ಕೆಆರ್ ಎಸ್ ತಟದಲ್ಲೇ ಕಾವೇರಿ ಚಳವಳಿ

Contributed bynaveena.channappa@timesofindia.com|Vijaya Karnataka
kaveri water rights struggle self immolation at krs
ಕೆಆರ್ ಎಸ್ ತಟದಲ್ಲೇ ಕಾವೇರಿ ಚಳವಳಿ

- 4ನೇ ದಿನ ಕೃಷ್ಣರಾಜಸಾಗರ ಕೇಂದ್ರಿತ ಹೋರಾಟ
- ಬಿಜೆಪಿಯಿಂದ ಕೆಆರ್ ಎಸ್ ಚಲೋ | ಬಿಎಸ್ ವೈ ಸೇರಿದಂತೆ 300ಕ್ಕೂ ಹೆಚ್ಚು ಜನರ ಬಂಧನ, ಬಿಡುಗಡೆ

- ಬೈಕ್ ರಾರ ಯಲಿ, ತಮಟೆ, ಗಂಟೆ ಚಳವಳಿ, ರಸ್ತೆ ಸಂಚಾರ ತಡೆ

- ಪ್ರತಿಭಟನೆಯಲ್ಲಿಗಮನ ಸೆಳೆದ ಶತಾಯುಷಿ

ಲೋಗೊ: ಕಾವೇರಿ ಕಿಚ್ಚು ಬಳಸಿ

ವಿಕ ಸುದ್ದಿಲೋಕ ಮಂಡ್ಯ

ಜಿಲ್ಲೆಯಲ್ಲಿಕಾವೇರಿ ಹೋರಾಟದ ಕಿಚ್ಚು ದಿನೇ ದಿನೆ ಹೆಚ್ಚಾಗುತ್ತಿದೆ. 4ನೇ ದಿನವೂ ಮಂಡ್ಯ, ಶ್ರೀರಂಗಪಟ್ಟಣ, ಕೆಆರ್ ಎಸ್ ನಲ್ಲಿಪ್ರತಿಭಟನೆಗಳು ನಡೆದರೂ ಶುಕ್ರವಾರದ ಹೋರಾಟ ಕೆಆರ್ ಎಸ್ ಕೇಂದ್ರಿತವಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ನೇತೃತ್ವದಲ್ಲಿನಡೆದ ‘ಕೆಆರ್ ಎಸ್ ಚಲೋ’ ವೇಳೆ ಬಿಎಸ್ ವೈ ಸೇರಿದಂತೆ 300ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಬೈಕ್ ರಾರ ಯಲಿ, ತಮಟೆ ಚಳವಳಿ, ಗಂಟೆ ಚಳವಳಿ, ರಸ್ತೆತಡೆ... ಹೀಗೆ ನಾನಾ ಮಾದರಿಯಲ್ಲಿಕಾವೇರಿ ಹೋರಾಟ ಮುಂದುವರಿಯಿತು.

ಅದೇ ರೀತಿ ಚಳವಳಿಯಲ್ಲಿತುಮಕೂರಿನಿಂದ ಆಗಮಿಸಿದ್ದ 104 ವರ್ಷದ ಶತಾಯುಷಿ ಶಿವಮ್ಮ ಅವರು ಭಾಗವಹಿಸಿ ಗಮನ ಸೆಳೆದರು.

ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ 15 ದಿನಗಳ ಕಾಲ ನಿತ್ಯ 3500 ಕ್ಯುಸೆಕ್ ನಂತೆ ನೀರು ಬಿಡಬೇಕೆಂದು ಜು.28ರಂದು ಕರ್ನಾಟಕಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಗುರುವಾರ(ಜು.30) ಎತ್ತಿ ಹಿಡಿದಿರುವುದು ಮಂಡ್ಯ ಜನರು ಮತ್ತು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಾಧಿಕಾರದ ಆದೇಶದ ಬೆನ್ನಲ್ಲೇ ಜಿಲ್ಲೆಯಲ್ಲಿಹೋರಾಟ ಇನ್ನಷ್ಟು ಹೆಚ್ಚಾಗಿದೆ.

ಅದರಂತೆ ಮಂಡ್ಯದಲ್ಲಿಶುಕ್ರವಾರದ ಹೋರಾಟಕ್ಕೆ ಚಲನಚಿತ್ರ ನಟರು ಆಗಮಿಸಿದ್ದರೆ, ಕೆಆರ್ ಎಸ್ ನಲ್ಲಿಬಿಜೆಪಿ ನಾಯಕರ ದೊಡ್ಡ ದಂಡೇ ಭಾಗಿಯಾಗಿತ್ತು. ಸರಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ ಚಿತ್ರತಂಡದವರು ರೈತರು ಮತ್ತು ನಾನಾ ಸಂಘಟನೆಗಳೊಂದಿಗೆ ಧರಣಿ ಕುಳಿತಿದ್ದರು. ಚಿತ್ರನಟ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಚಲನಚಿತ್ರ ನಿರ್ಮಾಪಕ ಭಾ.ಮ.ಹರೀಶ್ , ನಿರ್ಮಾಪಕಿ ಪದ್ಮಾವತಿ, ಕಿರುತೆರೆ ನಟ ರಂಜನ್ ಪ್ರತಿಭಟನೆಯಲ್ಲಿಭಾಗವಹಿಸಿದ್ದರು.

ಶ್ರೀರಂಗಪಟ್ಟಣದ ಲೋಕಪಾವನಿ ನದಿ ಬಳಿಯಿಂದ ಕೆಆರ್ ಎಸ್ ಜಲಾಶಯದವರಿಗೆ ವಡೆಯಾಂಡಹಳ್ಳಿ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಹಂಗರಹಳ್ಳಿ, ಮಹದೇವಪುರ ಸೇರಿದಂತೆ ನಾನಾ ಗ್ರಾಮಗಳ ಯುವಕರು ಬೈಕ್ ರಾರ ಯಲಿ ನಡೆಸಿದರು. ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಇದಕ್ಕೆ ಚಾಲನೆ ನೀಡಿದರು.

ರೈತ ನಾಯಕ ಕೆ.ಎಸ್ .ನಂಜುಂಡೇಗೌಡ ಅವರ ನೇತೃತ್ವದಲ್ಲಿಭೂಮಿತಾಯಿ ಹೋರಾಟ ಸಮಿತಿ ಕಾರ ್ಯಕರ್ತರು ಶ್ರೀರಂಗಪಟ್ಟಣದ ಮಿನಿವಿಧಾನಸೌಧ ಕಚೇರಿಗೆ ಮುತ್ತಿಗೆ, ಗಂಟೆ ಚಳವಳಿ ನಡೆಸಿದರೆ, ಜಿಲ್ಲಾರೈತಸಂಘದ ಅಧ್ಯಕ್ಷ ಎ.ಎಲ್ .ಕೆಂಪೂಗೌಡರ ನೇತೃತ್ವದಲ್ಲಿಶ್ರೀರಂಗಪಟ್ಟಣದಲ್ಲಿರೈತಸಂಘದ ಕಾರ ್ಯಕರ್ತರು ತಮಟೆ ಚಳವಳಿ ನಡೆಸಿದರು.

................................

