ಖಾತೆ ಹಂಚಿಕೆ, ಕೆಎಚ್ ಎಂ ಅಸಮಾಧಾನ

Contributed byadarshkodi15@gmail.com|Vijaya Karnataka

ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಗೌರವ ಸಿಕ್ಕಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆ ಮತ್ತೆ ನೀಡಿರುವುದಕ್ಕೆ ಬೇಸರಗೊಂಡಿದ್ದಾರೆ. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆ ನೀಡುವಂತೆ ಮನವಿ ಮಾಡಿದ್ದರು. ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. 2028ರ ಚುನಾವಣೆಯಲ್ಲಿ ಪಕ್ಷಕ್ಕೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

kh muniyappa expresses dissatisfaction over portfolio distribution warns of issues for 2028 elections

ವಿಕ ಸುದ್ದಿಲೋಕ ದೇವನಹಳ್ಳಿ ( ಬೆಂಗಳೂರು ಗ್ರಾಮಾಂತರ)

ರಾಜ್ಯ ಸಚಿವ ಸಂಪುಟದಲ್ಲಿಖಾತೆ ಹಂಚಿಕೆ ವಿಚಾರವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ .ಮುನಿಯಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಆಹಾರ ಇಲಾಖೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ಖಾತೆ ಹಂಚಿಕೆಯಲ್ಲಿಹಿರಿತನ ಪರಿಗಣಿಸಿಲ್ಲಎಂದು ಆರೋಪಿಸಿದ್ದಾರೆ.

ದೇವನಹಳ್ಳಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನಾನು ಎಂಟು ಬಾರಿ ಚುನಾಯಿತನಾಗಿದ್ದೇನೆ. ಆದರೆ ಖಾತೆ ಹಂಚಿಕೆಯಲ್ಲಿನನ್ನ ಹಿರಿತನಕ್ಕೆ ತಕ್ಕ ಗೌರವ ಸಿಕ್ಕಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಾಯಿ ಸ್ಥಾನದಲ್ಲಿದ್ದು ಎಲ್ಲರನ್ನು ಸಮಾನವಾಗಿ ನೋಡಬೇಕು. ಆದರೆ, ಖಾತೆ ಹಂಚಿಕೆಯು ಆ ರೀತಿ ನಡೆದಿಲ್ಲ. ಇದೇ ರೀತಿ ಮುಂದುವರಿದರೆ 2028ರ ಚುನಾವಣೆಯಲ್ಲಿಪಕ್ಷಕ್ಕೆ ತೊಂದರೆಯಾಗಬಹುದು,’’ ಎಂದು ಎಚ್ಚರಿಕೆ ನೀಡಿದರು.

‘‘ನಾನು ಈಗಾಗಲೇ ರಾಜ್ಯದಲ್ಲಿಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿರ್ವಹಿಸುತ್ತಿದ್ದು, ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ಹೆಚ್ಚು ಅವಕಾಶವಿರುವ ಖಾತೆ ನೀಡುವಂತೆ ಮನವಿ ಮಾಡಿದ್ದೇನೆ,’’ ಎಂದು ತಿಳಿಸಿದರು. ಈ ಕುರಿತು ತಾವು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಎಲ್ಲಸಚಿವರನ್ನು ಸಮಾನವಾಗಿ ಪರಿಗಣಿಸುವಂತೆ ಮನವಿ ಮಾಡಿರುವುದಾಗಿಯೂ ಮುನಿಯಪ್ಪ ಹೇಳಿದರು.

ಫೋಟೋ:0506ವಿಕೆ3: ಕೆ.ಎಚ್ ಮುನಿಯಪ್ಪ