬ್ಬರು ಸೆನೆಟರ್ ಗಳು ಇರುತ್ತಾರೆ. ಆದರೆ ಭಾರತದಲ್ಲಿರಾಜ್ಯಸಭೆಯ ಸ್ಥಾನಗಳು ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಹಂಚಿಕೆಯಾಗುತ್ತವೆ.

ಅಮೆರಿಕದ ಮಧ್ಯಂತರ ಚುನಾವಣೆಗಳು

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅವಧಿಧಿಯ ಮಧ್ಯದಲ್ಲಿಅಂದರೆ ಎರಡು ವರ್ಷಗಳು ಪೂರ್ಣಗೊಂಡ ನಂತರ ನಡೆಯುವ ಚುನಾವಣೆ ಇದಾಗಿದೆ. ಅಮೆರಿಕದ ಅಧ್ಯಕ್ಷರ ಅಧಿಧಿಕಾರಾವಧಿಧಿ 4 ವರ್ಷಗಳು. ಆದರೆ, ಈ ಚುನಾವಣೆಯಲ್ಲಿಅಧ್ಯಕ್ಷರಿಗೆ ಮತವಿರುವುದಿಲ್ಲ. ಬದಲಾಗಿ, ಅಮೆರಿಕದ ಸಂಸತ್ತಾದ ಕಾಂಗ್ರೆಸ್ ನ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿÊ್ಸ…ನ ಎಲ್ಲಾ435 ಸ್ಥಾನಗಳಿಗೆ ಮತ್ತು ಮೇಲ್ಮನೆಯಾದ ಸೆನೆಟ್ ನ ಮೂರನೇ ಒಂದು ಭಾಗದಷ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಇದರೊಂದಿಗೆ ಅನೇಕ ರಾಜ್ಯಗಳ ಗವರ್ನರ್ ಗಳು ಮತ್ತು ಸ್ಥಳೀಯ ಪ್ರತಿನಿಧಿಧಿಗಳನ್ನು ಸಹ ಆಯ್ಕೆ ಮಾಡಲಾಗುತ್ತದೆ. ಮುಂದಿನ ಯುಎಸ್ ಮಧ್ಯಂತರ ಕಾಂಗ್ರೆಸ್ ಚುನಾವಣೆಗಳು ನವೆಂಬರ್ 2026ರಲ್ಲಿನಿಗದಿಯಾಗಿವೆ.

ಅಧ್ಯಕ್ಷರ ಅಧಿಧಿಕಾರದ ಮೇಲೆ ಪ್ರಭಾವ

ಪ್ರಸ್ತುತ ಅಧಿಧಿಕಾರದಲ್ಲಿರುವ ಅಧ್ಯಕ್ಷರ ಪಕ್ಷಕ್ಕೆ ಸಂಸತ್ತಿನಲ್ಲಿಬಹುಮತ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಈ ಮಧ್ಯಂತರ ಚುನಾವಣೆ ನಿರ್ಧರಿಸುತ್ತದೆ. ಒಂದು ವೇಳೆ ಪ್ರತಿಪಕ್ಷಗಳು ಸಂಸತ್ತಿನಲ್ಲಿಮೇಲುಗೈ ಸಾಧಿಧಿಸಿದರೆ, ಅಧ್ಯಕ್ಷರಿಗೆ ತಮಗೆ ಬೇಕಾದ ಹೊಸ ಕಾನೂನುಗಳು ಅಥವಾ ವಿಧೇಯಕಗಳನ್ನು ಪಾಸ್ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದು ಸಾಮಾನ್ಯವಾಗಿ ಹಾಲಿ ಅಧ್ಯಕ್ಷರ ಸರಕಾರದ ಕಾರ್ಯವೈಖರಿಯ ಬಗ್ಗೆ ಜನತೆ ನೀಡುವ ಮಧ್ಯಂತರ ತೀರ್ಪು ಎಂದೇ ಪರಿಗಣಿಸಲ್ಪಡುತ್ತದೆ. ಇತಿಹಾಸವನ್ನು ಗಮನಿಸಿದರೆ ಮಧ್ಯಂತರ ಚುನಾವಣೆಗಳಲ್ಲಿ ಪ್ರಸ್ತುತ ಅಧ್ಯಕ್ಷರು ಅಧಿಧಿಕಾರದಲ್ಲಿರುವ ಪಕ್ಷವೇ ಸಂಸತ್ತಿನಲ್ಲಿ ಹಿನ್ನಡೆ ಅನುಭವಿಸುವುದು ಮತ್ತು ಸ್ಥಾನಗಳನ್ನು ಕಳೆದುಕೊಳ್ಳುವುದು ಹೆಚ್ಚು. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಿಗೆ ಹೋಲಿಸಿದರೆ ಮಧ್ಯಂತರ ಚುನಾವಣೆಗಳಲ್ಲಿಮತದಾನ ನಡೆಯುವ ಪ್ರಮಾಣ ಕಡಿಮೆಯಿರುತ್ತದೆ.

ಈ ಚುನಾವಣೆಗಳು ಏಕೆ ಮುಖ್ಯ ?

ಅಮೆರಿಕದಲ್ಲಿಮಧ್ಯಂತರ ಚುನಾವಣೆಯು ಕಡ್ಡಾಯವಾಗಿದೆ. ರಾಜಕಾರಣಿಗಳು ಸದಾ ಜನರ ಅಭಿಪ್ರಾಯಕ್ಕೆ ಸ್ಪಂದಿಸುವಂತೆ ಮತ್ತು ತಮ್ಮ ಕ್ಷೇತ್ರಗಳ ಜನರಿಗೆ ನೇರವಾಗಿ ಉತ್ತರದಾಯಿಗಳಾಗಿರುವಂತೆ ಮಾಡಲು ಈ ಕಡಿಮೆ ಅವಧಿಧಿಯ ನಿಯಮವನ್ನು ರೂಪಿಸಲಾಗಿದೆ. ಪ್ರಸ್ತುತ ಅಧ್ಯಕ್ಷರ ಕಾರ್ಯವೈಖರಿಗೆ ಜನತೆ ಆಡಳಿತಾತ್ಮಕ ವರದಿ ಕಾರ್ಡ್ ನೀಡಲು ಇದು ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ಸಂಸತ್ತಿನಲ್ಲಿಯಾವ ಪಕ್ಷಕ್ಕೆ ಬಹುಮತವಿರಬೇಕು ಎಂಬುದನ್ನು ಇದು ನಿರ್ಧರಿಸುತ್ತದೆ.