ವಿಕ ಸುದ್ದಿಲೋಕ ರಟ್ಟೀಹಳ್ಳಿಸಿದ್ದರಾಮಯ್ಯ ಸರಕಾರದಲ್ಲಿಶಿಕ್ಷಣ ಸಚಿವರಾಗಿದ್ದ ಮಧು ಬಂಗಾರಪ್ಪ ಶಿಕ್ಷಣ ಕ್ಷೇತ್ರದಲ್ಲಿಬಹಳಷ್ಟು ಸುಧಾರಣೆ ಮಾಡಿದ್ದಾರೆ. ಬಡ ಮಕ್ಕಳಿಗೆ ಅನುಕೂಲವಾಗುವಂತೆ ಸರಕಾರಿ ಶಾಲೆಗಳಲ್ಲಿಎಲ್ ಕೆಜಿ, ಯುಕೆಜಿ ಪ್ರಾರಂಭಿಸಿರುವುದು ಉತ್ತಮ ಕಾರ್ಯ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ಪಟ್ಟಣದ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿನೂತನ ಎಲ್ ಕೆಜಿ/ಯುಕೆಜಿ ತರಗತಿ ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು. ‘‘ರಟ್ಟಿಹಳ್ಳಿಯಲ್ಲಿಪ್ರೌಢಶಾಲೆ ಪ್ರಾರಂಭಿಸಲಾಗಿದೆ. ನಮ್ಮ ಕ್ಷೇತ್ರಕ್ಕೆ 3 ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ರಟ್ಟೀಹಳ್ಳಿ ತಾಲೂಕಿನ ಕಡೂರು, ಹಿರೇಕೆರೂರು ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಇನ್ನೂ ಎರಡು ಕೆಪಿಎಸ್ ಶಾಲೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಮ್ಮ ಕ್ಷೇತ್ರಕ್ಕೆ 15 ವರ್ಷದ ಬಳಿಕ 3 ಪ್ರೌಢಶಾಲೆ ಕಾಣುವಂತಾಗಿದೆ. ಕೆಪಿಎಸ್ ಶಾಲೆ ಮಂಜುರಾಗಿರುವುದರಿಂದ ಮುಂದಿನ ದಿನದಲ್ಲಿದೊಡ್ಡ ಮಟ್ಟದಲ್ಲಿಕಟ್ಟಡಗಳು ನಿರ್ಮಾಣವಾಗುತ್ತವೆ. ಮುಂದಿನ ದಿನದಲ್ಲಿಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ,’’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್ .ಶ್ರೀಧರ ಮಾತನಾಡಿದರು.ಅಕ್ಷರ ದಾಸೋಹ ನಿರ್ದೇಶಕ ಎಚ್ .ಎಚ್ .ಜಾಡರ್ , ಪ.ಪಂ.ಅಧ್ಯಕ್ಷ ರವೀಂದ್ರ ಮುದಿಯಪ್ಪನವರ, ಉಪಾಧ್ಯಕ್ಷ ಶಿವಕುಮಾರ ಉಪ್ಪಾರ, ವೀರನಗೌಡ್ರ ಪ್ಯಾಟಿಗೌಡ್ರ, ಬಸವರಾಜ ಆಡಿನವರ, ರವಿ ಹದಡೇರ, ಸರ್ಪರಾಜ ಮಾಸೂರು, ಮಂಜುಳಾ ಅಗಡಿ, ಮಖಬುಲ್ ಸಾಬ್ ಮುಲ್ಲಾ, ಶ್ರೀನಿವಾಸ ಬೈರಪ್ಪನವರ, ಅಬ್ಬಾಸ ಗೋಡಿಹಾಳ, ಜಾಕೀರ ಮುಲ್ಲಾ, ವಿಜಯ ಅಂಗಡಿ, ಮುಖ್ಯ ಶಿಕ್ಷಕ ಸಿ.ಡಿ.ಕರಿಯಣ್ಣನವರ, ದಯಾನಂದ ಮಡಿವಾಳರ, ಎಸ್ ಡಿಎಂಸಿ ಉಪಾಧ್ಯಕ್ಷೆ ಸಾವಿತ್ರಾ ಗಿಡ್ಡಲಿಂಗಣ್ಣನವರ, ಸುಮಾ ಗುಬ್ಬಿ, ರೇಖಾ ಪೂಜಾರ, ನೇತ್ರಾವತಿ ಪಾಟೀಲ, ಶಿಕ್ಷಕರಾದ ಎಸ್ .ಪಿ.ದಾದಾಪೀರ, ಮೃತ್ಯುಂಜಯ ಹರವಿಶೆಟ್ರ ಮತ್ತಿತರರು ಇದ್ದರು.
ಫೋಟೋ ಶೀರ್ಷಿಕೆ: ಜೂ.23.ರಟ್ಟೀಹಳ್ಳಿ.2-
ರಟ್ಟೀಹಳ್ಳಿ ಪಟ್ಟಣದಲ್ಲಿಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿನೂತನ ಎಲ್ ಕೆಜಿ/ಯುಕೆಜಿ ತರಗತಿಯನ್ನು ಶಾಸಕ ಯು.ಬಿ.ಬಣಕಾರ ಉದ್ಘಾಟಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿಮಾತನಾಡಿದರು.