ಇಂದು ಮತ್ತು ನಾಳೆ ಜಿಲ್ಲಾದ್ಯಂತ ಬೃಹತ್ ಜಾಗೃತಿ ಕಾರ್ಯಕ್ರಮ | ಯುವಜನರಲ್ಲಿಅರಿವು ಮೂಡಿಸಲು ಆದ್ಯತೆ
ಕಣಿತಹಳ್ಳಿ ಎನ್ .ಚಂದ್ರೇಗೌಡ ಚಿಕ್ಕಬಳ್ಳಾಪುರ ್ಚha್ಞd್ಟಛಿಜಟಡಿda.್ಞಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಮಾದಕ ವಸ್ತುಮುಕ್ತ ಸಮಾಜ ನಿರ್ಮಾಣಕ್ಕೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಜಿಲ್ಲೆಯಲ್ಲಿಈ ವರ್ಷವೂ ಸೇರಿ ಕಳೆದ 6 ವರ್ಷಗಳಲ್ಲಿ225 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಈ ಬಾರಿ ಜಿಲ್ಲಾಪೊಲೀಸ್ ಇಲಾಖೆ ಮಾದಕ ವಸ್ತು ಮುಕ್ತ ಚಿಕ್ಕಬಳ್ಳಾಪುರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದೆ.
ಈ ಬಾರಿ ಅಂತಾರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಜೂ.25 ಮತ್ತು ಜೂ.26ರಂದು ಜಿಲ್ಲಾದ್ಯಂತ ವಿಶೇಷ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರಲ್ಲಿಅರಿವು ಮೂಡಿಸಲು ಆದ್ಯತೆ ನೀಡಲಾಗಿದೆ.
225 ಡ್ರಗ್ಸ್ ಪ್ರಕರಣ: ಜಿಲ್ಲೆಯಲ್ಲಿಈ ವರ್ಷ ಸೇರಿ ಕಳೆದ 6 ವರ್ಷಗಳಲ್ಲಿ225 ಡ್ರಗ್ಸ್ ಪ್ರಕರಣಗಳು (ಎನ್ ಡಿಪಿಎಸ್ ) ದಾಖಲಾಗಿವೆ. ಈ ಸಂಬಂಧ 384 ಮಂದಿಯನ್ನು ಬಂಧಿಸಲಾಗಿದೆ. 43 ಪ್ರಕರಣಗಳಲ್ಲಿಶಿಕ್ಷೆಯಾಗಿದ್ದು, 18 ಪ್ರಕರಣಗಳು ಖುಲಾಸೆಯಾಗಿವೆ. ಇದುವರೆಗೂ ವಶಪಡಿಸಿಕೊಂಡಿರುವ 1015ಕ್ಕೂ ಹೆಚ್ಚು ಕೆ.ಜಿ. ಗಾಂಜಾ ಹಾಗೂ 388 ಗ್ರಾಂ ಅಪೀಮನ್ನು ನಾಶಪಡಿಸಲಾಗಿದೆ.
ಯುವ ಸಮುದಾಯದ ಗುರಿ: ಜಿಲ್ಲೆಯಲ್ಲಿದಾಖಲಾಗಿರುವ ಎನ್ ಡಿಪಿಎಸ್ ಪ್ರಕರಣಗಳಲ್ಲಿಹೆಚ್ಚಿನ ಮಂದಿ ಹೊರ ರಾಜ್ಯದ ಆರೋಪಿಗಳು ಭಾಗಿಯಾಗಿದ್ದು, ಹೆಚ್ಚಾಗಿ ಯುವ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿರುವುದು ಕಳವಳಕಾರಿಯಾಗಿದೆ. ಯುವ ಡ್ರಗ್ಸ್ ವ್ಯಸನಿಗಳೇ ಹಲವು ಪ್ರಕರಣಗಳಲ್ಲಿಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ವ್ಯಾಪಕ ಪ್ರಚಾರಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ.
ಡ್ರಗ್ಸ್ ಗೆ ನೋ ಹೇಳಿ: ಜಿಲ್ಲೆಯಲ್ಲಿಪ್ರತಿ ವರ್ಷವೂ ಎನ್ ಡಿಪಿಎಸ್ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಡ್ರಗ್ಸ್ ಗೆ ನೋ ಹೇಳಿ - ಜೀವನಕ್ಕೆ ಯೆಸ್ ಹೇಳಿ, ಮಾದಕ ವಸ್ತು ಮುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಬೃಹತ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಾನಾ ಕಾರ್ಯಕ್ರಮ: ಜೂ.25ರಂದು ಸರಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು, ಶಾಲೆಗಳು, ಕಾಲೇಜುಗಳು ಹಾಗೂ ಇತರೆ ಸಂಸ್ಥೆಗಳಲ್ಲಿಮಾದಕ ವಸ್ತು ವಿರೋಧಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಲು ಬೃಹತ್ ಪ್ರತಿಜ್ಞಾ ಸಹಿ ಫಲಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಯುವಜನರನ್ನು ಆಕರ್ಷಿಸಲು ಸೇ ನೋ ಟು ಡ್ರಗ್ಸ್ ಸೆಲ್ಫಿ ಪಾಯಿಂಟ್ ಗಳನ್ನು ಸ್ಥಾಪನೆ ಮಾಡಲಾಗಿದೆ.
