ನೀಟ್ : ಕ್ಷಮೆಗೆ ಆಗ್ರಹ

Contributed bymanjunathrd59@gmail.com|Vijaya Karnataka
heavy traffic jam causes injustice to students in neet exam
ವಿಕ ಸುದ್ದಿಲೋಕ ಹಾವೇರಿ

ನೀಟ್ ಪರೀಕ್ಷೆ ವಂಚಿತರಾದ ನೊಂದ ವಿದ್ಯಾರ್ಥಿ ಸಮೂಹಕ್ಕೆ ರಾಜ್ಯ ಸರಕಾರ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಅವರಿಗೆ ನ್ಯಾಯ ಒದಗಿಸಬೇಕೆಂದು ಬಿಜೆಪಿ ಜಿಲ್ಲಾವಕ್ತಾರ ನಿರಂಜನ ಹೇರೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘‘ಕಳೆದ ಭಾನುವಾರ ಬೆಂಗಳೂರಿನಲ್ಲಿನಡೆದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದ ಶಕ್ತಿ ಪ್ರದರ್ಶನದಿಂದ ಇಡೀ ರಾಜಧಾನಿಯಲ್ಲಿಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ಜನಸಾಮಾನ್ಯರು ಪರದಾಡುವಂತಾಗಿತ್ತು. ಕಡುಬಡತನದಲ್ಲೂವರ್ಷವಿಡೀ ಕಷ್ಟಪಟ್ಟು ಓದಿದ ಹತ್ತಾರು ಬಡ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ನೀಟ್ ಪರೀಕ್ಷಾ ಕೇಂದ್ರ ತಲುಪಲಾಗದೆ, ಕೊನೆ ಕ್ಷಣದಲ್ಲಿನೀಟ್ ಮರುಪರೀಕ್ಷೆ ಬರೆಯುವ ಮಹತ್ವದ ಅವಕಾಶ ಕಳೆದುಕೊಂಡು ವಂಚಿತರಾಗಿದ್ದಾರೆ. ಟ್ರಾಫಿಕ್ ನಿಂದಾಗಿ ತಡವಾಗಿ ಬಂದ ವಿದ್ಯಾರ್ಥಿನಿಯರನ್ನು ಕರುಣೆಯಿಲ್ಲದೆ ಗೇಟ್ ನಿಂದ ಹೊರಗಟ್ಟಿದಾಗ ಪೋಷಕರು ಅನುಭವಿಸಿದ ಯಾತನೆಗೆ ಈ ಸರಕಾರವೇ ನೇರ ಹೊಣೆಯಾಗಿದೆ. ಈ ಬೇಜವಾಬ್ದಾರಿಗೆ ಸರಕಾರ ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು ಹಾಗೂ ಅವರಿಗೆ ನ್ಯಾಯ ಒದಗಿಸಬೇಕು,’’ ಎಂದು ತಿಳಿಸಿದ್ದಾರೆ.