ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆಯಲ್ಲಿಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಹೇಳಿಕೆ
ಸಮಾಜದಲ್ಲಿಘೋರ ಅಪರಾಧ ಜೀವಂತವಿಕ ಸುದ್ದಿಲೋಕ ರಾಯಚೂರು
21ನೇ ಶತಮಾನದಲ್ಲಿನಾವು ತಂತ್ರಜ್ಞಾನ, ವಿಜ್ಞಾನ ಮತ್ತು ಆರ್ಥಿಕತೆಯಲ್ಲಿಎಷ್ಟೇ ಮುನ್ನಡೆ ಸಾಧಿಸಿದ್ದರೂ, ಮಾನವೀಯತೆ ತಲೆತಗ್ಗಿಸುವಂತೆ ಮಾಡುವ ಘೋರ ಅಪರಾಧವು ನಮ್ಮ ಸಮಾಜದಲ್ಲಿಇಂದಿಗೂ ಜೀವಂತವಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ದರಾಮಪ್ಪ ಕಲ್ಯಾಣ್ ರಾವ್ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿಜಿಲ್ಲಾಡಳಿತ, ಜಿ. ಪಂ., ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಮಹಿಳಾ ಸಬಲೀಕರಣ ಘಟಕದ ಸಂಯುಕ್ತಾಶ್ರಯದಲ್ಲಿಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಕ್ರಮ ಸಾಗಣೆ;
ಬಡತನ ಮತ್ತು ನಿರುದ್ಯೋಗ ಉತ್ತಮ ಕೆಲಸ ಮತ್ತು ಹೆಚ್ಚಿನ ಆದಾಯದ ಆಮಿಷವೊಡ್ಡಿ ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಹಿಳೆಯರನ್ನು ಸುಲಭವಾಗಿ ವಂಚಿಸಲಾಗುತ್ತದೆ. ಅದೇ ರೀತಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಅಕ್ರಮ ರಫ್ತು ಅಥವಾ ಸಾಗಣೆ ಮಾಡುವುದು ಶಿಕ್ಷಾರ್ಹ ಅಪರಾಧ. ಆಮಿಷ, ವಂಚನೆ, ಬೆದರಿಕೆ ಅಥವಾ ಬಲವಂತದ ಮೂಲಕ ಮಹಿಳೆಯರನ್ನು ಅವರ ಒಪ್ಪಿಗೆಯಿಲ್ಲದೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕರೆದೊಯ್ದು, ಅವರನ್ನು ಲೈಂಗಿಕ ಶೋಷಣೆ, ಜೀತದಾಳು ಕೆಲಸ, ಬಲವಂತದ ಮದುವೆ ಅಥವಾ ಅಂಗಾಂಗ ಮಾರಾಟಕ್ಕೆ ಒಳಪಡಿಸುವುದೇ ಮಹಿಳೆಯರ ಅಕ್ರಮ ಸಾಗಣೆಯಾಗಿದೆ ಎಂದು ಹೇಳಿದರು.
ಕಠಿಣ ಶಿಕ್ಷೆ:
ದೇಶದ ಪ್ರತಿಯೊಬ್ಬ ಪ್ರಜೆಗೂ ಮಾನವ ಕಳ್ಳ ಸಾಗಣೆæಗೆ ವಿರೋಧಿಸಬೇಕು. ಪ್ರತಿಯೊಬ್ಬರೂ ತಮ್ಮ ಸುತ್ತ ಇಂತಹ ಚಟುವಟಿಕೆಗಳು ಕಂಡು ಬಂದರೆ ತಕ್ಷಣ ಪೊಲೀಸ್ ಇಲಾಖೆಯವರಿಗೆ ಮಾಹಿತಿ ನೀಡಬೇಕು. ಕಾನೂನಿನಲ್ಲಿತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಇದೆ. ಮಹಿಳೆಯರ ಮತ್ತು ಮಕ್ಕಳ ಸಾಗಣೆಗೆ ಸಹಕಾರ, ಪ್ರೋತ್ಸಾಹ ನೀಡುವವರಿಗೂ ಕಠಿಣ ಶಿಕ್ಷೆ ಇದೆ ಎಂದರು.
