ರಸ್ತೆ ಬದಿಯ ಅಂಗಡಿಯೊಂದರ ಗೋಡೆಗೆ ರಾಯಲ್ ಎನ್ ಫೀಲ್ಡ್ ಡಿಕ್ಕಿಯಾಗಿ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿರುವ ದಾರುಣ ಘಟನೆ ರಾಜಾನುಕುಂಟೆ ಸಮೀಪ ಶನಿವಾರ ಮುಂಜಾನೆ ನಡೆದಿದೆ.ಚಿಕ್ಕಮಗಳೂರು ಮೂಲದ ಕೆ.ಎಂ.ವಚನ್ (20) ಹಾಗೂ ಹಾಸನದ ಬೇಲೂರಿನ ಎ.ಟಿ.ಕೃಷ್ಣನಾಥ್ (19) ಮೃತರು. ದಿಬ್ಬೂರು ಗೇಟ್ ನ ಬಾಡಿಗೆ ಮನೆಯಲ್ಲಿಸ್ನೇಹಿತರ ಜತೆ ವಚನ್ ಹಾಗೂ ಕೃಷ್ಣನಾಥ್ ವಾಸಿಸುತ್ತಿದ್ದರು. ಪ್ರತ್ಯೇಕ ಕಾಲೇಜುಗಳಲ್ಲಿಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಸ್ನೇಹಿತರೆಲ್ಲರೂ ಪ್ರತ್ಯೇಕ ಬೈಕ್ ಗಳಲ್ಲಿಶನಿವಾರ ಮುಂಜಾನೆಯೇ ಯಲಹಂಕದತ್ತ ಹೊರಟಿದ್ದರು. ವಚನ್ ಬೈಕ್ ಚಲಾಯಿಸುತ್ತಿದ್ದ. ಕೃಷ್ಣನಾಥ್ ಹಿಂಬದಿಯಲ್ಲಿಕುಳಿತಿದ್ದ. ಮಾರ್ಗ ಮಧ್ಯೆ ಬೈಕ್ ನ ನಿಯಂತ್ರಣ ಕಳೆದುಕೊಂಡ ವಚನ್ , ಇಟಗಲ್ ಪುರ ಗೇಟ್ ಬಳಿಯ ರಸ್ತೆ ಬದಿಯ ಅಂಗಡಿ ಗೋಡೆಗೆ ಗುದ್ದಿದ್ದಾನೆ. ಪರಿಣಾಮ, ಇಬ್ಬರೂ ಕೆಳಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನೂ ಸ್ನೇಹಿತರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.