ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿಪಿ.ಎಂ. ರಘುನಾಥ್ ಮನವಿ
ವಿಕ ಸುದ್ದಿಲೋಕ ಮುಳಬಾಗಲುಭಾರತದ ಗಡಿ ಉದ್ದಕ್ಕೂ ಸುತ್ತಲೂ ಸೈನಿಕರು ಚಳಿ ಮಳೆ ಬಿಸಿಲು ಎನ್ನದೆ ದೇಶದ ಜನತೆಗಾಗಿ ಕಾವಲು ಕಾಯುತ್ತ ತಮ್ಮ ಪ್ರಾಣವನ್ನೇ ಲೆಕ್ಕಿಸದೆ ದೇಶ ಕಾಯುತ್ತಿದ್ದಾರೆ. ಅವರಿಗೆ ಪ್ರತಿಯೊಬ್ಬ ಭಾರತೀಯರು ಗೌರವ ಸಲ್ಲಿಸಬೇಕೆಂದು ಬಿಜೆಪಿ ಹಿರಿಯ ಮುಖಂಡ ಪಿ.ಎಂ. ರಘುನಾಥ್ ತಿಳಿಸಿದರು.
ನಗರದ ಕುಂಬಾರ ಪಾಳ್ಯದ ಗಾಯತ್ರಿ ಭವನದಲ್ಲಿತಾಲೂಕು ಮಾಜಿ ಯೋಧರ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 27ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಶಿಕ್ಷಕರ ವೃತ್ತಿ, ನಂತರ ದೇಶ ಕಾಯುವ ಸೈನಿಕರ ವೃತ್ತಿ ಅತ್ಯಂತ ಗೌರವ ಸ್ಥಾನದಲ್ಲಿಇರುವ ಕೆಲಸ ಇವರನ್ನು ಪ್ರತಿಯೊಬ್ಬರು ಗೌರವಿಸಬೇಕು. ರೈತ ಜನತೆಗೆ ಊಟ ಕೊಟ್ಟರೆ ಸೈನಿಕ ದೇಶ ಕಾಯುವ ರಕ್ಷಕರಾಗಿದ್ದಾರೆ ಕಾರ್ಗಿಲ್ ಯುದ್ಧದಲ್ಲಿತಮ್ಮ ಪ್ರಾಣವನ್ನು ತ್ಯಾಗ ಮಾಡಿ ದೇಶ ರಕ್ಷಣೆ ಮಾಡಿರುವ ವೀರ ಸೈನಿಕರಿಗೆ ಪ್ರತಿಯೊಬ್ಬರು ವಷÜರ್ ಕ್ಕೊಮ್ಮೆ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಮಾಡುವ ಮೂಲಕ ಯುವ ಪೀಳಿಗೆಗೆ ಸೈನಿಕರ ಕುರಿತು ಅರಿವು ಮೂಡಿಸುವುದು ಉತ್ತಮ ಕಾರ್ಯಾ ಎಂದರು.
ಬಿಜೆಪಿ ಯುವ ಮುಖಂಡ ನಂಗಲಿ ಸತೀಶ್ ಮಾತನಾಡಿ, ಸೈನಿಕರು ನಿವೃತ್ತಿ ಹೊಂದಮೇಲೆ ಮಾಜಿ ಸೈನಿಕರಾಗಿ ಸಮಾಜದಲ್ಲಿಉತ್ತಮ ಕಾರ್ಯಗಳಲ್ಲಿತೊಡಗಿಸಿಕೊಂಡಿದ್ದಾರೆ ಅಂತವರಿಗೆ ಸರಕಾರ ಉಚಿತ ನಿವೇಶನಗಳನ್ನು ನೀಡುವ ಜತೆಗೆ ನಗರದಲ್ಲಿಮಾಜಿ ಸೈನಿಕರ ಭವನಕ್ಕೆ ನಿವೇಶನ ಮಂಜೂರು ಮಾಡಿಸಿ, ಭವನ ಕಟ್ಟಿಕೊಡಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.
