ವಿಕ ಸುದ್ದಿಲೋಕ ಕೊಪ್ಪವಿದ್ಯಾರ್ಥಿಗಳಲ್ಲಿಕನ್ನಡ ಓದುವ ಹವ್ಯಾಸ ಹೆಚ್ಚಾಗಬೇಕು ಎಂದು ರೋಟರಿ ಅಧ್ಯಕ್ಷ ಲಕ್ಷಿತ್ರ್ಮೕಶ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ವಿಭಾಗದಲ್ಲಿವಿದ್ಯಾರ್ಥಿಗಳಿಗೆ ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆ ವಿತರಿಸಿ ಮಾತನಾಡಿದರು.
ಮಾತೃಭಾಷೆ ಹೊರತು ಯಾವುದೇ ಇತರೆ ಭಾಷೆ ನಮ್ಮ ಮನಸ್ಸನ್ನು ಅರಳಿಸುವುದಿಲ್ಲ. ಆದರೆ, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದಾಗಿ ಕನ್ನಡ ಓದುವುದನ್ನು ಕಡಿಮೆ ಮಾಡಿದ್ದಾರೆ. ಕನ್ನಡ ಉಳಿಸಿ, ಬೆಳೆಸುವ ಹಾಗೂ ವಿದ್ಯಾರ್ಥಿಗಳಲ್ಲಿಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸುವ ನಿಟ್ಟಿನಲ್ಲಿಉಚಿತವಾಗಿ ದಿನಪತ್ರಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಉಪಪ್ರಾಂಶುಪಾಲ ರಾಘವೇಂದ್ರ ಮಾತನಾಡಿ, ಎಲ್ಲವಿದ್ಯಾರ್ಥಿಗಳು ದಿನಪತ್ರಿಕೆ ಓದುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಶಿಕ್ಷಕ ಎಂ.ಇ.ನಟರಾಜ್ ಹಾಗೂ ಇತರರಿದ್ದರು.
24ಕೆಪಿಎಚ್ ಜೆಎಲ್ ಎನ್ ಡಿಆರ್ 1
ಕೊಪ್ಪದ ಕೆಪಿಎಸ್ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ರೋಟರಿ ಅಧ್ಯಕ್ಷ ಲಕ್ಷಿತ್ರ್ಮೕಶ್ , ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆಯನ್ನು ವಿತರಿಸಿದರು.