ನಗರದಲ್ಲಿನಾನಾ ಸಂಘಟನೆಗಳಿಂದ ಧರಣಿ

ಮಂಡ್ಯ: ನಗರದಲ್ಲಿಶುಕ್ರವಾರವೂ ಸರಣಿ ಪ್ರತಿಭಟನೆಗಳು ನಡೆದವು. ನಗರದ ಜೆ.ಸಿ.ವೃತ್ತದಲ್ಲಿನಾನಾ ಸಂಘಟನೆಗಳ ಕಾರ ್ಯಕರ್ತರು ಒಟ್ಟಾಗಿ ಜಮಾವಣೆಗೊಂಡು ಬೆಂಗಳೂರು-ಮೈಸೂರು ಹೆದ್ದಾರಿಯ ಹಳೆಯ ರಸ್ತೆಯಲ್ಲಿಧರಣಿ ಕುಳಿತರು. ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಭಾರತೀಯ ಕಿಸಾನ್ ಸಂಘ, ಮೈಶುಗರ್ ಕಬ್ಬು ಬೆಳೆಗಾರರ ಒಕ್ಕೂಟ, ರಾಜ್ಯ ರೈತಪರ ಹೋರಾಟಗಾರರ ಸಂಘ ಸೇರಿದಂತೆ ನಾನಾ ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಪ್ರಾಧಿಕಾರದ ನಿರ್ದೇಶನಕ್ಕೆ ರೈತರು, ಮುಖಂಡರು ಕೆಂಡಾಮಂಡಲವಾಗಿ ಬೆಳಗ್ಗಿನಿಂದಲೇ ಕಾವೇರಿ ಚಳವಳಿ ನಡೆಸಿದರು. ಬಳಿಕ ನಟ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೇರಿದಂತೆ ರಾಮನಗರ, ತುಮಕೂರು ಭಾಗದ ಮುಖಂಡರು ಪ್ರತಿಭಟನೆಗೆ ಸಾಥ್ ನೀಡಿದರು.

ನಗರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅರುಣ್ ಕುಮಾರ್ , ಕರವೇ ಜಿಲ್ಲಾಧ್ಯಕ್ಷ ಚಂದ್ರು, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಸೋಮಶೇಖರ್ , ರೈತ ಸಂಘದ ರಾಜ್ಯ ಸಂಘಟನಾ ಕಾರ ್ಯದರ್ಶಿ ಮತ್ತಿಕೆರೆ ಪ್ರದೀಪ್ , ನಾನಾ ಸಂಘಟನೆಯ ಪದಾಧಿಕಾರಿಗಳಾದ ಇಂಡುವಾಳು ಚಂದ್ರಶೇಖರ್ , ಹೆಮ್ಮಿಗೆ ಚಂದ್ರಶೇಖರ್ , ಶಾರದಮ್ಮ ಯಡಹಳ್ಳಿ, ಬಿ.ರಮೇಶ್ , ಬಾಲರಾಜು, ನಾಗರಾಜು, ಕುಮಾರ್ , ಅಪ್ಪಾಜಿ ಬೂದನೂರು, ಫಯಾಜ್ , ಎಂ.ವಿ.ಕೃಷ್ಣ, ಸಾತನೂರು ವೇಣುಗೋಪಾಲ್ , ಕೀಲಾರ ಸೋಮಶೇಖರ್ , ಪಣಕನಹಳ್ಳಿ ಜವರೇಗೌಡ ಭಾಗವಹಿಸಿದ್ದರು.

...........................

ಬಾಕ್ಸ್

ಪಡಿತರ ವಿತರಕರ ಆಕ್ರೋಶ

ಮಂಡ್ಯ: ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿಸರಕಾರಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ನಗರದ ಜೆ.ಸಿ.ವೃತ್ತದಲ್ಲಿಪ್ರತಿಭಟನೆ ನಡೆಸಿದರು.

