ಕಾಮಗಾರಿ ಗುಣಮಟ್ಟದತ್ತ ಗಮನವಿರಲಿ

Contributed byvijaykumarhs9740@gmail.com|Vijaya Karnataka
launch of 24 crore development work in nelamangala
ಕಾಮಗಾರಿ ಗುಣಮಟ್ಟದತ್ತ ಗಮನವಿರಲಿ

ನಗರಸಭೆ ವ್ಯಾಪ್ತಿಯಲ್ಲಿ2.4ಕೋಟಿ ರೂ. ವೆಚ್ಚದ ಕಾಮಗಾರಿಗೆ ಎನ್ .ಶ್ರೀನಿವಾಸ್ ಚಾಲನೆ
ವಿಕ ಸುದ್ದಿಲೋಕ ನೆಲಮಂಗಲ

ನಗರಸಭೆ ಬಡಾವಣೆಗಳಲ್ಲಿನಡೆಯುವ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಗಮನಿಸಬೇಕು. ವ್ಯತ್ಯಾಸ ಕಂಡು ಬಂದರೆ ನಗರಸಭೆ ಸದಸ್ಯರು, ಅಧಿಕಾರಿಗಳು ಅಥವಾ ನಮ್ಮ ಗಮನಕ್ಕೆ ತರಬೇಕು ಎಂದು ಶಾಸಕ ಎನ್ .ಶ್ರೀನಿವಾಸ್ ತಿಳಿಸಿದರು.

ನಗರಸಭೆ ವ್ಯಾಪ್ತಿಯ ವಿಜಯನಗರ, ಗೋವಿಂದಪ್ಪ ಬಡಾವಣೆ, ಕೆಂಪಲಿಂಗನಹಳ್ಳಿ ಅಂಬೇಡ್ಕರ್ ಕ್ರೀಡಾಂಗಣ ರಸ್ತೆಯ ಕಾಂಕ್ರಿಟ್ ರಸ್ತೆ, ಚರಂಡಿ, ಇನ್ನಿತರೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರಸಭೆಯ ಎಲ್ಲಾಬಡಾವಣೆಗಳ ಅಭಿವೃದ್ಧಿಗೆ ನಾವು ಬದ್ಧವಾಗಿದ್ದು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಗುಂಡಿಬಿದ್ದಿರುವ ಹಾಗೂ ಬಹಳಷ್ಟು ವರ್ಷಗಳಿಂದ ಅಭಿವೃದ್ಧಿ ಕಾಣದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಕಾಮಗಾರಿಗೆ ಚಾಲನೆ ನೀಡಿದ ನಂತರ ಗುಣಮಟ್ಟದ ಕುರಿತು ಸ್ಥಳೀಯರು ಗಮನವಹಿಸಬೇಕು. ನಮ್ಮ ಬಡಾವಣೆ ಅಭಿವೃದ್ಧಿ ನಮ್ಮ ಹೊಣೆ ಎಂಬಂತೆ ಜವಾಬ್ದಾರಿ ವಹಿಸಬೇಕು ಎಂದರು.

ಕಾಮಗಾರಿ:

ವಿಜಯನಗರದ ರವಿ ಮನೆಯಿಂದ ಶಿವಗಣಪತಿ ದೇವಾಲಯ, ಪರಮಣ್ಣ ಮನೆಯಿಂದ 40 ಅಡಿ ಸಿಸಿ ಚರಂಡಿ, ವಾರ್ಡ್ 2ರಲ್ಲಿಬರುವ ಮರಿಯಪ್ಪ ಲೇಔಟ್ ರಸ್ತೆ, ಚರಂಡಿ ಸ್ಲಾಬ್ ಕಾಮಗಾರಿ, ಗೋವಿಂದಪ್ಪ ಬಡಾವಣೆ, ಸನ್ ರೈಸ್ ಶಾಲೆ ಸಮೀಪದ ರಸ್ತೆ, ಡಾಂಬರೀಕರಣ, ವಿಶ್ವೇಶ್ವರಪುರ ಕೆಂಪಲಿಂಗನಹಳ್ಳಿ ಬೆನಕಾ ಲೇಔಟ್ ರಸ್ತೆ, ಚರಂಡಿ ಅಭಿವೃದ್ಧಿ, ಅಂಬೇಡ್ಕರ್ ಕ್ರೀಡಾಂಗಣ ಪಕ್ಕದ ರಸ್ತೆ ಅಭಿವೃದ್ಧಿ ಸೇರಿದಂತೆ 2.4ಕೋಟಿ ಕಾಮಗಾರಿಗೆ ಚಾಲನೆ ನೀಡಿಲಾಯಿತು.

ಈ ಸಂದರ್ಭದಲ್ಲಿ ಎನ್ ಪಿಎ ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಪೌರಾಯುಕ್ತ ಗಂಗಾಧರ್ , ಸದಸ್ಯರಾದ ನರಸಿಂಹಮೂರ್ತಿ, ರಾಜಮ್ಮಪಿಳ್ಳಪ್ಪ, ಹೆಚ್ಚುವರಿ ಸದಸ್ಯ ಮುನಿರಾಜು, ವಿಶ್ವೇಶ್ವರಪುರ ಗ್ರಾಪಂ ಮಾಜಿ ಸದಸ್ಯ ಕೆಂಪೇಗೌಡ, ಮುಖಂಡರಾದ ಕೆ.ಕೃಷ್ಣಪ್ಪ, ರವಿಕುಮಾರ್ , ಮುನಿಯಪ್ಪ, ವಕೀಲ ವಿಜಯಕುಮಾರ್ ,ಪವನ್ , ಮನು, ವೇಣು, ವಸಂತ್ , ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್

ಶಾಸಕರ ಸಹಕಾರದಿಂದ ನಗರಸಭೆ ವ್ಯಾಪ್ತಿಯಲ್ಲಿಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. 2.4ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. 10ಕೋಟಿ ರೂ. ಅನುದಾನದಲ್ಲಿನಗರಸಭೆ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಗೆ ಶೀಘ್ರ ಚಾಲನೆ ನೀಡಲಾಗುವುದು. ಒಳಚರಂಡಿ ಕಾಮಗಾರಿಯೂ ಶೀಘ್ರದಲ್ಲಿಆರಂಭವಾಗಲಿದೆ. ಅಭಿವೃದ್ಧಿಯಲ್ಲಿನೆಲಮಂಗಲ ಮಾದರಿಯಾಗಿಸಲು ಶ್ರಮಿಸಲಾಗುವುದು.

-ಎನ್ .ಗಣೇಶ್ , ಅಧ್ಯಕ್ಷ, ನಗರಸಭೆ, ನೆಲಮಂಗಲ

31ನೆಲಪಿಹೆಚ್ 1: ನೆಲಮಂಗಲ ನಗರಸಭೆ ವ್ಯಾಪ್ತಿಯ ನಾನಾ ಬಡಾವಣೆಗಳಲ್ಲಿಅಭಿವೃದ್ಧಿ ಕಾಮಗಾರಿಗೆ ಶಾಸಕ ಎನ್ .ಶ್ರೀನಿವಾಸ್ ಹಾಗೂ ನಗರಸಭೆ ಅಧ್ಯಕ್ಷ ಎನ್ .ಗಣೇಶ್ ಚಾಲನೆ ನೀಡಿದರು.