ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್

Contributed bynaveena.channappa@timesofindia.com|Vijaya Karnataka
national lok adalat on july 11 easy resolution for your disputes
ಜುಲೈ 11ರಂದು ರಾಷ್ಟ್ರೀಯ ಲೋಕ ಅದಾಲತ್

*ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಜೆ.ಎನ್ .ಸುಬ್ರಹ್ಮಣ್ಯ ಮಾಹಿತಿ
ವಿಕ ಸುದ್ದಿಲೋಕ ಮಂಡ್ಯ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಜ್ಯಾದ್ಯಂತ ಜು.11ರಂದು ರಾಷ್ಟ್ರೀಯ ಲೋಕ್ ಅದಾಲತ್ ನಡೆಯುತ್ತಿದೆ. ಇದರ ಭಾಗವಾಗಿ ಜಿಲ್ಲೆಯ ಎಲ್ಲತಾಲೂಕುಗಳಲ್ಲೂಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿಪೂರ್ವಭಾವಿ ಬೈಠಕ್ ಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಜೆ.ಎನ್ .ಸುಬ್ರಹ್ಮಣ್ಯ ತಿಳಿಸಿದರು.

‘‘ಲೋಕ ಅದಾಲತ್ ಪೀಠದಲ್ಲಿನ್ಯಾಯಾಧೀಶರು, ನುರಿತ ವಕೀಲರು ಕುಳಿತು ವಾದಿ-ಪ್ರತಿವಾದಿಗಳ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡುಕೊಳ್ಳಬಹುದು. ವಕೀಲರ ಮುಖಾಂತರ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿ ಮಾಡಿಕೊಳ್ಳಬಹುದು. ಇದರಿಂದ ಪ್ರಕರಣವು ಶೀಘ್ರ ಇತ್ಯರ್ಥವಾಗುತ್ತದೆ. ಹಣ ಹಾಗೂ ಅಮೂಲ್ಯ ಸಮಯವೂ ಉಳಿತಾಯವಾಗುತ್ತದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘‘ಇಲ್ಲಿವ್ಯಾಜ್ಯ ಇತ್ಯರ್ಥಪಡಿಸಿಕೊಂಡರೆ ನ್ಯಾಯಲಯದ ಶುಲ್ಕವೂ ಇರುವುದಿಲ್ಲ. ಈಗಾಗಲೇ ಕಟ್ಟಿರುವಂತಹ ನ್ಯಾಯಾಲಯದ ಶುಲ್ಕವನ್ನು ಸಹ ಮರಳಿ ನೀಡಲಾಗುತ್ತದೆ. ಆದರೆ, ಲೋಕ ಅದಾಲತ್ ನಲ್ಲಿಇತ್ಯರ್ಥಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ಇಲ್ಲಿನ ತೀರ್ಮಾನವು ನ್ಯಾಯಾಲಯ ನೀಡಿದ ತೀರ್ಮಾನದಷ್ಟೇ ಮೌಲ್ಯ ಹೊಂದಿರುತ್ತದೆ’’ ಎಂದರು.

‘‘ಆಸ್ತಿ ವಿವಾದಗಳನ್ನು ಒಳಗೊಂಡ ಸಿವಿಲ್ ವ್ಯಾಜ್ಯಗಳು , ವಿಭಾಗದ ದಾವೆಗಳು, ಹಣ ವಸೂಲಾತಿ ದಾವೆಗಳು, ನಿರ್ದಿಷ್ಟ ಪರಿಹಾರ ಕಾಯಿದೆಯಡಿ ದಾಖಲಿಸಿರುವ ದಾವೆಗಳು, ಮೋಟಾರು ವಾಹನಗಳ ಪ್ರಕರಣಗಳು, ಎಂಎಂಆರ್ ಡಿ ಪ್ರಕರಣಗಳು, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣಗಳು, ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಎಲ್ ಎಸಿ, ಎಕ್ಸಿಕ್ಯುಷನ್ ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಇತ್ಯರ್ಥಗೊಳಿಸಲಾಗುವುದು’’ ಎಂದು ವಿವರಿಸಿದರು.

‘‘ಭೂ ಸ್ವಾಧೀನ ಪ್ರಕರಣಗಳಲ್ಲಿಪರಿಹಾರ ಮೊತ್ತ ನೀಡಲು ಹೇಮಾವತಿ ವ್ಯಾಪ್ತಿಯ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ರೈತರು ಲೋಕ್ ಅದಾಲತ್ ನಲ್ಲಿತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು’’ ಎಂದು ತಿಳಿಸಿದರು.

‘‘ಸಾರಿಗೆ ಇಲಾಖೆಯಲ್ಲಿ1991 ರಿಂದ 2022ರ ಅವಧಿಯಲ್ಲಿದಾಖಲಾಗಿರುವ ಬಾಕಿ ಇರುವ ಪ್ರಕರಣಗಳು ಮತ್ತು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿಶೇ.50ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿದೆ. ದಂಡ ಪಾವತಿಸಲು 2026ರ ಜೂ.21ರಿಂದ ಜುಲೈ10ರವರೆಗೆ ಕಾಲಾವಕಾಶ ನೀಡಲಾಗಿದೆ’’ ಎಂದರು.

‘‘ನಗರದ ಸಂಚಾರಿ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ಎಲ್ಲಾಪೊಲೀಸ್ ಠಾಣೆಯ ಕೌಂಟರ್ ಗಳಲ್ಲಿ2023ರ ಫೆ.11ರವರೆಗೆ ಬಾಕಿ ಇರುವ ಇ-ಚಲನ್ ದಂಡದ ಮೊತ್ತವನ್ನು ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿಮನವಿ ಮಾಡಲಾಗಿದೆ’’ ಎಂದು ಹೇಳಿದರು.

ಗೋಷ್ಠಿಯಲ್ಲಿಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ , ಜಿಲ್ಲಾವಕೀಲರ ಸಂಘದ ಅಧ್ಯಕ್ಷ ಟಿ.ಎಸ್ .ಸತ್ಯಾನಂದ, ಡಿವೈಎಸ್ಪಿ ಶಿವಮೂರ್ತಿ ಹಾಜರಿದ್ದರು.

ಆ.21ರಿಂದ ಸಮಾಧಾನ್ ಸಮರೋಹ್

ಸರ್ವೋಚ್ಚ ನ್ಯಾಯಾಲಯವು ಸಮಾಧಾನ್ ಸಮರೋಹ್ ಎಂಬ ವಿಶೇಷ ಲೋಕ್ ಅದಾಲತ್ ನ್ನು ಆ.21, 22, 23ರಂದು ಆಯೋಜಿಸಿದೆ ಎಂದು ಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಜೆ.ಎನ್ .ಸುಬ್ರಹ್ಮಣ್ಯ ತಿಳಿಸಿದರು. ‘‘ಈಗಾಗಲೇ ಜಿಲ್ಲೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿಬಾಕಿ ಇರುವ ಒಟ್ಟು 21 ಪ್ರಕರಣಗಳನ್ನು ಗುರುತಿಸಲಾಗಿದೆ. ಕಕ್ಷಿದಾರರಿಗೆ ಅನುಕೂಲವಾಗುವ ರೀತಿಯಲ್ಲಿಪೂರ್ವ ಸಂಧಾನ ನಡೆಸಲಾಗುತ್ತಿದೆ. ಈಗಾಗಲೇ ಸಂಧಾನ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಸಂಧಾನ ಯಶಸ್ವಿಯಾದಲ್ಲಿಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಈ ಪ್ರಕರಣಗಳನ್ನು ಆಗಸ್ಟ್ ತಿಂಗಳಲ್ಲಿನಡೆಯುವ ವಿಶೇಷ ಲೋಕ್ ಅದಾಲತ್ ನಲ್ಲಿಇತ್ಯರ್ಥಪಡಿಸಿಕೊಳ್ಳಬಹುದು’’ ಎಂದರು.

ಎಂಡಿವೈ23ಎನ್ 9

ಮಂಡ್ಯದಲ್ಲಿಸುದ್ದಿಗೋಷ್ಠಿಯಲ್ಲಿಪ್ರಧಾನ ಜಿಲ್ಲಾಮತ್ತು ಸತ್ರ ನ್ಯಾಯಾಧೀಶ ಜೆ.ಎನ್ .ಸುಬ್ರಹ್ಮಣ್ಯ ಮಾತನಾಡಿದರು.