ತಾಲೂಕಿನ ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಕುಶಾಲನಗರದ ಎಂಜಿನಿಯರ್ ಸೈಜನ್ ಕೆ. ಪೀಟರ್ ನೋಟ್ ಪುಸ್ತಕ ಉಚಿತವಾಗಿ ವಿತರಿಸಿದರು.ನಂತರ ಮಾತನಾಡಿ, ವಿದ್ಯೆ ನಮ್ಮ ಜೀವನದಲ್ಲಿಸಂಸ್ಕಾರ, ಬದುಕನ್ನು ನೀಡುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಸಮಾಜದಲ್ಲಿಸತ್ಪ್ರಜೆಗಳಾಗಿ ಬಾಳುವುದರೊಂದಿಗೆ ಸಮಾಜದ ಆಸ್ತಿಯಾಗಬೇಕು ಎಂದು ಹೇಳಿದರು.
ಪ್ರೌಢಶಾಲಾ ಸ್ಥಾಪನಾ ಸಮಿತಿಯ ಅಧ್ಯಕ್ಷ ಪಾಪೇಗೌಡ ಮಾತನಾಡಿ, ಸರಕಾರಿ ಪ್ರೌಢಶಾಲೆ ನೇರುಗಳಲೆಯಲ್ಲಿಕಳೆದ ಶೈಕ್ಷಣಿಕ ಸಾಲಿನಲ್ಲಿಶೇ. 100 ಫಲಿತಾಂಶ ಗಳಿಸುವ ಮೂಲಕ ಊರಿಗೆ ಕೀರ್ತಿ ತಂದಿರುತ್ತದೆ. ಈ ಸಾಲಿನಲ್ಲಿಯೂ ಕೂಡ ಶೇ.100 ಫಲಿತಾಂಶ ಪಡೆಯಲು ಎಲ್ಲಾವಿದ್ಯಾರ್ಥಿಗಳು ಶ್ರಮಿಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಶೂಟ್ ನೀಡುವುದಾಗಿ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ರಾಜೇಶ್ವರಿ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್ . ರತ್ನಕುಮಾರ್ , ಪ್ರಮುಖರಾದ ಉಮೇಶ್ , ರತೀಶ್ , ತೇಜಾಕ್ಷಿ, ಲಿಖಿತ, ಆಶಾ, ಭಾನುಮತಿ ಇದ್ದರು.
ಎಂಡಿಕೆ23ಎಸ್ ಪಿಟಿ3:
ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಸರಕಾರಿ ಪ್ರೌಢಶಾಲೆಯಲ್ಲಿವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಾಜಸೇವಕ ಕುಶಾಲನಗರದ ಇಂಜಿನಿಯರ್ ಸೈಜನ್ ಕೆ ಪೀಟರ್ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಿದರು.