ಇರಾನ್ ಷರತ್ತಿಗೆ ಟ್ರಂಪ್ ಕೆಂಡಾಮಂಡಲ

Contributed byBeeralinge gowda|Vijaya Karnataka
trumps serious warning against iran three options to choose from
ವಾಷಿಂಗ್ಟನ್ : ಮಧ್ಯಪ್ರಾಚ್ಯ ಯುದ್ಧ ಅಂತ್ಯಕ್ಕೆ ಏಳು ಷರತ್ತು ವಿಧಿಸಿದ ಇರಾನ್ ವಿರುದ್ಧ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ‘‘ಯುದ್ಧದ ಕುರಿತು ನಿರ್ಧಾರ ಕೈಗೊಳ್ಳುವ ಹಂತದಲ್ಲಿದ್ದೇವೆ. ನಮ್ಮ ಜತೆಗೆ ಇರಾನ್ ಆಡಳಿತ ಸರಿಯಾಗಿ ನಡೆದುಕೊಳ್ಳದಿದ್ದರೆ ಬಹಳ ದೊಡ್ಡ ಘಟನೆಗಳು ಸದ್ಯದಲ್ಲೇ ಸಂಭವಿಸಲಿವೆ,’’ ಎಂದು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಸಂಸ್ಥೆಗೆ ಭಾನುವಾರ ನೀಡಿದ ಸಂದರ್ಶನದಲ್ಲಿಮಾತನಾಡಿರುವ ಟ್ರಂಪ್ , ‘‘ಇಡೀ ರಾಷ್ಟ್ರವನ್ನು ಸ್ಫೋಟಿಸುವ ನಿರ್ಧಾರ ಕೈಗೊಳ್ಳುವ ಮೊದಲು ಇರಾನ್ ಆಡಳಿತ ಅಮೆರಿಕ ಜತೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು,’’ ಎಂದು ತಾಕೀತು ಮಾಡಿದ್ದಾರೆ.
‘‘ಯುದ್ಧ ಕೊನೆಗಾಣಿಸುವ ಸಂಬಂಧ ನಮ್ಮ ಮುಂದೆ ಮೂರು ಆಯ್ಕೆಗಳಿವೆ. ಮೊದಲನೇಯದು ಇರಾನ್ ದೇಶವನ್ನು ಸಂಪೂರ್ಣ ನಾಶಪಡಿಸುವುದು. 2ನೇಯದು ಆರ್ಥಿಕವಾಗಿ ಕುಸಿಯುವಂತೆ ಮಾಡುವುದು ಅಥವಾ ಅಮೆರಿಕ ಜತೆ ಒಪ್ಪಂದ ಮಾಡಿಕೊಳ್ಳುವುದನ್ನು ಬಿಟ್ಟರೆ ಟೆಹರಾನ್ ಗೆ ಬೇರೆ ದಾರಿಯೇ ಇಲ್ಲ,’’ ಎಂದು ಟ್ರಂಪ್ ಹೇಳಿದ್ದಾರೆ.