ರಾಷ್ಟ್ರೀಯ ಹೆದ್ದಾರಿಯಲ್ಲಿಇಕ್ಕೆಲಗಳಿಂದ ನಾಗಾಲೋಟದಲ್ಲಿ ಬರುವ ವಾಹನಗಳು ಒಂದೆಡೆಯಾದರೆ, ಪಾದಚಾರಿಗಳಿಗಿರುವ ಅಂಡರ್ ಪಾಸ್ ನಲ್ಲಿಅರ್ಧ ಮೀಟರ್ ನಷ್ಟು ಎತ್ತರದಲ್ಲಿ ಕೆಸರು ತುಂಬಿರುವುದು ಇನ್ನೊಂದೆಡೆ ಸಮಸ್ಯೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಮೊದಲಾದ ಪ್ರಯಾಣಿಕರು ಭಯ ಭೀತಿಯಿಂದ ಹೆದ್ದಾರಿ ಹಾದುಹೋಗುವಂತಾಗಿದೆ. ಚೆಂಗಳ ಬೇವಿಂಜೆಯ ಈ ದೃಶ್ಯವು ಭೀತಿ ಸೃಷ್ಟಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಪಶ್ಚಿಮ ಭಾಗದಲ್ಲಿಬೇವಿಂಜೆ ಜಮಾಅತ್ ಮಸೀದಿ ಹಾಗೂ ಹೈಯರ್ ಸೆಕೆಂಡರಿ ಮದ್ರಸಾ ಇದೆ. ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಭಾಗದಲ್ಲಿ ಶೇ.70ಕ್ಕೂ ಹೆಚ್ಚು ಮನೆಗಳಿವೆ.ಮಸೀದಿ, ಮದ್ರಸಾ, ರಾಷ್ಟ್ರೀಯ ಹೆದ್ದಾರಿಗೆ ಹೋಗುವವರಿಗೆ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ನಿರ್ಮಿಸಿದ ಫುಟ್ ಪಾತ್ ನಲ್ಲಿ ಕೆಸರು ತುಂಬಿದೆ. ಫುಟ್ ಪಾತ್ ಗೆ ಇಳಿಯಲು ದಾರಿಯೂ ಇಲ್ಲ. ಫುಟ್ ಪಾತ್ ನ ಕೆಸರು ತೆರವುಗೊಳಿಸಲು ಮಸೀದಿ ಸಮಿತಿ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಂಪನಿ ಸಿಬ್ಬಂದಿಗಳೊಡನೆ, ಅಧಿಕಾರಿಗಳೊಡನೆ ನಿರಂತರ ಆಗ್ರಹಿಸಿದರೂ ಜೆಸಿಬಿ ಇಲ್ಲ ಎಂದೂ, ಕಾರ್ಮಿಕರಿಲ್ಲ ಎಂದು ಹೇಳಿ ಹಲವು ರೀತಿಯ ಕಾರಣಗಳನ್ನು ಹೇಳುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿತೆಕ್ಕಿಲ್ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ನಿರ್ಮಾಣ ಅಂತಿಮ ಹಂತದಲ್ಲಿರುವಾಗ ಮುಕ್ತಗೊಳಿಸಿರುವುದರಿಂದ ಒಂದು ಭಾಗಕ್ಕಿರುವ ರಾಷ್ಟ್ರೀಯ ಹೆದ್ದಾರಿಯ ಮೂಲಕ ಇಕ್ಕೆಲಗಳಿಗಿರುವ ವಾಹನಗಳನ್ನು ಹಾದು ಬಿಡಲು ಆರಂಭಿಸಿದ್ದರಿಂದ ವಾಹನಗಳು ವೇಗವಾಗಿ ಹಾದು ಹೋಗುತ್ತವೆ.
