ಸಂಡೂರು-ಶಾಲೆ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಬದ್ಧತೆ

Contributed byverendragoud@gmail.com|Vijaya Karnataka
alumni support for sanduru school
‘ಶಾಲೆ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಬದ್ಧತೆ’

ವಿಕ ಸುದ್ದಿಲೋಕ ಸಂಡೂರು
‘‘ಗೊಲ್ಲಲಿಂಗಮ್ಮನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ಹೊಸದಾಗಿ ಶಾಲೆ ಸೇರಿದ ಚಿಣ್ಣರಿಗಾಗಿ ಶಿಕ್ಷಣ ಸಾಮಗ್ರಿ ಉಚಿತವಾಗಿ ವಿತರಣೆ ಮಾಡಿರುವುದು ಉತ್ತಮ ಬೆಳವಣಿಗೆ,’’ ಎಂದು ಬಿಇಒ ಡಾ.ಐ.ಆರ್ .ಅಕ್ಕಿಯವರ ಹೇಳಿದರು.

ತಾಲೂಕಿನ ಚೋರನೂರು ಹೋಬಳಿಯ ಗೊಲ್ಲಲಿಂಗಮ್ಮಹಳ್ಳಿಯ ಸರಕಾರಿ ಶಾಲೆಯಲ್ಲಿಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶಿಕ್ಷಣ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿಮಾತನಾಡಿದರು.

‘‘ಶಾಲೆಯಲ್ಲಿಎಲ್ ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿದ್ದು, ಪಾಲಕರನ್ನು ಮಕ್ಕಳನ್ನು ಸೇರಿಸಬೇಕು. ಗ್ರಾಮದ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು, ಯುವಕರು ಶಾಲೆಯ ಅಭಿವೃದ್ಧಿಗೆ ಬದ್ಧತೆ ವ್ಯಕ್ತಪಡಿಸಿರುವುದು ಸ್ಮರಣೀಯ. ಹಳೆಯ ವಿದ್ಯಾರ್ಥಿಗಳ ಸಂಘದಿಂದ 30 ಮಕ್ಕಳಿಗೆ ಉಚಿತವಾಗಿ ಪ್ರತಿ ಮಗುವಿಗೆ 3 ಜತೆ ಸಮವಸ್ತ್ರ, ಶಾಲಾ ಬ್ಯಾಗ್ , ಪೆನ್ , ಪುಸ್ತಕ, ಶೂ, ಸಾಕ್ಸ್ , ನೀರಿನ ಬಾಟಲ್ ಹಾಗೂ ಇತರೆ ಕಲಿಕಾ ಪರಿಕರ ಉಚಿತವಾಗಿ ವಿತರಿಸಲಾಗಿದೆ. ಜತೆಗೆ ಶಾಲೆಯ ಒಂದು ಕೊಠಡಿ ನವೀಕರಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲಕರ ಹಾಗೂ ಆಕರ್ಷಕ ವಾತಾವರಣ ನಿರ್ಮಿಸಿರುವುದು ಶ್ಲಾಘನೀಯ,’’ ಎಂದರು.

ಬಿಆರ್ ಸಿ ಅಧಿಕಾರಿ ಶರಣಬಸಪ್ಪ, ಶಿಕ್ಷಣ ಸಂಯೋಜಕ ಗೂಳೆಪ್ಪ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಹಳೆ ಶಿಕ್ಷಕರು, ಶಿಕ್ಷಣ ಪ್ರೇಮಿಗಳು, ಗ್ರಾ.ಪಂ.ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಗ್ರಾ.ಪಂ.ಅಧಿಕಾರಿಗಳು, ಸಿಬ್ಬಂದಿ, ಗ್ರಾಮದ ಮುಖಂಡರು ಇದ್ದರು.

* ಬಿಎಲ್ ವೈ 23 ಎಸ್ಡಿಆರ್ 3:

ಸಂಡೂರಿನ ಗೊಲ್ಲಲಿಂಗಮ್ಮನಹಳ್ಳಿಯಲ್ಲಿಎಲ್ ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸಾಮಗ್ರಿ ಉಚಿತವಾಗಿ ವಿತರಿಸಲಾಯಿತು.