ಎಲ್ಲನಾಗರಿಕರು ಇಂತಹ ಚಟುವಟಿಕೆಗಳಿಂದ ಎಚ್ಚೆತ್ತುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಮಹಿಳೆ ಈ ಸಮಾಜದ ಕಣ್ಣು, ಆಕೆಗೆ ಗೌರವ, ಭದ್ರತೆ ಮತ್ತು ಸಮಾನ ಅವಕಾಶ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಅಕ್ರಮ ಸಾಗಣೆಯಂತಹ ಕ್ರೂರ ಪಿಡುಗನ್ನು ಸಮಾಜದಿಂದ ಬೇರುಸಹಿತ ಕಿತ್ತೊಗೆಯಲು ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಸಹಾಯವಾಣಿ:
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ್ ಜಿ.ಮಾತನಾಡಿ, ಮಾನವ ಕಳ್ಳ ಸಾಗಣೆ ಶಿಕ್ಷಾರ್ಹ ಅಪರಾಧವಾಗಿದೆ. ಮಾನವ ಕಳ್ಳ ಸಾಗಣೆæ ವಿರೋಧಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಮಹಿಳೆಯರ ಮತ್ತು ಮಕ್ಕಳ ಅನೈತಿಕ ಚಟುವಟಿಕೆಗಳು ನಿಮ್ಮ ಕಣ್ಣು ಮುಂದೆ ಬಂದರೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ನಮ್ಮ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಥವಾ ತುರ್ತು ಪೊಲೀಸ್ ಸಹಾಯವಾಣಿ ಸಂಖ್ಯೆ 112 ಮತ್ತು ಮಹಿಳಾ ಸಹಾಯವಾಣಿ ಸಂಖ್ಯೆ 181ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
ಅಪರಾಧಿಗೆ ವರ:
ಇಂದಿನ ಆಧುನಿಕ ಯುಗದಲ್ಲೂಮಹಿಳೆಯರನ್ನು ಹಾಗೂ ಹೆಣ್ಣುಮಕ್ಕಳನ್ನು
ವಂಚನೆ, ಆಮಿಷ ಅಥವಾ ಬೆದರಿಕೆಯ ಮೂಲಕ ಜೀತದಾಳು ಕೆಲಸ, ಲೈಂಗಿಕ ಶೋಷಣೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಬಲಿಪಶು ಮಾಡುತ್ತಿರುವುದು ಅತ್ಯಂತ ಶೋಚನೀಯ ಸಂಗತಿಯಾಗಿದೆ. ಬಡತನ, ನಿರುದ್ಯೋಗ ಇದರ ಕೊರತೆಯಿಂದ ಅಪರಾಧಿಗಳಿಗೆ ವರವಾಗುತ್ತಿದೆ. ಕೆಲಸದ ನೆಪದಲ್ಲಿಹಳ್ಳಿ ಹಾಗೂ ನಗರದ ಹೆಣ್ಣುಮಕ್ಕಳನ್ನು ಸುಲಭವಾಗಿ ಬಲೆಗೆ ಬೀಳಿಸಿಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶರಣಮ್ಮ, ಮಹಿಳಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಎಂ.ಡಿ.ಗೋಕುಲ್ ಹುಸೇನ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟೇಶ ದೇಸಾಯಿ, ಜಿಲ್ಲಾಅಂಗವಿಕಲರ ಕಲ್ಯಾಣ ಅಧಿಕಾರಿ ಸರಸ್ವತಿ, ಕಾನೂನು ನೆರವು, ಅಭಿರಕ್ಷಕ ಗಣೇಶ್ ಮಾಲಿ ಪಾಟೀಲ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ಚಾಮರಾಜ, ಮಿಷನ್ ಶಕ್ತಿ ಸಂಯೋಜಕ ಬಾವಸಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ತಜ್ಞೆ ಗಿರಿಜಾ ಇತರರು ಇದ್ದರು.
ಆರ್ ಸಿ ಎಚ್ 31ಎಂಎಸ್ 04
ರಾಯಚೂರಿನ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.