ಹಳೆಯ ಸೇತುವೆಯ ಮೂಲಕ ಸಂಚಾರ ನಿಷೇಧಿಸಿರುವುದರಿಂದ ವಾಹನಗಳ ದಟ್ಟಣೆ ಹೆಚ್ಚಲು ಕಾರಣವಾಗಿದೆ. ತೆಕ್ಕಿಲ್ ಸೇತುವೆ ಸಮೀಪ ಎರಡು ಮೀಟರ್ ಅಗಲದಲ್ಲಿ, 1.80 ಮೀಟರ್ ಎತ್ತರದಲ್ಲಿ ಪಾದಚಾರಿ ಅಂಡರ್ ಪಾಸ್ ನಿರ್ಮಿಸಲಾಗಿದೆ.
ಮಸೀದಿ ಸ್ಮಶಾನಕ್ಕೆ ಮೃತದೇಹ ರವಾನಿಸಲು ಅಂಡರ್ ಪಾಸ್ ಗೆ ಅಗತ್ಯ ಎತ್ತರ ಹಾಗೂ ಅಗಲ ಬೇಕು ಎಂದು ಬೇವಿಂಜೆ ಕ್ರಿಯಾಸಮಿತಿ ಪದಾಧಿಕಾರಿಗಳು ನಿರಂತರ ಆಗ್ರಹಿಸಿದ್ದರೂ, ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂಬ ಬೇಡಿಕೆಯನ್ನು ಕೂಡಾ ಅಧಿಕಾರಿಗಳು ಇದುವರೆಗೆ ಪರಿಗಣಿಸಿಲ್ಲ.
....
ಚಂದ್ರಗಿರಿ ಹೊಳೆಗೆ ಹೊಂದಿಕೊಂಡು ಅಂಡರ್ ಪಾಸ್ ನಲ್ಲಿ ಮಳೆಗಾಲದಲ್ಲಿ ಅರ್ಧ ಮೀಟರ್ ನಷ್ಟು ಎತ್ತರದಲ್ಲಿ ಕೆಸರು ನೀರು ತುಂಬುತ್ತದೆ. ರಾಷ್ಟ್ರೀಯ ಹೆದ್ದಾರಿ ಹಾದುಕೊಂಡು ಮುಂಜಾನೆ ವಿದ್ಯಾರ್ಥಿಗಳು ಮದ್ರಸಾಕ್ಕೆ ತೆರಳುತ್ತಾರೆ. ಭಾಗಶ: ನಿರ್ಮಾಣ ಪೂರ್ತಿಯಾದ ರಾಷ್ಟ್ರೀಯ ಹೆದ್ದಾರಿ ಮೂಲಕ ವಾಹನಗಳು ವೇಗವಾಗಿ ಹಾದುಬರುವುದು ಭೀತಿ ಸೃಷ್ಟಿಸುತ್ತಿದೆ.
-ಅಶ್ರಫ್ ದಾರಿಮಿ, ಮದ್ರಸಾ ಅಧ್ಯಾಪಕ, ಬೇವಿಂಜೆ.
ಚಿತ್ರ: 22ಕೆಎಸ್ ಎಲ್ ಬೇವಿಂಜೆ-ಬೇವಿಂಜೆಯಲ್ಲಿ ಪಾದಚಾರಿಗಾಗಿ ನಿರ್ಮಿಸಿದ ಅಂಡರ್ ಪಾಸ್ ನಲ್ಲಿ ಕೆಸರು ತುಂಬಿರುವುದು.
22ಕೆಎಸ್ ಎಲ್ ಬೇವಿಂಜೆ1-ಬೇವಿಂಜೆಯಲ್ಲಿಮದ್ರಸಾ ವಿದ್ಯಾರ್ಥಿಗಳನ್ನು ಅಧ್ಯಾಪಕರು, ಜಮಾಅತ್ ಪದಾಧಿಕಾರಿಗಳು ಹೆದ್ದಾರಿ ದಾಟಲು ಸಹಾಯ ಮಾಡುತ್ತಿರುವುದು.