ಹುಬ್ಬಳ್ಳಿಯಲ್ಲಿನಾಮಧಾರಿ ಸಭಾಭವನ, ವಸತಿ ನಿಲಯ ಲೋಕಾರ್ಪಣೆ

Contributed bynmanjaguni@gmail.com|Vijaya Karnataka
inauguration of hubballis namadhari community hall and student hostel a new beginning for students
ವಿಕ ಸುದ್ದಿಲೋಕ ಅಂಕೋಲಾ

ಹುಬ್ಬಳ್ಳಿ-ಧಾರವಾಡ ನಾಮಧಾರಿ ಸಮಾಜದ ಹಿತವರ್ಧಕ ಸಂಘ ನೂತನವಾಗಿ ನಿರ್ಮಿಸಿದ ಸಭಾಭವನ, ವಿದ್ಯಾರ್ಥಿ ನಿಲಯವನ್ನು ಸೋಲೂರು ಮಠದ ಶ್ರೀ ವಿಖ್ಯಾತನಂದ ಸ್ವಾಮೀಜಿ ಲೋಕಾರ್ಪಣೆ ಮಾಡಿದರು.
ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿ, ‘‘ನಾಮಧಾರಿ ಸಂಘದ ವತಿಯಿಂದ ಈ ಮಹತ್ವದ ಕಾರ್ಯ ಮಾಡಿರುವುದು ಶ್ಲಾಘನೀಯ. ಪಾಲಕರು ತಮ್ಮ ಮಕ್ಕಳನ್ನು ಸುಸಂಸ್ಕೃತವಾಗಿ ಬೆಳೆಸಬೇಕು. ಇಂತಹ ಕಾರ್ಯಕ್ರಮಗಳಿಗೆ ಮಕ್ಕಳು ಬರುತ್ತಿಲ್ಲ. ಆದರೆ ಅವರಿಗೆ ಪಾಲಕರು ತಿಳಿವಳಿಕೆ ಹೇಳಿ ಕರೆದುಕೊಂಡು ಬರಬೇಕು. ಇಲ್ಲದಿದ್ದರೆ ಮುಂದೊಂದು ದಿನ ಮಕ್ಕಳು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡಬಹುದು. ಇದು ಪ್ರತಿಯೊಂದು ಸಮಾಜಕ್ಕೆ ಅನ್ವಯಿಸುತ್ತದೆ’’ ಎಂದರು.

ಆಡಳಿತ ಮಂಡಳಿಯ ಸದಸ್ಯ ಉದಯಕುಮಾರ ಡಿ. ನಾಯ್ಕ ಮಾತನಾಡಿ, ‘‘ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸಿ ತಮ್ಮ ಬದುಕನ್ನು ಅಂದು ಕಷ್ಟ ಪಟ್ಟು ಕಟ್ಟಿಕೊಂಡಿದ್ದರು. ನಮಗಾದ ಸಮಸ್ಯೆ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಆಗಬಾರದು ಹಾಗೂ ಉನ್ನತ ಶಿಕ್ಷಣಕ್ಕೆ ಹುಬ್ಬಳ್ಳಿ ಅಥವಾ ಧಾರವಾಡಕ್ಕೆ ಬರಬೇಕಾಗಿದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ವಸತಿ ನಿಲಯ ನಿರ್ಮಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು’’ ಎಂದರು.

ಉಜರೆಯ ಶ್ರೀರಾಮ ಕ್ಷೇತ್ರದ ಟ್ರಸ್ಟಿ ಎಚ್ .ಆರ್ .ನಾಯ್ಕ, ಎಸಿಪಿ ಶಿವಪ್ರಕಾಶ ನಾಯ್ಕ, ಹುಬ್ಬಳ್ಳಿ-ಧಾರವಾಡ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಸಿ.ಆರ್ .ಢವಳಗಿ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ನಾಮಧಾರಿ ಸಮಾಜದ ಹಿತವರ್ಧಕ ಸಂಘದ ಅಧ್ಯಕ್ಷ ಟಿ.ಡಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಜಿ.ಎಸ್ .ನಾಯ್ಕ, ಹುಬ್ಬಳ್ಳಿ-ಧಾರವಾಡ ಬಿಲ್ಲವ ಸಮಾಜದ ಅಧ್ಯಕ್ಷ ಆನಂದ ಪೂಜಾರಿ ಹೊನ್ನಾವರ ಅಧ್ಯಕ್ಷ ಟಿ.ಟಿ.ನಾಯ್ಕ, ಭಟ್ಕಳ ಅಧ್ಯಕ್ಷ ಅರುಣ ನಾಯ್ಕ, ಕುಮಟಾ ಅಧ್ಯಕ್ಷ ಅರುಣಕುಮಾರ ನಾಯ್ಕ, ಅಂಕೋಲಾ ಅಧ್ಯಕ್ಷ ದಾಮೋದರ ಜಿ. ನಾಯ್ಕ, ಡಿವೈಎಸ್ ಪಿ ವಿನೋದ ಮೊಕ್ತೇದಾರ ಇದ್ದರು.

22ಅಂಕೋಲಾ1

ಹುಬ್ಬಳ್ಳಿಯ ಅಮರಗೋಳದಲ್ಲಿನಿರ್ಮಿಸಲಾದ ನಾಮಧಾರಿ ಸಮಾಜದ ಸಭಾಭವನ, ವಸತಿ ನಿಲಯವನ್ನು ಶ್ರೀ ವಿಖ್ಯಾತನಂದ ಸ್ವಾಮೀಜಿ ಉದ್ಘಾಟಿಸಿದರು.