ನೋವು ನಿವಾರಕ ಕಿಡ್ನಿಗೆ ವಿಷ
---
ಸ್ಲಗ್ : ವಿಶ್ವ ಕಿಡ್ನಿ ದಿನ
ಇಂಟ್ರೊ: ಮೂತ್ರಪಿಂಡದ ಆರೋಗ್ಯಕ್ಕೆ ಸ್ವಯಂ ಔಷಧೋಪಚಾರ ಅದರಲ್ಲೂನೋವು ನಿವಾರಕ ಮಾತ್ರೆಗಳ ಅಪಾಯ ಹೆಚ್ಚು. ಹೀಗಾಗಿ ಅನಗತ್ಯ ಔಷಧ ಬಳಕೆ ಬಿಟ್ಟು ಉತ್ತಮ ಜೀವನಶೈಲಿಗೆ ಪ್ರಾಮುಖ್ಯ ನೀಡಿ ಎನ್ನುತ್ತಾರೆ ಆರೋಗ್ಯ ತಜ್ಞರು.
---
ಶುಭಾ ವಿಕಾಸ್
---
ದೇಹದ ಯಾವುದೋ ಭಾಗದಲ್ಲಿಶುರುವಾದ ನೋವು ಯಮಯಾತನೆ ನೀಡುತ್ತದೆ. ಅದರ ಹಿಂದಿನ ಕಾರಣ, ಪರಿಣಾಮಕ್ಕಿಂತ ಆ ಕ್ಷಣಕ್ಕೆ ನೋವು ಉಪಶಮನಗೊಂಡರೆ ಸಾಕು ಎಂದೇ ಮನಸ್ಸು ಪದೇಪದೆ ನಂಬಿಸುತ್ತದೆ. ಅದಕ್ಕೆ ತಕ್ಕ ಹಾಗೆ ದೇಹವೂ ನೋವು ನಿವಾರಕ ಬೇಡುತ್ತದೆ. ಪರಿಣಾಮ, ಔಷಧ ಅಂಗಡಿಯಲ್ಲಿಸಿಗುವ ನೋವು ನಿವಾರಕ ಆ ಕ್ಷಣಕ್ಕೆ ಆಪತ್ಬಾಂಧವ. ಆದರೆ ಇದೇ ನೋವು ನಿವಾರಕ ಮೂತ್ರಪಿಂಡವನ್ನು ಆಪತ್ತಿಗೆ ಸಿಲುಕಿಸುತ್ತದೆ.
ಮೂತ್ರಪಿಂಡಗಳ ಆರೋಗ್ಯಕ್ಕೆ ಅತಿಯಾದ ನೋವು ನಿವಾರಕ ಸೇವಿಸುವ ಮನೋಭಾವ ಕುತ್ತು ತರುತ್ತಿದ್ದು, ಇಂತಹ ಔಷಧಗಳ ಕಾರಣದಿಂದಲೂ ಮೂತ್ರಪಿಂಡ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ. ಮಧುಮೇಹ ಮತ್ತು ರಕ್ತದೊತ್ತಡ ಈ ಕಾಯಿಲೆಗೆ ಪ್ರಮುಖ ಕಾರಣಗಳಾಗಿದ್ದರೂ, ಅಷ್ಟೇ ಅಪಾಯಕಾರಿ ಸ್ವಯಂ ಔಷಧೋಪಚಾರ ಎಂದಿದ್ದಾರೆ ತಜ್ಞರು.
ದೇಹದ ಯಾವುದೋ ಭಾಗದ ನೋವಿನ ಶಮನಕ್ಕಾಗಿ ವೈದ್ಯರನ್ನು ಸಂಪರ್ಕಿಸದೆ ತೆಗೆದುಕೊಳ್ಳುವ ನೋವು ನಿವಾರಕ ಅಥವಾ ದೀರ್ಘಾವಧಿಯಲ್ಲಿನೋವು ನಿವಾರಕಗಳ ಮೇಲಿನ ಅವಲಂಬನೆ ಅಪಾಯ. ಅಂದರೆ ಆಗಾಗ ನಾವು ತೆಗೆದುಕೊಳ್ಳುವ ಸಾಮಾನ್ಯ ಮಾತ್ರೆಗಳೇ ಕಿಡ್ನಿಗೆ ವಿಷವಾಗಬಹುದು. ಕೆಲವು ನೋವು ನಿವಾರಕ ಮಾತ್ರೆಗಳು ಕಿಡ್ನಿಗೆ ಹರಿಯುವ ರಕ್ತದ ಪ್ರಮಾಣವನ್ನು ಕಡಿಮೆ ಮಾಡಿ, ತೀವ್ರ ಕಿಡ್ನಿ ಹಾನಿಗೆ ಕಾರಣವಾಗುತ್ತವೆ. ನೆಗಡಿ ಅಥವಾ ಸಣ್ಣ ಜ್ವರಕ್ಕೆ ಮನಬಂದಂತೆ ಆ್ಯಂಟಿಬಯಾಟಿP್ಸ… ಸೇವಿಸುವುದು ಕಿಡ್ನಿಯ ಒಳಭಾಗದಲ್ಲಿಉರಿಯೂತವನ್ನು ಉಂಟುಮಾಡಬಹುದು. ಸರಿಯಾದ ಪ್ರಮಾಣ ಅಥವಾ ಘಟಕಾಂಶಗಳ ಮಾಹಿತಿ ಇಲ್ಲದ ಕೆಲವು ನಾಟಿ ಔಷಧಗಳು ಕಿಡ್ನಿಯ ಮೇಲೆ ತೀವ್ರ ಪರಿಣಾಮ ಬೀರುತ್ತವೆ.
