ಬೆಳ್ತಂಗಡಿ: ಎಸ್ ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿಸೈನ್ಸ್ ಹಾಗೂ ಇಕೋ ಕ್ಲಬ್ ವತಿಯಿಂದ ಬೀಜ ಉಂಡೆಗಳ ಮೂಲಕ ಪ್ರಕೃತಿ ಸಂರಕ್ಷಣೆಯ ಅರಿವು ಎಂಬ ವಿಶೇಷಚಟುವಟಿಕೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ದೇಶ ವಿದ್ಯಾರ್ಥಿಗಳಲ್ಲಿಪರಿಸರ ಸಂರಕ್ಷಣೆ, ಹಸಿರು ವಾತಾವರಣ ನಿರ್ಮಾಣ ಹಾಗೂ ಜೀವ ವೈವಿಧ್ಯದ ಮಹತ್ವದ ಕುರಿತು ಅರಿವು ಮೂಡಿಸುವುದಾಗಿತ್ತು.ಶಾಲೆಯ ಮುಖ್ಯಶಿಕ್ಷಕಿ ಹೇಮಲತಾ ಎಂ. ಆರ್ . ಮಾರ್ಗದರ್ಶನದಲ್ಲಿನಡೆದ ಈ ಕಾರ್ಯಕ್ರಮದಲ್ಲಿಸೈನ್ಸ್ ಮತ್ತು ಇಕೋ ಕ್ಲಬ್ ನ ಶಿಕ್ಷಕಿಯರಾದ ನಯನಾ ಹಾಗೂ ಪ್ರಮೀಳಾ ಎನ್ . ಭಾಗವಹಿಸಿದರು. ಶಾಲೆಯ ಸಹಶಿಕ್ಷಕಿಯಾದ ಸೌಮ್ಯಾ ಪಿ. ಬೀಜ ಉಂಡೆಗಳ ತಯಾರಿಕೆ, ಅವುಗಳ ಉಪಯೋಗ ಹಾಗೂ ಪರಿಸರ ಸಂರಕ್ಷಣೆಯಲ್ಲಿಅವುಗಳ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.