ಕಾವೇರಿ ಜಲಾಶಯಗಳಲ್ಲಿನ ನೀರಿನ ಕೊರತೆ ನಡುವೆಯೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರವನ್ನು ಹಿಂಪಡೆಯಬೇಕು. ಒಂದೊಮ್ಮೆ ರಾಜ್ಯ ಸರಕಾರ ಒತ್ತಡಕ್ಕೆ ಮಣಿದು ತಮಿಳುನಾಡಿಗೆ ನೀರು ಬಿಟ್ಟರೆ ರಾಜ್ಯಾದ್ಯಂತ ಇರುವ 20 ಸಾವಿರ ಸರಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರು ಮಂಡ್ಯದಲ್ಲಿಉಗ್ರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾಪಡಿತರ ವಿತರಕರ ಸಂಘದ ಅಧ್ಯಕ್ಷ ಹನಕೆರೆ ಎಚ್ .ಬಿ.ರಾಜಣ್ಣ, ನಿಂಗೇಗೌಡ, ಕೀಲಾರ ಚಂದ್ರು, ಮಂಟೇಸ್ವಾಮಿ, ಜಯರಾಮು, ದೇವರಾಜು ಇತರರು ಭಾಗವಹಿಸಿದ್ದರು.

................................

ಬಾಕ್ಸ್

ಕಾವೇರಿ ಚಳವಳಿಯಲ್ಲಿಶತಾಯುಷಿ ಅಜ್ಜಿ

ಮಂಡ್ಯದಲ್ಲಿನಡೆಯುತ್ತಿರುವ ಕಾವೇರಿ ಚಳವಳಿಯಲ್ಲಿತುಮಕೂರಿನಿಂದ ಆಗಮಿಸಿದ್ದ 104 ವರ್ಷದ ಶತಾಯುಷಿ ಶಿವಮ್ಮ ಅವರು ಭಾಗವಹಿಸಿ ಗಮನ ಸೆಳೆದರು. ಜೀವ ಬಿಟ್ಟರು ತಮಿಳುನಾಡಿಗೆ ನೀರು ಹರಿಸದಂತೆ ಸರಕಾರಕ್ಕೆ ತಾಕೀತು ಮಾಡಿ ಯುವ ಜನತೆ ಕಾವೇರಿ ಚಳವಳಿಗೆ ಬರುವಂತೆ ಕರೆ ನೀಡಿದರು.

‘‘ನೀರಿಲ್ಲದೆ ನಮ್ಮ ರೈತರು ಕಣ್ಣೀರಿಡುತ್ತಿದ್ದಾರೆ. ಗೋವುಗಳನ್ನು ಸಾಕುವುದಕ್ಕೂ ಶಕ್ತಿ ಇಲ್ಲ. ಬೆಳೆ ಬೆಳೆಯಲಾಗುತ್ತಿಲ್ಲ. ಹೀಗಿರುವಾಗ ತಮಿಳುನಾಡಿನವರು ನಮಗೇಕೆ ಕಷ್ಟ ಕೊಡುತ್ತಿದ್ದಾರೆ. ನಮಗೆ ನೀರಿಲ್ಲದಿರುವಾಗ ತಮಿಳುನಾಡಿನವರಿಗೆ ಎಲ್ಲಿಂದ ನೀರು ಕೊಡೋದು?,’’ ಎಂದು ಅಜ್ಜಿ ಶಿವಮ್ಮ ಪ್ರಶ್ನಿಸಿದರು.

‘‘ಮಹಾರಾಜರು ನಮ್ಮ ರೈತರ ಬದುಕಿನ ಉದ್ಧಾರಕ್ಕಾಗಿ ಕೆಆರ್ ಎಸ್ ಅಣೆಕಟ್ಟು ಕಟ್ಟಿಸಿಕೊಟ್ಟಿದ್ದಾರೆಯೇ ಹೊರತು ತಮಿಳುನಾಡಿನವರ ಉದ್ಧಾರಕ್ಕಲ್ಲ. ಬೇಕಾದರೆ ತಮಿಳುನಾಡಿನವರು ಬೇರೆ ಅಣೆಕಟ್ಟು ಕಟ್ಟಿಸಿಕೊಳ್ಳಲಿ,’’ ಎಂದು ಕಿಡಿಕಾರಿದರು.

ಫೋಟೊಗಳಿವೆ