ಜಾಗೃತಿ ಅಗತ್ಯ: ಸಣ್ಣಪುಟ್ಟ ಮೈ ಕೈ ನೋವಿಗೂ ಮೆಡಿಕಲ್ ಶಾಪ್ ಗಳಲ್ಲಿಮಾತ್ರೆ ಪಡೆದು ನುಂಗುವ ಅಭ್ಯಾಸ ಬಿಡಿ. ಯಾವುದೇ ಮಾತ್ರೆ ಸೇವಿಸಿದಾಗ ದೇಹದಲ್ಲಿನೀರಿನಂಶ ಸರಿಯಾಗಿರಲಿ. ಸಣ್ಣ ನೋವುಗಳಿಗೆ ಪರ್ಯಾಯ ಮಾರ್ಗಗಳಾದ ಬಿಸಿ ನೀರು ಅಥವಾ ಐಸ್ ಪ್ಯಾಕ್ ಚಿಕಿತ್ಸೆ, ಯೋಗ ಅಥವಾ ಫಿಸಿಯೋಥೆರಪಿಯಂತಹ ಮಾರ್ಗಗಳನ್ನು ಪ್ರಯತ್ನಿಸಿ. ಮಧುಮೇಹ ಅಥವಾ ಬಿಪಿ ಇದ್ದರೆ ನಿಯಮಿತವಾಗಿ ಕಿಡ್ನಿ ಕಾರ್ಯಕ್ಷಮತೆಯ ಪರೀಕ್ಷೆ ಮಾಡಿಸಿ. ಯಾವುದೇ ಮಾತ್ರೆ ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ. ಈ ನಿಟ್ಟಿನಲ್ಲಿನೋವು ನಿವಾರಕ ಮಾತ್ರೆಗಳ ಅತಿಯಾದ ಅಥವಾ ತಪ್ಪು ಬಳಕೆಯಿಂದ ಮೂತ್ರಪಿಂಡದ ಸಮಸ್ಯೆಗಳು ಹೆಚ್ಚಾಗುತ್ತಿರುವ ಬಗ್ಗೆ ಜಾಗೃತಿ ವಹಿಸುವುದು ಮುಖ್ಯ ಎಂಬುದು ತಜ್ಞರ ಅಭಿಪ್ರಾಯ.
ಕೋಟ್
ನೋವು ನಿವಾರಕಗಳ ಅಡ್ಡ ಪರಿಣಾಮದಿಂದ ಕಿಡ್ನಿ ಸಮಸ್ಯೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ. ವೈದ್ಯರ ಸಲಹೆ ಇಲ್ಲದೆ ಅಥವಾ ವೈದ್ಯರೇ ಸೂಚಿಸಿದ್ದರೂ ಅದರ ಮೇಲಿನ ಅವಲಂಬನೆ ಬೇಡ. ಉದಾಹರಣೆಗೆ ತಲೆನೋವು ಅಂದರೆ ನೋವು ನಿವಾರಕ ಹೆಚ್ಚಾಗಿ ಸೇವಿಸುತ್ತಾರೆ. ತಲೆನೋವಿನಲ್ಲಿಹಲವು ವಿಧಗಳಿವೆ. ಆದರೆ ಅವೆಲ್ಲಕ್ಕೂ ಒಂದೇ ಮಾತ್ರೆ ನೋವು ನಿವಾರಕವಲ್ಲ. ಹರೆಯದಿಂದ ತೊಡಗಿ ವೃದ್ಧರವರೆಗೆ ಯಾರೇ ಇರಲಿ, ತಲೆನೋವು ಬಂದಾಗ ಬಿಪಿ ಪರೀಕ್ಷೆ ಮುಖ್ಯ. ರಕ್ತದೊತ್ತಡಕ್ಕೂ ನೋವಿಗೂ ಸಂಬಂಧವಿದೆ. ಹೀಗಾಗಿ ತಜ್ಞರ ಸಲಹೆ ಪಾಲಿಸಿ.
ಡಾ. ಶ್ರೀಧರ್ ಸಿ.ಜಿ. | ಕಿಡ್ನಿ ರೋಗ ತಜ್ಞ
ಬಾಕ್ಸ್
ಜೀವನಶೈಲಿ ಪಾಲಿಸಿ
ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯಿರಿ. ಇದು ವಿಷಕಾರಿ ಅಂಶಗಳನ್ನು ಹೊರಹಾಕಲು ಮತ್ತು ಕಿಡ್ನಿ ಕಲ್ಲುಗಳು ಉಂಟಾಗದಂತೆ ತಡೆಯಲು ಸಹಾಯಕ. ಅತಿ ಸಕ್ಕರೆ ಸೇವನೆಯು ಮಧುಮೇಹಕ್ಕೆ ಕಾರಣವಾಗಬಹುದು. ಇದು ಕಿಡ್ನಿ ವೈಫಲ್ಯಕ್ಕೆ ಪ್ರಮುಖ ಕಾರಣ. ಹಸಿರು ಎಲೆ ತರಕಾರಿಗಳು, ಹಣ್ಣುಗಳು ಮತ್ತು ನಾರಿನಂಶವಿರುವ ಆಹಾರ ಸೇವಿಸಿ. ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸಿ ಕಿಡ್ನಿಗಳ ಮೇಲೆ ಒತ್ತಡ ಹೇರುತ್ತದೆ. ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಉಪ್ಪು ಬಳಸಬೇಡಿ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ನಡಿಗೆ, ಯೋಗ ಅಥವಾ ವ್ಯಾಯಾಮ ಇರಲಿ. ದುಶ್ಚಟದಿಂದ ದೂರ ಇರಿ.

