(ವಿಕ ಆಶಯ ಲೋಗೋ)*ಪೊಲೀಸ್ ಕಮಿಷನರ್ ವಿಕ ಜತೆ ಸಂದೇಶ * ದ.ಕ. ಜಿಲ್ಲೆಯಲ್ಲಿ 195 ಹುದ್ದೆಗಳು
ವಿಜಯ್ ಕೋಟ್ಯಾನ್ ಮಂಗಳೂರು
vಜ್ಜಿaya.pಟಟ್ಜa್ಟyಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಎನ್ನ ವೃತ್ತಿ ಜೀವನಡ್ ಕುಡ್ಲಎನ್ನ ಇಷ್ಟದ ಊರು. ಎನ್ನ ಸೇವಾವಧಿಡ್ ಎಚ್ಚ ಸರ್ವಿಸ್ ಮಲ್ತಿನ ಊರುಲ ಉಂದುವೇ. ಕುಡ್ಲದ ಜನಕುಲು ಮಸ್ ್ತ ಎಡ್ಡೆಂತಿನಕುಲು, ಬೊಕ್ಕ ಮಸ್ ್ತ ಬುದ್ಧಿವಂತೆರ್ ಪೊಲೀಸ್ ಇಲಾಖೆಡ್ ಕರ್ತವ್ಯ ಮುಲ್ಪುನ ಗೌರವದ ಕೆಲಸ. ಕುಡ್ಲದಕುಲು ಪೊಲೀಸ್ ಡಿಪಾರ್ಟ್ ಮೆಂಟ್ ಸೇರ್ಲೆ, ಅವು ಬೊಕ್ಕಲಾತ್ ಇಲಾಖೆಗ್ ಶಕ್ತಿ ಆಪುಂಡು.
ಮಂಗಳೂರಿನ ಬಗ್ಗೆ ಹಾಗೂ ಇಲ್ಲಿನ ಜನರ ಬಗ್ಗೆ ಮೆಚ್ಚುಗೆಯ ಮಾತುಗಳೊಂದಿಗೆ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಯುವ ಸಮುದಾಯ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವಂತೆ ವಿಜಯ ಕರ್ನಾಟಕ ಮೂಲಕ ಮನವಿ ಮಾಡಿದ್ದಾರೆ.
ಮಂಗಳೂರು ರಾಜ್ಯದ ಅತಿವೇಗವಾಗಿ ಬೆಳೆಯುತ್ತಿರುವ ಪ್ರತಿಷ್ಠಿತ ನಗರಗಳಲ್ಲಿಒಂದಾಗಿದ್ದು, ವೈದ್ಯಕೀಯ, ಶೈಕ್ಷಣಿಕ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿಮುಂಚೂಣಿಯಲ್ಲಿದೆ. ರಾಜ್ಯದ ಐದು ಕಮಿಷನರೇಟ್ ಗಳಲ್ಲಿಮಂಗಳೂರು ಕೂಡ ಒಂದಾಗಿದ್ದು, 500ಕ್ಕೂ ಅಧಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ವೇಳೆ ರಾಜ್ಯಾದ್ಯಂತ ಖಾಲಿ ಇರುವ 3395 ಪೊಲೀಸ್ ಕಾನ್ ಸ್ಟೇಬಲ… ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 195 ಹುದ್ದೆಗಳು ಮಂಜೂರಾಗಿವೆ.
ಯುವ ಸಮುದಾಯಕ್ಕೆ ಕರೆ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ರಾಜ್ಯದ ಇತರೆ ಜಿಲ್ಲೆಗಳಿಗಿಂತ ಭಿನ್ನವಾಗಿವೆ. ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಆಚರಣೆಗಳಲ್ಲಿವಿಶಿಷ್ಟತೆ ಇದೆ. ಇಲ್ಲಿನ ಜನರು ಸುಶಿಕ್ಷಿತರಾಗಿದ್ದು, ಕಾನೂನು ಮತ್ತು ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಹೀಗಾಗಿ ಸ್ಥಳೀಯ ಯುವಕರು ಪೊಲೀಸ್ ಇಲಾಖೆಗೆ ಸೇರ್ಪಡೆಯಾದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ನೆರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ನೆಲದ ಶಾಂತಿ, ಸೌಹಾರ್ದತೆ, ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಕಾಳಜಿ ಇರುವ ಯುವಕರು ಪೊಲೀಸ್ ಇಲಾಖೆಯನ್ನು ವೃತ್ತಿಯಾಗಿ ಆಯ್ಕೆ ಮಾಡಬೇಕು. ಇದರಿಂದ ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಅವರು ಹೇಳಿದ್ದಾರೆ.
195 ಹುದ್ದೆಗಳ ವಿವರ:
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ 125 ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ 70 ಹುದ್ದೆಗಳು ಮಂಜೂರಾಗಿವೆ.
ಕಮಿಷನರೇಟ್ ವ್ಯಾಪ್ತಿ:
ಪುರುಷರು 83
ಮಹಿಳೆಯರು 28
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ… (ಪುರುಷ) 10
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ… (ಮಹಿಳೆ) 3
ತೃತೀಯ ಲಿಂಗಿ 1
ಜಿಲ್ಲಾ ಪೊಲೀಸ್ ವ್ಯಾಪ್ತಿ:
ಪುರುಷರು 46
ಮಹಿಳೆಯರು 16
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ… (ಪುರುಷ) 5
ಸೇವಾನಿರತ ಪೊಲೀಸ್ ಕಾನ್ ಸ್ಟೇಬಲ… (ಮಹಿಳೆ) 2
ತೃತೀಯ ಲಿಂಗಿ 1
ಈ ಹುದ್ದೆಗಳಲ್ಲಿಗ್ರಾಮೀಣ ಅಭ್ಯರ್ಥಿಗಳು, ಮಾಜಿ ಸೈನಿಕರು, ಕನ್ನಡ ಮಾಧ್ಯಮದಲ್ಲಿವ್ಯಾಸಂಗ ಮಾಡಿದವರು, ಯೋಜನೆಗಳಿಂದ ನಿರ್ವಸಿತರು ಹಾಗೂ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ.