ಗುರುವಿನ ಸನ್ಮಾರ್ಗದಿಂದ ಉತ್ತಮ ದಾರಿ

Contributed byckganappanavar@gmail.com|Vijaya Karnataka
gurus path a right for devotion and spiritual growth
ಗುರುವಿನ ಸನ್ಮಾರ್ಗದಿಂದ ಉತ್ತಮ ದಾರಿ

ವಿಕ ಸುದ್ದಿಲೋಕ ಮುಂಡರಗಿ
ಜಗತ್ತಿನಲ್ಲಿಮೊದಲು ತಾಯಿ ಸ್ಥಾನ ನಂತರದಲ್ಲಿಗುರುಗಳು ಆ ಸ್ಥಾನವನ್ನು ತುಂಬುತ್ತಾರೆ. ಇದರಿಂದ ನಮಗೆ ಸನ್ಮಾರ್ಗ ಸಿಗುತ್ತದೆ. ಜೀವನದಲ್ಲಿಗುರುವಿನ ಪಾತ್ರ ಮುಖ್ಯ. ಗುರು ಯಾವುದೇ ವರ ಮತ್ತು ಶಾಪ ಕೊಡುವುದಿಲ್ಲ. ಗುರುವಿನ ಸಂಬಂಧದಿಂದ ಭಕ್ತರಿಗೆ ಅದರ ಫಲ ದೊರೆಯುತ್ತದೆ ಎಂದು ಜ.ಅನ್ನದಾನೀಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿನಡೆದ ಗುರುಪೂರ್ಣಿಮೆ ಹಾಗೂ 1849ನೇ ಮಾಸಿಕ ಶಿವಾನುಭವದ ನೇತೃತ್ವ ವಹಿಸಿ ಅವರು ಆಶೀರ್ವಚನ ನೀಡಿದರು.

ಡಾ.ಅನ್ನದಾನೀಶ್ವರ ಪೂಜ್ಯರು ತ್ರಿಕಾಲ ಲಿಂಗಪೂಜೆ ಕೈಗೊಂಡು ಪರಮಾತ್ಮನ ಸ್ವರೂಪವಾಗಿ ನಮಗೆಲ್ಲಆಶೀರ್ವದಿಸುತ್ತಿದ್ದಾರೆ. ಇಳಿವಯಸ್ಸಿನಲ್ಲೂಸಾಹಿತ್ಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿಶ್ರಮ ಕಾಯಕದಿಂದ ಇದ್ದಾರೆ. ಪೂಜ್ಯರ ಮಾರ್ಗದರ್ಶನ ಪಡೆದ ನಮಗೆ ಪುಣ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಮಾತನಾಡಿ, ಪಾಲಕರು ತಮ್ಮ ಮಕ್ಕಳು ಹಿರಿಯರನ್ನು ಗುರುಗಳನ್ನು ಗೌರವಿಸುವುದನ್ನು ಕಲಿಸಿಕೊಡÜಬೇಕು. ಒಳ್ಳೆಯ ಸಂಸ್ಕೃತಿ ಸಂಸ್ಕಾರ ಗುರುವಿನ ಸ್ಮರಣೆಯಿಂದ ಜೀವನವು ಸುಂದರವಾಗಿರುತ್ತದೆ ಎಂದು ಹೇಳಿದರು.

ಹೊಳಲು ಶ್ರೀ ಚನ್ನಬಸವ ದೇವರು ಮಾತನಾಡಿದರು. ಉತ್ತಮ ಗ್ರಂಥಪಾಲಕ ಮೇವುಂಡಿಯ ಹಾಲಪ್ಪ ಕೊರ್ಲಹಳ್ಳಿ, ಶಸಾಪ ತಾಲೂಕು ಅಧ್ಯಕ್ಷ ವೀರಣ್ಣ ಮಡಿವಾಳರ, ವರ್ತಕ ಸಿದ್ದಲಿಂಗಪ್ಪ ಪಟ್ಟಣಶೆಟ್ಟಿ ಅವರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಖುಷಿ ಮುರಡಿ, ಜಗದ್ಗುರು ಅನ್ನದಾನೀಶ್ವರ ಶ್ರೀಗಳ ಕುರಿತು ವಚನ ನೃತ್ಯ ಹಾಗೂ ಪ್ರತೀಕ್ಷಾ ಹುಳ್ಯಾಳ ಮತ್ತು ಸಂಚನಾ ಕಾಗನೂರಮಠ ತಂಡದವರು ಹಾನಗಲ್ಲಕುಮಾರ ಶಿವಯೋಗಿಗಳವರ ಕುರಿತಾದ ಗೀತೆಗೆ ನೃತ್ಯ ಸಾದರ ಪಡಿಸಿದರು. ಅನೇಕ ಭಕ್ತರು ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು.

ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ ದೇವರು, ಶ್ರೀ ಪ್ರಶಾಂತ ದೇವರು ಉಪಸ್ಥಿತರಿದ್ದರು. ಶಿಕ್ಷಕ ನಾಗಭೂಷ ಹಿರೇಮಠ ನಿರೂಪಿಸಿದರು.

ಶಿವಾನುಭವದಲ್ಲಿಶ್ರಾವಣ ಮಾಸದ ಪ್ರಯುಕ್ತ ನಡೆಯುವಂತ ಪುರಾಣ ಪ್ರವಚನ ಹಿನ್ನೆಲೆ ಪುರಾಣ ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆ ಸಹ ನಡೆಯಿತು. ಅಧ್ಯಕ್ಷರಾಗಿ ವಿಶ್ವನಾಥ ಪಾಟೀಲ, ಉಪಾಧ್ಯಕ್ಷರಾಗಿ ಈರಣ್ಣ ಕಾಶಿಗವಿ, ಕಾರ್ಯದರ್ಶಿಯಾಗಿ ಬಸವರಾಜ ಅಂಕದ, ಖಜಾಂಚಿಯಾಗಿ ವಿನಯ್ ಗಂಧದ ಅವರನ್ನು ಆಯ್ಕೆ ಮಾಡಲಾಯಿತು.

ಫೋಟೊ: 31 ಎಂಡಿಆರ್ 6:

ಮುಂಡರಗಿ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿಇತ್ತೀಚೆಗೆ ನಡೆದ ಗುರುಪೂರ್ಣಿಮೆ ಹಾಗೂ ಮಾಸಿಕ ಶಿವಾನುಭವದಲ್ಲಿಡಾ.ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಜ.ಡಾ.ಅನ್ನದಾನೀಶ್ವರ ಶಿವಯೋಗಿಗಳವರು, ಶ್ರೀ ಚನ್ನಬಸವ ದೇವರು, ಶ್ರೀ ಚೇತನ ದೇವರು, ಉಪಸ್ಥಿತರರಿದ್ದರು.