ಕಾರ್ಕಳ: ಮರ್ಣೆ ಬಂಡಸಾಲೆ ಮಾರಿಗುಡಿಯ 25ನೇ ವರ್ಷದ ವರ್ಧಂತ್ಯುತ್ಸವವು ಮಾ.13ರಂದು ಜರುಗಲಿದೆ. ಅಂದು ಬೆಳಗ್ಗೆ 8ಕ್ಕೆ ದೇವತಾ ಪ್ರಾರ್ಥನೆ, ಸ್ವಸ್ತಿ ವಾಚನ, ತೋರಣ ಮುಹೂರ್ತ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, 12.30ಕ್ಕೆ ಅನ್ನಸಂತರ್ಪಣೆ, 2ರಿಂದ ರಾತ್ರಿ 8 ಗಂಟೆವರೆಗೆ ಭಜನೆ, ರಾತ್ರಿ 7ಕ್ಕೆ ಉಪಾಹಾರ, 8 ಗಂಟೆಗೆ ಗೋಂದ್ಲುಪೂಜೆ, ರಾತ್ರಿ ಗಂಟೆ 9ರಿಂದ ಹಿರಿಯಡ್ಕ ಶ್ರೀವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯಿಂದ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಅನುವಂಶಿಕ ಆಡಳಿತ ಮೊಕ್ತೇಸರ ಶಿವ ಕುಮಾರ್ ಕುರ್ಪಾಡಿಗುತ್ತು ತಿಳಿಸಿದ್ದಾರೆ.
(ಪೂರ್ತಿ ವರದಿ ಪ್ರಕಟಿಸಿ-ಜಾಹೀರಾತು ಪಾರ್ಟಿ)

