‘ಶಿಕ್ಷಣದ ಜತೆಗೆ ಸಂಸ್ಕೃತಿ ಉಳಿಸಿ ’

Contributed byverendragoud@gmail.com|Vijaya Karnataka
education and culture preservation
ಎಚ್ .ಎಸ್ .ಜಿ.ವಿದ್ಯಾಮಂದಿರದ ಪ್ರಾಂಶುಪಾಲ ಕೊಟ್ರೇಶ್ ಹೇಳಿಕೆ

‘ಶಿಕ್ಷಣದ ಜತೆಗೆ ಸಂಸ್ಕೃತಿ ಉಳಿಸಿ ’
ವಿಕ ಸುದ್ದಿಲೋಕ ಸಂಡೂರು

‘‘ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ನಮ್ಮ ದೇಶದ ಸಂಸ್ಕೃತಿಗೆ ಕಲೆ, ನೃತ್ಯ, ಜನಪದ ಸಾಹಿತ್ಯ ಅಪಾರ ಕೊಡುಗೆ ನೀಡಿವೆ. ಇಂತಹ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ,’’ ಎಂದು ಎಚ್ .ಎಸ್ .ಜಿ.ವಿದ್ಯಾಮಂದಿರದ ಪ್ರಾಂಶುಪಾಲ ಕೊಟ್ರೇಶ್ ಹೇಳಿದರು.

ತಾಲೂಕಿನ ತೋರಣಗಲ್ಲಿನ ವಿದ್ಯಾನಗರದ ಜಿಂದಾಲ್ ವಿದ್ಯಾಮಂದಿರದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿಆಯೋಜಿಸಿದ್ದ ‘ಚಿಗುರು’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘‘ಶಿಕ್ಷಣದ ಜತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ ಹಾಗೂ ಪರಂಪರೆಯ ಬಗ್ಗೆ ಅರಿವು ಮೂಡಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು. ಜಿಲ್ಲೆಯಲ್ಲಿಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಅವರಿಗೆ ಸೂಕ್ತ ವೇದಿಕೆ ಹಾಗೂ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ,’’ ಎಂದರು.

ಜಿಂದಾಲ್ ವಿದ್ಯಾಮಂದಿರದ ಪ್ರಾಂಶುಪಾಲ ಕೆ.ವಿ.ಶ್ರೀನಿವಾಸನ್ ಮಾತನಾಡಿ, ‘‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಿನ ದಿನಗಳಲ್ಲಿಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯ ಕಲಾವಿದರ ಪ್ರತಿಭೆಗೆ ಉತ್ತೇಜನ ನೀಡಬೇಕು,’’ ಎಂದರು.

ಬಳ್ಳಾರಿಯ ಕವೀಂದ್ರ ಜೆ. ಅವರಿಂದ ತಬಲಾ ಸೋಲೊ, ಓ.ಎಂ.ವರ್ಷಿಣಿ ಅವರಿಂದ ಸುಗಮ ಸಂಗೀತ, ಬಳ್ಳಾರಿ ಕಲಾಂಜಲಿ ಕಲಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ, ಪ್ರಿಯಾಂಕಾ ಎಂ.ಜೋಶಿ ಅವರಿಂದ ಜಾನಪದ ಗೀತೆಗಳು, ಸುಮಲತಾ ಅವರಿಂದ ಏಕಪಾತ್ರಾಭಿನಯ ಹಾಗೂ ಡಿ.ಕೃಷ್ಣಮೂರ್ತಿ ಮತ್ತು ತಂಡದಿಂದ ‘ವಿದ್ಯೆ ತಂದ ಸಂಪತ್ತು’ ನಾಟಕ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಂದಾಲ್ ವಿದ್ಯಾಮಂದಿರದ ಉಪ ಪ್ರಾಂಶುಪಾಲ ಅಂಬಲಿ ನಾಯರ್ , ಜಿಂದಾಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕುಮಾರಸ್ವಾಮಿ, ಸಂಗೀತ ಗಾಯಕ ಕೊಟ್ರೇಶ್ , ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಬಿಎಲ್ ವೈ 31 ಎಸ್ಡಿಆರ್ 1: ಸಂಡೂರಿನ ತೋರಣಗಲ್ಲಿನ ವಿದ್ಯಾನಗರದ ಜಿಂದಾಲ್ ವಿದ್ಯಾಮಂದಿರದಲ್ಲಿಆಯೋಜಿಸಿದ್ದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ಬಿಎಲ್ ವೈ 31 ಎಸ್ಡಿಆರ್ 2:

ಸಂಡೂರಿನ ತೋರಣಗಲ್ಲಿನ ವಿದ್ಯಾನಗರದ ಜಿಂದಾಲ್ ವಿದ್ಯಾಮಂದಿರದಲ್ಲಿಡಿ.ಕೃಷ್ಣಮೂರ್ತಿ ಮತ್ತು ತಂಡದಿಂದ ‘ವಿದ್ಯೆ ತಂದ ಸಂಪತ್ತು’ ನಾಟಕ ಪ್ರದರ್ಶನಗೊಂಡಿತು.