ಅಮರ್ಥ ಮೂವಿ ರಿವ್ಯೂ

Contributed bySOMASHEKAR B|Vijaya Karnataka
amruth a festival of comedy and love
ಅಮರ್ಥ ಹಸಿರು ಕಾನನದ ಮಧ್ಯೆ ಪುಟ್ಟದೊಂದು ಹಳ್ಳಿ. ಅಲ್ಲೊಂದು ಪ್ರೌಢ ಶಾಲೆ. ಗದರುವ ಪಿಟಿ ಮಾಸ್ತರ್ , ಬುದ್ಧಿವಾದ ಹೇಳುವ ಟೀಚರ್ , ಕೀಟಲೆ ಮಾಡುವ ಹುಡುಗ-ಹುಡುಗಿಯರು. ಈ ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲೇ ಆ ಇಬ್ಬರ ನಡುವೆ ಅರಳುವ ಪ್ರೀತಿ. ಎಸ್ ಎಸ್ ಎಲ್ ಸಿ ಮುಗಿದ ಬಳಿಕ ಕಾರಿನ ಕಿಟಕಿಯಿಂದ ಸಪ್ಪೆಮೋರೆ ಹಾಕಿಕೊಂಡು ಕೈ ಬೀಸುತ್ತ ಪಟ್ಟಣಕ್ಕೆ ತೆರಳುವ ಪ್ರಿಯತಮೆ... ಇಂತಹ ಕಥಾಹಂದರಗಳುಳ್ಳ ಸಿನಿಮಾಗಳು ಕನ್ನಡದಲ್ಲಿಸಾಕಷ್ಟು ಬಂದಿವೆ. ಇವುಗಳ ಸಾಲಿಗೇ ಅಮರ್ಥ ಸಿನಿಮಾ ಸೇರಿದರೂ ಕತೆ ಹೇಳುವಿಕೆಯಲ್ಲಿ, ಹಾಸ್ಯದಲ್ಲಿ, ವಿದ್ಯಾರ್ಥಿಗಳ ಕೀಟಲೆಯಲ್ಲಿಹೊಸತನಧಿವಿದೆ. ಕಥಾನಾಯಕ ರಮೇಶ್ (ಶ್ರೀನಗರ ಕಿಟ್ಟಿ), ನಾಯಕಿ ಲಕ್ಷ್ಮೇ ( ಮೇಘನಾ ರಾಜ್ ) ನಡುವೆ ಅಮೃತಹಳ್ಳಿಯ ಪ್ರೌಢಶಾಲೆಧಿಯಲ್ಲಿಪ್ರೀತಿಯ ಬಳ್ಳಿ ಹುಟ್ಟುತ್ತದೆ. ಇದು ಗಾಢವಾಗಬೇಕು ಎನ್ನುವಷ್ಟರಲ್ಲೇ ಲಕ್ಷ್ಮೇಗೆ ಬೇರೊಬ್ಬ ಬರೆದ ಲವ್ ಲೆಟರ್ ಆಕೆಯ ತಾಯಿಗೆ ಸಿಗುತ್ತದೆ. ತಂದೆ ರಾಯರು ಕುಪಿತಗೊಂಡು ರಮೇಶ್ ನಿಗೆ ಕೊಡಲು ಹೋದ ಪೆಟ್ಟು ಆತನ ತಂದೆಗೆ ಬೀಳುತ್ತದೆ. ಲಕ್ಷ್ಮೇ ಸಿಟಿಗೆ ಹೋದರೆ, ತಂದೆಗೆ ಅವಮಾನವಾಯಿತಲ್ಲಎಂದು ರಮೇಶ್ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾನೆ. ಇವರಿಬ್ಬರ ನಡುವಿನ ಪ್ರೀತಿ ಮಾತ್ರವಲ್ಲಗೋವಿಂದಣ್ಣ ಎಂಬಾತನೂ ಸಾಯುತ್ತಾನೆ. ಆಗ ಕತೆಗೆ ತಿರುವು ಸಿಗುತ್ತದೆ. ಇದರ ನಡುವೆ ಅರವಿಂದ್ ಬೋಳಾರ್ , ಪುಷ್ಪರಾಜ್ ಬೊಳ್ಳಾರ್ , ದೀಪಕ್ ರೈ ಪಾಣಾಜೆ ಹಾಸ್ಯ ಪ್ರಸಂಗ ನಗುವಿನ ಕಚಗುಳಿ ಇರಿಸುತ್ತಾರೆ. ‘ಭಾವ’ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್ ‘ಬಾಚು’ ಪಾತ್ರದ ಮೂಲಕ ಮೋಹನ್ (ಪುಷ್ಪರಾಜ್ ) ಬಳಿಯ ಹಣ ‘ಬಾಚು’ವ ಸನ್ನಿವೇಶಗಳು