ಗಿವರ್ಲಿ ಕೇರ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಗೀತಾ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಆಗಸ್ಟ್ 3ರಂದು ಗಾಯತ್ರಿ ಭವನದಲ್ಲಿಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದ್ದು ಪ್ರತಿಯೊಬ್ಬರು ಶಿಬಿರದಲ್ಲಿಭಾಗವಹಿಸಿ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಸರಕಾರಿ ಅಧಿಕಾರಿಗಳು ಭಾಗವಹಿಸಿದೆ ಗೈರು ಹಾಜರಿ ಆಗಿದ್ದನ್ನು ಕಾರ್ಯಕ್ರಮದಲ್ಲಿಭಾಗವಹಿಸಿದ್ದ ಮುಖ್ಯ ಅತಿಥಿಗಳು ಖಂಡಿಸಿದರಲ್ಲದೆ ಮುಂದಿನ ದಿನಗಳಲ್ಲಾದರೂ ಸರಕಾರಿ ಅಧಿಕಾರಿಗಳು ಭಾಗವಹಿಸಿ ಮಾಜಿ ಸೈನಿಕರಿಗೆ ಉತ್ತೇಜನ ನೀಡಬೇಕೆಂದು ತಿಳಿಸಿದರು.
ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನಡೆಸಲಾಯಿತು ಜತೆಗೆ ನೃತ್ಯ ಪ್ರದರ್ಶನ ನಡೆಸಿದ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಮಾಜಿ ಸೈನಿಕರನ್ನು ಮತ್ತು ಮುಖ್ಯ ಅತಿಥಿಗಳನ್ನು ಕಾರ್ಯಕ್ರಮದಲ್ಲಿಸನ್ಮಾನಿಸಲಾಯಿತು
ತಾಲೂಕು ಮಾಜಿ ಯೋಧರ ಟ್ರಸ್ಟ್ ಅಧ್ಯಕ್ಷ ಗುಜ್ಜನಹಳ್ಳಿ ಜಿ.ಎನ್ .ನಾಗಭೂಷಣ್ ರಾವ್ , ಗೌರವಾಧ್ಯಕ್ಷ ರಹಮತುಲ್ಲಾ, ಕಾರ್ಯದರ್ಶಿ ನದೀಮ್ ಪಾಷಾ, ಖಜಾಂಚಿ ಮಂಜುನಾಥ್ , ನಿವೃತ್ತ ಎನ್ ಸಿಸಿ ಅಧಿಕಾರಿ ಎಂ.ಶಂಕರ್ , ಡಿವಿಜಿ ಕನ್ನಡ ಸಂಘದ ಅಧ್ಯಕ್ಷ ಕೆ.ಮಧುಸೂದನ್ , ವೈದ್ಯಾಧಿಕಾರಿ ಡಾ. ಭಾರತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ ದೇವಾನಂದ್ , ಪತ್ರಕರ್ತ ಎ.ಅಪ್ಪಾಜಿ ಗೌಡ, ವಕೀಲ ವಿ.ಜಯಪ್ಪ, ಬಿಜೆಪಿ ಶ್ರೀನಿವಾಸ ಬಾಬು, ಲಾರೆನ್ಸ್ ಪ್ರಸನ್ನ, ನಾರಾಯಣಪ್ಪ , ಮಾಜಿ ಸೈನಿಕ ನವೀನ್ , ಸತ್ಯನಾರಾಯಣ್ ರಾವ್ , ಸಿಆರ್ ಪಿ ಜಿ.ಏನ್ .ರಾಜಕುಮಾರ, ಎ. ಭಾಷಾ ಇದ್ದರು.
28 ಎಂ.ಬಿ.ಎಲ್ ಪೋಟೋ 2 ಮುಳಬಾಗಿಲು ಗಾಯತ್ರಿ ಭವನದಲ್ಲಿ27ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಮಾಜಿ ಯೋಧರ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.