ಕ್ಯೂಆರ್ ಕೋಡ್ ಮೂಲಕ ಇ-ಪ್ರತಿಜ್ಞೆ ಸ್ವೀಕರಿಸಿ, ತಕ್ಷಣವೇ ಡಿಜಿಟಲ್ ಪ್ರಮಾಣಪತ್ರ ಪಡೆಯುವ ವಿನೂತನ ಕಾರ್ಯಕ್ರಮವನ್ನು ಮಾಡಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಿಬ್ಬಂದಿಯೊಬ್ಬರು ರಚಿಸಿ ಹಾಡಿರುವ ಸೇ ನೋ ಟು ಡ್ರಗ್ಸ್ ಎಂಬ ಕನ್ನಡ ರಾರ ಯಪ್ ಗೀತೆಯನ್ನು ಬಿಡುಗಡೆ ಮಾಡಲಾಗಿದೆ.
ಗಾಂಜಾ ನಾಶಪಡಿಸುವ ಕಾರ್ಯಕ್ರಮ: ಇಷ್ಟೇ ಅಲ್ಲದೇ ಮಾದಕ ವಸ್ತುಗಳ ವಿರುದ್ಧ ಕಠಿಣ ಕ್ರಮದ ಸಂದೇಶವಾಗಿ, ಕಾನೂನುಬದ್ಧ ಪ್ರಕ್ರಿಯೆಯಂತೆ 60 ಕೆ.ಜಿ.ಗೂ ಅಧಿಕ ಗಾಂಜಾ ನಾಶಪಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಜಾಗೃತಿ ಕಾರ್ಯಕ್ರಮಗಳು, ವಿದ್ಯಾರ್ಥಿಗಳೊಂದಿಗೆ ಸಂವಾದ, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಜೂ.26ರಂದು ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕರು, ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ಭಾಗವಹಿಸುವಿಕೆಯಿಂದ ಮಾದಕ ವಸ್ತು ವಿರೋಧಿ ವಾಕಥಾನ್ ಆಯೋಜನೆ ಮಾಡಲಾಗಿದೆ. ಸಮಾಜದಲ್ಲಿಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಮಾದಕ ವಸ್ತು ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಜನಜಾಗೃತಿ ಮೂಡಿಸಲು ತೀರ್ಮಾನಿಸಲಾಗಿದೆ.
ಈ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿಜಾಗೃತಿ ಮೂಡಿಸುವುದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ಮಾದಕ ವಸ್ತುಗಳಿಗೆ ಇಲ್ಲ, ಆರೋಗ್ಯಕರ ಜೀವನಕ್ಕೆ ಹೌದು ಎಂಬ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವುದು ಈ ಜಾಗೃತಿ ಆಂದೋಲನದ ಉದ್ದೇಶವಾಗಿದೆ. ಡ್ರಗ್ಸ್ ವ್ಯಸನಕ್ಕೆ ವಿದ್ಯಾರ್ಥಿಗಳೇ ಹೆಚ್ಚು ಆಕರ್ಷಿತರಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕೋಟ್
ಜಿಲ್ಲೆಯನ್ನು ಮಾದಕ ವಸ್ತು ಮುಕ್ತ ಮಾಡಲು ಜಿಲ್ಲಾಪೊಲೀಸ್ ಇಲಾಖೆಯಿಂದ ವ್ಯಾಪಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಯುವಜನರಲ್ಲಿಜಾಗೃತಿ ಮೂಡಿಸುವುದರ ಜತೆಗೆ ಜನರನ್ನು ಕೂಡಾ ಈ ಅರಿವು ಕಾರ್ಯಕ್ರಮದಲ್ಲಿಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಆ ಮೂಲಕ ಮಾದಕ ವಸ್ತುಗಳಿಂದ ಯುವಜನರನ್ನು ಮುಕ್ತ ಮಾಡಿ ಆರೋಗ್ಯಕರ ಜೀವನದ ಕಡೆ ಒಲವು ಬೆಳೆಸುವುದು ಈ ಜಾಗೃತಿ ಕಾರ್ಯಕ್ರಮದ ಗುರಿಯಾಗಿದೆ.
-ಕುಶಲ್ ಚೌಕ್ಸೆ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ
24ಸಿಬಿಪಿಫೋಟೋ01
ಚಿಕ್ಕಬಳ್ಳಾಪುರ ನಗರ ಠಾಣೆ ವ್ಯಾಪ್ತಿಯಲ್ಲಿಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಮಾಲು ಸಮೇತ ಹಿಡಿದಿರುವ ಪೊಲೀಸರು.