ಪ್ರೇಕ್ಷಕರನ್ನು ನಗುವಿನ ಕಡಲಲ್ಲಿಮುಳುಗಿಸುತ್ತಾರೆ. ಆದರೆ, ಇವರ ಹಾಸ್ಯವು ಇಂಟರ್ ವಲ್ ಮುನ್ನವೇ ಮುಗಿದು, ಸಿನಿಮಾ ಮುಗಿಯುವವರೆಗೆ ನಗು ಮಾಯವಾಗುತ್ತದೆ. ಸಿಟಿಗೆ ಹೋದ ಲಕ್ಷ್ಮೇ ಐಟಿ ಉದ್ಯೋಗ ಪಡೆಯುಧಿತ್ತಾಳೆ. ಅಪ್ಪ-ಅಮ್ಮನ ಒತ್ತಾಯಕ್ಕೆ ಮಣಿದು ಮದುವೆಧಿಯಾದವಧಿನಿಂದ ವಿಚ್ಛೇದನ ಪಡೆಯುತ್ತಾಳೆ. ಬೇರೊಂದು ಮದುವೆಯಾಗಲು ತಂದೆ-ತಾಯಿ ಒತ್ತಾಯಿಸಿದರೂ ವಿಚ್ಛೇದನದ ನಂತರದ ಸ್ವಾತಂತ್ರ್ಯವೇ ಬೆಸ್ಟ್ ಎಂದು ಸುಮ್ಮನಿರುತ್ತಾಳೆ. ಇದೇ ವೇಳೆ, ದೊಡ್ಡ ಉದ್ಯಮಿಯಾಗಿ ರಮೇಶ್ ಮತ್ತೆ ಊರಿಗೆ ಬರುತ್ತಾನೆ. ಲಕ್ಷ್ಮೇ ನೆನಪಲ್ಲೇ ರಮೇಶ್ ಮದುವೆಯಾಗಿರಲ್ಲ. ರಮೇಶ್ ನೆನಪಲ್ಲೇ ಆತ ಕೊಟ್ಟ ಲವ್ ಲೆಟರ್ ಅನ್ನು ಆಕೆ ಜತನದಿಂದ ಕಾಪಿಟ್ಟುಕೊಂಡಿರುತ್ತಾಳೆ. ಮೊದಲ ಪ್ರೀತಿಗೆ ಎರಡನೇ ಅವಕಾಶ ಸಿಕ್ಕು ಇವರಿಬ್ಬರೂ ಒಂದಾಗುತ್ತಾರಾ? ಅದಕ್ಕೆ ಸಿನಿಮಾವನ್ನೇ ನೋಡಬೇಕು. ಬದುಕಿನ ಬಂಡಿ ಹತ್ತಿ ಊರು ಬಿಟ್ಟು ಹೋದ ಶಾಲೆಯ ಗೆಳೆಯರ ‘ಗೆಟ್ ಟು ಗೆದರ್ ’ ಸನ್ನಿವೇಶವು ಪ್ರತಿಯೊಬ್ಬರ ಶಾಲಾ ದಿನಗಳನ್ನು ನೆನಪಿಸುತ್ತವೆ. ಅದರಲ್ಲಿ‘ಅಮರ್ಥ’ ಸಿನಿಮಾದ ಕತೆ ‘ಸಮರ್ಥ’ ಎನಿಸುತ್ತದೆ. ಸಸ್ಪೆನ್ಸ್ ನಲ್ಲಿಯೇ ಕತೆ ಮುಗಿಸಲು ಹೋಗುವ ನಿರ್ದೇಶಕರು ಪ್ರೇಕ್ಷಕರಲ್ಲೇ ಹತ್ತಾರು ಪ್ರಶ್ನೆಗಳನ್ನು ಉಳಿಸುತ್ತಾರೆ ಎಂಬ ಬೇಸರ ಕಾಡುತ್ತದೆ. ಎರಡು ಹಾಡುಗಳು ಕೇಳುವಂತಿವೆ. ಛಾಯಾಗ್ರಹಣ ಕೂಡ ಸಿನಿಪ್ರಿಯರ ಕಣ್ಣುಗಳಿಗೆ ಮುದ ನೀಡುತ್ತದೆ. ಮೇಘನಾ ರಾಜ್ ಕಮ್ ಬ್ಯಾಕ್ ಮಾಡಿದ್ದಾರೆ. ಪಾತ್ರಧಿವನ್ನು ‘ಕುಟ್ಟಿ’ ಕೆಡವೋ ಸಾಮರ್ಥ್ಯ ಇರುವ ‘ಕಿಟ್ಟಿ’ಧಿಯನ್ನು ಇನ್ನಷ್ಟು ಬಳಸಿಕೊಳ್ಳಬೇಕಿತ್ತೇನೋ ಅನಿಸುತ್ತದೆ. - ಬಿ.ಸೋಮಶೇಖರ್ ತಾರಾಗಣ: ಶ್ರೀನಗರ ಕಿಟ್ಟಿ, ಮೇಘನಾ ರಾಜ್ , ಗುರು ಹೆಗ್ಡೆ, ಪುಷ್ಪರಾಜ್ ಬೊಳ್ಳಾರ್ , ಅರವಿಂದ್ ಬೋಳಾರ್ . ನಿರ್ದೇಶನ: ಗುರು ಹೆಗ್ಡೆ, ವಿನಯ್ ಪ್ರೀತಂ. ಸಂಗೀತ: ಶಿನೋಯ್ ವಿ. ಜೋಸೆಫ್ , ಪಂಚಮ್ ಜೀವಾ. ಛಾಯಾಗ್ರಹಣ: ಗುರುಪ್ರಶಾಂತ್ ರೈ. ಸ್ಟಾರ್ : ** *